ಉತ್ತರಾಖಂಡ ಸರ್ಕಾರಕ್ಕೆ ಉತ್ತರಾಖಂಡ ಹೈಕೋರ್ಟ್‌ನ ಪ್ರಶ್ನೆ !
ನೈನಿತಾಲ್ (ಉತ್ತರಾಖಂಡ) – ‘ಅಪ್ರಾಪ್ತ ಹುಡುಗ ಮತ್ತು ಹುಡುಗಿ ‘ಡೇಟ್’ಗೆ ಹೋಗುತ್ತಿದ್ದರೆ (ಪ್ರೀತಿ ಸಂಬಂಧ ನಿರ್ಮಾಣಮಾಡಲು ವ್ಯಕ್ತಿಯೊಂದಿಗೆ ಸಮಯ ಕಳೆಯುವುದು) ಮತ್ತು ಬಾಲಕಿಯ ಪೋಷಕರು ದೂರು ನೀಡಿದರೆ, ಅಪ್ರಾಪ್ತರನ್ನು ಮಾತ್ರ ಏಕೆ ಬಂಧಿಸಲಾಗುತ್ತದೆ?’ ಎಂದು ಉತ್ತರಾಖಂಡ್ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಕೇಳಿದೆ. ಇಂತಹ ಪ್ರಕರಣಗಳಲ್ಲಿ ಹುಡುಗರ ವಿರುದ್ಧ ಮಾತ್ರ ಪೊಲೀಸರು ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಪ್ರಶ್ನೆ ಕೇಳಿದೆ. ವಕೀಲ ಮನೀಷ್ ಭಂಡಾರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಈ ಪ್ರಶ್ನೆಯನ್ನು ಕೇಳಿದೆ.
ಮಕ್ಕಳನ್ನು ಬಂಧಿಸದೆ ಬುದ್ಧಿವಾದ ಹೇಳಿ ಬಿಟ್ಟುಬಿಡಿ !
ಉಚ್ಚ ನ್ಯಾಯಾಲಯವು, ಕೇವಲ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 161 ರ ಅಡಿಯಲ್ಲಿ ಹೇಳಿಕೆ ನೊಂದಾಯಿಸುವುದು, ಇದು ಹುಡುಗನಿಗೆ ಬಂಧಿಸದಿರಲು ಸಾಕಾಗುತ್ತದೆಯೇ ? ಹುಡುಗನನ್ನು ಬಂಧಿಸುವುದು ಅಗತ್ಯ ಇದೆಯೇ ? ಅಂತಹ ಸಂದರ್ಭದಲ್ಲಿ ಸಂಬಂಧಪಟ್ಟ ಹುಡುಗನನ್ನು ಪೊಲೀಸ್ ಠಾಣೆಗೆ ಕರೆಸಿ ‘ಇನ್ನು ಮುಂದೆ ಇಂತಹ ಕೃತ್ಯ ಮಾಡಬೇಡಿ’ ಎಂಬ ಕೇವಲ ತಿಳುವಳಿಕೆ ನಿಡಿ ಬಿಡುಗಡೆ ಮಾಡಬಹುದು; ಆದರೆ ಆತನನ್ನು ಬಂಧಿಸಬಾರದು. ರಾಜ್ಯ ಸರ್ಕಾರವು ಅಂತಹ ಪ್ರಕರಣಗಳನ್ನು ತನಿಖೆ ಮಾಡಬಹುದು ಮತ್ತು ಪೊಲೀಸ್ ಇಲಾಖೆಗೆ ಸಾಮಾನ್ಯ ಆದೇಶಗಳನ್ನು ನೀಡಬಹುದು ಎಂದು ನ್ಯಾಯಾಲಯ ನಿರ್ದೇಶಿಸಿದೆ. ವಕೀಲ ಮನಿಷ ಭಂಡಾರಿ ಇವರು ಅರ್ಜಿಯಲ್ಲಿ, ಒಪ್ಪಿಗೆಯ ಮೇರೆಗೆ ದೈಹಿಕ ಸಂಬಂಧದಲ್ಲಿಯೂ ಹೆಣ್ಣು ಮಕ್ಕಳನ್ನು ಸಂತ್ರಸ್ತೆ ಎಂದು ನೋಡಲಾಗುತ್ತದೆ. ಮತ್ತೊಂದೆಡೆ, ಮಕ್ಕಳನ್ನು ಆರೋಪಿಸಿ ಜೈಲಿಗೆ ತಳ್ಳಲಾಗುತ್ತದೆ. ನಾವು ಇತ್ತೀಚೆಗೆ ಹಲ್ದ್ವಾನಿಯಲ್ಲಿ ಇಂತಹ 20 ಯುವಕರನ್ನು ಭೇಟಿ ಮಾಡಿದ್ದೇವೆ ಎಂದು ಮನಿಶಾ ಭಂಡಾರಿ ಮುಖ್ಯ ನ್ಯಾಯಮೂರ್ತಿಗಳ ಮುಂದೆ ದಾವೆ ಮಾಡಿದ್ದಾರೆ.