Supreme Court Sentences : ಜೀನ್ಸ್ ಧರಿಸಿ ಬಂದಿದ್ದ ವಕೀಲನಿಗೆ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ !

ಯೋಗ್ಯ ಉಡುಪಿನಲ್ಲಿ ಬರುವ ಬಗ್ಗೆ ತಿಳುವಳಿಕೆ ನೀಡಿತು !

ನವದೆಹಲಿ – ವಕೀಲರು ಯೋಗ್ಯ ಉಡುಪಿನಲ್ಲಿ ನ್ಯಾಯಾಲಯಕ್ಕೆ ಬರಬೇಕು, ಎಂದು ಸರ್ವೋಚ್ಚ ನ್ಯಾಯಾಲಯವು ವಕೀಲರೊಬ್ಬರಿಗೆ ಹೇಳಿದೆ. ಗುವಾಹಟಿ ಹೈಕೋರ್ಟ್‌ನಲ್ಲಿ ಒಬ್ಬ ಹಿರಿಯ ವಕೀಲರು ಜೀನ್ಸ್ ಧರಿಸಿ ಬಂದಿದ್ದರಿಂದ ನ್ಯಾಯಮೂರ್ತಿಗಳು ಪೊಲೀಸರ ಮೂಲಕ ನ್ಯಾಯಾಲಯದಿಂದ ಹೊರಕಳಿಸಿದರು, ಹಾಗೆಯೇ ಅವರನ್ನು ಅಮಾನತುಗೊಳಿಸಿದರು. ಈ ಪ್ರಕರಣದ ಸಂಬಂಧ ವಕೀಲೆ ಬಿ.ಕೆ. ಮಹಾಜನ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಅರ್ಜಿಯಲ್ಲಿ, ನಾನು ಜೀನ್ಸ್ ಪ್ಯಾಂಟ್ ಹಾಕಿದ್ದಕ್ಕೆ ನ್ಯಾಯಾಲಯದಲ್ಲಿ ಕ್ಷಮೆ ಯಾಚಿಸಿದರೂ ಪೊಲೀಸರು ನನ್ನನ್ನು ಹೊರಗೆ ಕರೆದೊಯ್ದದ್ದೇಕೆ? ಎಂದು ತಿಳಿಸಿದ್ದಾರೆ. ಈ ಅರ್ಜಿಯ ಕುರಿತು ಸರ್ವೋಚ್ಚ ನ್ಯಾಯಾಲಯವು ವಕೀಲೆ ಮಹಾಜನ್ ಅವರಿಗೆ ಕಟುವಾದ ಮಾತುಗಳನ್ನು ಹೇಳಿದೆ. ನ್ಯಾಯಾಲಯವು, ವಕೀಲರುಗಳು ಯೋಗ್ಯ ಉಡುಪಿನಲ್ಲಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಹೇಳಿದೆ.

ಸಂಪಾದಕೀಯ ನಿಲುವು

ದೇವಸ್ಥಾನದಲ್ಲಿ ವಸ್ತ್ರಸಂಹಿತೆಯನ್ನು (ಉಡುಪಿನ ಸಂದರ್ಭದಲ್ಲಿ ನ ನಿಯಮಗಳು) ವಿರೋಧಿಸುವವರು ಈ ವಿಷಯದ ಬಗ್ಗೆ ಏನು ಹೇಳುತ್ತಾರೆ ?