33000 People Died of Pollution: ಮಾಲಿನ್ಯದಿಂದಾಗಿ ಭಾರತದ 10 ನಗರಗಳಲ್ಲಿ ಪ್ರತಿ ವರ್ಷ 33 ಸಾವಿರ ಜನರ ಸಾವು !

ನವ ದೆಹಲಿ – ‘ಲ್ಯಾನ್ಸೆಟ್’ ಜರ್ನಲ್‌ನಲ್ಲಿ ಪ್ರಸಾರವಾಗಿರುವ ವರದಿಯ ಪ್ರಕಾರ, ದೇಶದ ಶಿಮ್ಲಾ, ದೆಹಲಿ, ವಾರಣಾಸಿ, ಕೋಲಕಾತಾ, ಕರ್ಣಾವತಿ, ಮುಂಬಯಿ, ಪುಣೆ, ಭಾಗ್ಯನಗರ, ಬೆಂಗಳೂರು ಮತ್ತು ಚೆನ್ನೈ ನಗರಗಳು ಮಾಲಿನ್ಯದಿಂದ ಕೂಡಿದೆ. ಈ ನಗರಗಳಲ್ಲಿ ವಾಯುಮಾಲಿನ್ಯದಿಂದ ಶೇ.7ರಷ್ಟು ಸಾವುಗಳು ಸಂಭವಿಸುತ್ತಿರುವುದು ಬಹಿರಂಗವಾಗಿದೆ. ಇದರರ್ಥ ವಾಯು ಮಾಲಿನ್ಯದಿಂದಾಗಿ ಈ ನಗರಗಳಲ್ಲಿ 2008 ರಿಂದ 2019 ರ ನಡುವೆ ಪ್ರತಿ ವರ್ಷ 33 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಅವಧಿಯಲ್ಲಿ ಈ ನಗರಗಳಲ್ಲಿ ನೊಂದಾಯಿಸಿರುವ ಒಟ್ಟು ಸಾವಿನ ಸಂಖ್ಯೆಯಲ್ಲಿ ಈ ಸಂಖ್ಯೆ ಶೇ. 7.2 ರಷ್ಟಿದೆ.

ಸಂಪಾದಕೀಯ ನಿಲುವು

ಹವಾಮಾನ ಮಾಲಿನ್ಯದ ಪರಿಸ್ಥಿತಿಯ ಬಗ್ಗೆ ಆಡಳಿತದವರಿಗೆ ತಿಳಿದಿಲ್ಲವೇ? ಇಷ್ಟು ಗಂಭೀರ ಪರಿಸ್ಥಿತಿಯಿರುವಾಗ ಈ ವಿಷಯದಲ್ಲಿ ಆಡಳಿತದವರು ಏನೂ ಮಾಡುವುದಿಲ್ಲ, ಹಾಗೂ ಜನತೆಯು ಅವರಿಗೆ ಈ ವಿಷಯದಲ್ಲಿ ಪ್ರಶ್ನಿಸುವುದೂ ಇಲ್ಲ ! ಈ ಪರಿಸ್ಥಿತಿ ಭಾರತೀಯರಿಗೆ ನಾಚಿಕೆಗೇಡಿನ ಸಂಗತಿ !