ವಿಶ್ವ ಚಾಂಪಿಯನ್ ಇಂಡಿಯನ್ ಕ್ರಿಕೆಟ್ ಟೀಮ್ ಗೆ ಮಾಲ್ಡೀವ್ಸ್‌ಗೆ ಭೇಟಿ ನೀಡಲು ಆಹ್ವಾನ!

ಮಾಲ್ಡೀವ್ಸ್ ಪ್ರವಾಸಿ ಸಂಘಟನೆ ಮತ್ತು ಪ್ರವಾಸಿ ಜನ ಸಂಪರ್ಕ ನಿಗಮದಿಂದ ಆಹ್ವಾನ

ಮಾಲೆ – ಮಾಲ್ಡೀವ್ಸ್ ಪ್ರವಾಸಿ ಸಂಘಟನೆ ಮತ್ತು ಪ್ರವಾಸಿ ಜನ ಸಂಪರ್ಕ ನಿಗಮವು ಟಿ20 ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಭಾರತೀಯ ಕ್ರಿಕೆಟ್ ತಂಡವನ್ನು ಮಾಲ್ಡೀವ್ಸ್‌ಗೆ ಭೇಟಿ ನೀಡುವಂತೆ ಮುಕ್ತ ಆಹ್ವಾನವನ್ನು ಕಳುಹಿಸಿದೆ.

1. ಮಾಲ್ಡೀವ್ಸ್ ಅಧ್ಯಕ್ಷ ಮಹಮ್ಮದ್ ಮುಯಿಝ್ಝೂ ಅವರ ಸಂಪುಟದ ಕೆಲವು ಸಚಿವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಈ ಹಿಂದೆ ಟೀಕಿಸಿದ್ದರು. ಪ್ರಧಾನಿ ಮೋದಿಯವರ ಟೀಕೆಯ ಬಳಿಕ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್‌ ಪ್ರವಾಸಕ್ಕೆ ಬಹಿಷ್ಕಾರ ಹಾಕಿದ್ದರು.

2. ಈ ಘೋರ ತಪ್ಪಿನಿಂದಾಗಿ ಮಾಲ್ಡೀವ್ಸ್ ಗೆ ಕಲ್ಪನೆಗಿಂತ ಹೆಚ್ಚು ಬೆಲೆ ತೆರಬೇಕಾಗಿದೆ. ಮಾಲ್ಡೀವ್ಸ್‌ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ ಸುಮಾರು ಶೇ. 40 ರಷ್ಟು ಇಳಿಕೆಯಾಗಿದ್ದು ಇದರಿಂದ ಮಾಲ್ಡೀವ್ಸ್ ಗೆ ಆರ್ಥಿಕ ಹೊಡೆತವನ್ನು ಎದುರಿಸಬೇಕಾಯಿತು.

3. ಮಾಲ್ಡೀವ್ಸ್ ಈಗ ತನ್ನ ಈ ತಪ್ಪುಗಳನ್ನು ಸರಿಪಡಿಸಲು ನಿರ್ಧರಿಸಿದೆ. ಮಾಲ್ಡೀವ್ಸ್ ಮಾರ್ಕೆಟಿಂಗ್ ಮತ್ತು ಪಬ್ಲಿಕ್ ರಿಲೇಶನ್ಸ ಕಾರ್ಪೊರೇಶನ’ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಇಬ್ರಾಹಿಂ ಶಿಯುರಿ ಮತ್ತು ಮಾಲ್ಡೀವ್ಸ್ ಪ್ರವಾಸಿ ಸಂಘಟನೆಯ ಕಾರ್ಯದರ್ಶಿ ಅಹ್ಮದ್ ನಜೀರ್ ಅವರು ಭಾರತೀಯ ಕ್ರಿಕೆಟ್ ಸಂಸ್ಥೆಯನ್ನು ಸ್ವಾಗತಿಸಲು ಉತ್ಸುಕರಾಗಿದ್ದಾರೆಂದು ಹೇಳಿದ್ದಾರೆ.

4. ‘ಈ ಆಹ್ವಾನವು ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಬಲವಾದ ದೀರ್ಘಕಾಲದ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಬಂಧಗಳ ಪ್ರತಿಬಿಂಬವಾಗಿದೆ. ಭಾರತೀಯ ಕ್ರಿಕೆಟ್ ತಂಡವನ್ನು ಸ್ವಾಗತಿಸುವುದು, ಅದರ ಗೆಲುವು ಮತ್ತು ಸಂತೋಷದಲ್ಲಿ ಸಹಭಾಗವಾಗುವುದು ಮಾಲ್ಡೀವ್ಸ್‌ಗೆ ದೊಡ್ಡ ಗೌರವವಾಗಿದೆ ಎಂದು ಇಬ್ರಾಹಿಂ ಶಿಯುರಿ ಹೇಳಿದ್ದಾರೆ.

5. ಭಾರತೀಯ ತಂಡ ಮಾಲ್ಡೀವ್ಸಗೆ ಬಂದರೆ ಅಲ್ಲಿಯ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದು. ಹೆಚ್ಚಿನ ಭಾರತೀಯ ಪ್ರವಾಸಿಗರನ್ನು ಮತ್ತೊಮ್ಮೆ ತನ್ನೆಡೆ ಸೆಳೆಯಲು ಮಾಲ್ಡೀವ್ಸ ಈ ತಂತ್ರ ಬಳಸಿದೆ.

ಸಂಪಾದಕೀಯ ನಿಲುವು

ಚೀನಾದ ತಾಳಕ್ಕೆ ತಕ್ಕಂತೆ ಕುಣಿಯುವ ಮಾಲ್ಡೀವ್ಸಗೆ ಭಾರತೀಯ ಪ್ರವಾಸಿಗರು ಬಹಿಷ್ಕಾರ ಹಾಕಿದ್ದರಿಂದ ಅದು ಭಯಭೀತವಾಗಿದ್ದು, ಆರ್ಥಿಕ ಹಿಂಜರಿತವುಂಟಾಗಿದೆಯೆಂದು ಇದರಿಂದ ಕಂಡು ಬರುತ್ತದೆ