`ತಿವ್ರ ನಿರಾಶೆ ಮತ್ತು ಶಾಂತಿಯುತ ಪ್ರಯತ್ನಗಳಿಗೆ ಒಂದು ವಿನಾಶಕಾರಿ ಆಘಾತವಂತೆ !’ – ಝೆಲೆನ್ಸ್ಕಿ

ಮೋದಿ ಮತ್ತು ಪುಟಿನ್ ಭೇಟಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಝೆಲೆನ್ಸ್ಕಿ

ಕೀವ್ (ಉಕ್ರೇನ) – ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2 ದಿನಗಳ ಕಾಲ ರಷ್ಯಾದ ಪ್ರವಾಸಕ್ಕೆ ಹೋಗಿದ್ದರು. ಅವರು ಜುಲೈ 8 ರಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿಯಾದರು. ಮೋದಿ ಮತ್ತು ಪುಟಿನ್ ಪರಸ್ಪರ ಆಲಂಗಿಸಿಕೊಂಡರು. ಈ ಕುರಿತು ಉಕ್ರೇನ ಅಧ್ಯಕ್ಷ ಝೆಲೆನ್ಸ್ಕಿ ಅವರು ‘X’ ಪೋಸ್ಟ್ ಮಾಡುವ ಮೂಲಕ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಝೆಲೆನ್ಸ್ಕಿಯವರು ತಮ್ಮ ಪೋಸ್ಟನಲ್ಲಿ, ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ನಾಯಕ(ಪ್ರಧಾನಿ ಮೋದಿಯವರು) ಮಾಸ್ಕೋದಲ್ಲಿ ಜಗತ್ತಿನ ಅತ್ಯಂತ ಭಯಾನಕ ಅಪರಾಧಿಯನ್ನು (ಪುಟಿನ್ ಇವರನ್ನು) ಆಲಂಗಿಸುವುದನ್ನು ನೋಡುವುದು ತೀವ್ರ ನಿರಾಶಾದಾಯಕ ಮತ್ತು ಶಾಂತಿಯ ಪ್ರಯತ್ನಗಳಿಗೆ ವಿನಾಶಕಾರಿ ಆಘಾತ ನೀಡುವಂತಹ ವಿಷಯವಾಗಿದೆ” ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಕೆಲವು ವರ್ಷಗಳ ಹಿಂದೆ ಉಕ್ರೇನ ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯದ ಬಗ್ಗೆ ಉಕ್ರೇನ್ ಭಾರತದ ವಿರುದ್ಧ ಮತ ಚಲಾಯಿಸಿತ್ತು. ಅದು ಕೂಡ ಭಾರತೀಯರಿಗೆ ವಿನಾಶಕಾರಿ ಆಘಾತವಾಗಿತ್ತು, ಎನ್ನುವುದನ್ನು ಕೂಡ ಝೆಲೆನ್ಸ್ಕಿಯವರು ಗಮನದಲ್ಲಿಡಬೇಕು !