Illegal Immigrant Jailed: ಬಾಂಗ್ಲಾದೇಶಿ ನುಸುಳುಕೋರ ಮಹಿಳೆಗೆ 14 ತಿಂಗಳ ಜೈಲು ಶಿಕ್ಷೆ

ಶಿಕ್ಷೆ ಮುಗಿದ ನಂತರ ಬಾಂಗ್ಲಾದೇಶಕ್ಕೆ ಕಳುಹಿಸಲಾಗುವುದು !

ಸೂರತ್ (ಗುಜರಾತ್) – ಇಲ್ಲಿ ನಕಲಿ ಆಧಾರ್ ಕಾರ್ಡ್ ತಯಾರಿಸಿ ಭಾರತೀಯ ಪೌರತ್ವ ಪಡೆಯಲು ಯತ್ನಿಸಿದ ಬಾಂಗ್ಲಾದೇಶಿ ಮಹಿಳೆ ಮಲ್ಲಿಕಾ ಸಾಕೀನ ಸರ್ದಾರ್ (ವಯಸ್ಸು 63) ಅಪರಾಧಿ ಎಂದು ಸಾಬೀತಾಗಿದ್ದು, ಅವಳಿಗೆ 14 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆ ಮುಗಿದ ನಂತರ ಆಕೆಯನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗುವುದು. ಶಿಕ್ಷೆಯ ಅವಧಿ ಹೆಚ್ಚಿಸುವಂತೆ ಉಚ್ಚನ್ಯಾಯಾಲಯದಲ್ಲಿ ಮೊರೆ ಹೋಗುವುದಾಗಿ ಸರ್ಕಾರಿ ವಕೀಲರು ಹೇಳಿದ್ದಾರೆ.

ಮಲ್ಲಿಕಾ ಮೂಲತಃ ಬಾಂಗ್ಲಾದೇಶದ ಗೋಪಾಲ್‌ಗಂಜ್ ಜಿಲ್ಲೆಯ ಸಲಾಬತ್‌ಪುರ ಪ್ರದೇಶದ ಮಂದಾರವಾಜಾ ಟೆನೆಮೆಂಟ್‌ನ ನಿವಾಸಿ ಇದ್ದಾರೆ. ಆಕೆಯಿಂದ ಬಾಂಗ್ಲಾದೇಶದ ಪಾಸ್‌ಪೋರ್ಟ್, ಭಾರತೀಯ ಆಧಾರ್ ಕಾರ್ಡ್, ಕರೋನಾ ಲಸಿಕೆಯ ಪ್ರಮಾಣಪತ್ರವೂ ಪತ್ತೆಯಾಗಿದೆ. ಅವಳು ವರ್ಷ 2020 ರಿಂದ ಸೂರತ್‌ನಲ್ಲಿ ವಾಸಿಸುತ್ತಿದ್ದಳು.

ಸಂಪಾದಕೀಯ ನಿಲುವು

ದೇಶದಲ್ಲಿ 5 ಕೋಟಿಗೂ ಹೆಚ್ಚು ಬಾಂಗ್ಲಾದೇಶಿ ನುಸುಳುಕೋರರು ವಾಸಿಸುತ್ತಿದ್ದಾರೆ ಮತ್ತು ಇದು ಪ್ರತಿದಿನ ಹೆಚ್ಚಾಗುತ್ತಿರುವಾಗ, ಒಬ್ಬ ಮಹಿಳೆಯನ್ನು ಹಿಡಿದು ಶಿಕ್ಷಿಸಿದರೆ ವಿಶೇಷ ಪರಿಣಾಮ ಬೀರುವುದಿಲ್ಲ! ಬಾಂಗ್ಲಾದೇಶಿಗಳನ್ನು ಹೊರಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಟ್ಟದಲ್ಲಿ ಯಾವುದೇ ಪ್ರಯತ್ನ ಆಗುತ್ತಿರುವುದು ಕಾಣುತ್ತಿಲ್ಲ, ಇದು ನಾಚಿಕೆಗೇಡಿನ ಸಂಗತಿ!