ಸ್ವಾಮಿಗಳು ರಾಜಕೀಯ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದು ಯೋಗ್ಯವಲ್ಲ: ಕಾಂಗ್ರೆಸ್

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ರಾಹುಲ್ ಗಾಂಧಿಯವರನ್ನು ಟೀಕಿಸಿರುವ ಪ್ರಕರಣ

ಬೆಂಗಳೂರು – ರಾಹುಲ್ ಗಾಂಧಿಯವರು ಹಿಂದೂಗಳನ್ನು ‘ಹಿಂಸಾಚಾರಿಗಳು’ ಎಂದು ಹೇಳಿದ್ದಕ್ಕೆ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (ಪೇಜಾವರ ಸ್ವಾಮಿ)ಯವರು ರಾಹುಲ್ ಅವರನ್ನು ಟೀಕಿಸಿದ್ದರು. ಇದರಿಂದ ಕುಪಿತಗೊಂಡ ಕಾಂಗ್ರೆಸ್ ತನ್ನ ಅಧಿಕೃತ ಖಾತೆಯಲ್ಲಿ ಪೇಜಾವರ ಸ್ವಾಮಿಯನ್ನು ಅಸಭ್ಯವಾಗಿ ಟೀಕಿಸಿದೆ. ‘ನಮಗೆ ಸ್ವಾಮೀಜಿ ಬಗ್ಗೆ ಗೌರವವಿದೆ; ಆದರೆ ರಾಜಕೀಯ ವಿಷಯದಲ್ಲಿ ಮೂಗು ತೂರಿಸುವುದು ಮತ್ತು ಕಾಂಗ್ರೆಸ್ ನಾಯಕರನ್ನು ಅನಗತ್ಯವಾಗಿ ಟೀಕಿಸುವುದು ಅವರ ಸ್ಥಾನಕ್ಕೆ ಶೋಭಿಸುವುದಿಲ್ಲ. ಪೇಜಾವರ ಸ್ವಾಮೀಜಿಯವರು ಇಡೀ ಹಿಂದೂ ಸಮುದಾಯದ ಪ್ರತಿನಿಧಿಯಲ್ಲ’ ಎಂದು ಕಾಂಗ್ರೆಸ್ ಟೀಕಿಸಿದೆ.

ಕಾಂಗ್ರೆಸ್ ತನ್ನ ಪೋಸ್ಟ್ ನಲ್ಲಿ, ‘ಹಿಂದೂ ಧರ್ಮದ ಗುತ್ತಿಗೆಯನ್ನು ಬಿಜೆಪಿ ಅಥವಾ ರಾಷ್ಟ್ರೀಯ ಸ್ವಯಂಸಂಘಕ್ಕೆ ನೀಡಿಲ್ಲ. ಬಿಜೆಪಿ ಎಂದರೆ ಇಡೀ ಹಿಂದೂ ಸಮಾಜವಲ್ಲ. (ತನ್ನ ನರ-ನರಗಳಲ್ಲಿ ಹಿಂದೂ ದ್ವೇಷವನ್ನು ತುಂಬಿಕೊಂಡಿರುವ ಕಾಂಗ್ರೆಸ್‌ಗೆ ಹಿಂದೂಗಳ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಹಿಂದೂಗಳು ಗಟ್ಟಿಯಾಗಿ ಹೇಳಬೇಕು! – ಸಂಪಾದಕರು) ಸ್ವಾಮೀಜಿ ರಾಜಕೀಯದಲ್ಲಿ ಆಸಕ್ತಿ ತೋರಿಸುವುದಕ್ಕಿಂತ ಸಾಮಾಜಿಕ ಐಕ್ಯತೆ ಕಾಪಾಡಲು ಪ್ರಯತ್ನಿಸಬೇಕು’ ಎಂದಿದೆ. (ಸ್ವತಃ ಸಮಾಜ ವಿರೋಧಿ ಭಾಷಣಗಳನ್ನು ಮಾಡಿ ಸಮಾಜವನ್ನು ಕಲುಷಿತಗೊಳಿಸುವುದಲ್ಲದೇ ಹಿಂದೂ ಸಂತರು ಏನು ಮಾಡಬೇಕು ಎಂದು ಉಪದೇಶ ಮಾಡುವ ಕಾಂಗ್ರೆಸ್‌ನ ಹಿಂದೆ ಇಡೀ ಹಿಂದೂ ವಿರೋಧಿಗಳ ತಂಡವಿದ್ದರೂ ಸಹ ಅವರಿಗೆ ಅಧಿಕಾರ ಸಿಗಲಿಲ್ಲ, ಇದೇ ಎಲ್ಲವನ್ನು ಸ್ಪಷ್ಟಪಡಿಸುತ್ತದೆ ! – ಸಂಪಾದಕರು)

ಪೇಜಾವರ ಸ್ವಾಮೀಜಿಯವರು ಹೇಳಿದ್ದೇನು?

ಕರ್ನಾಟಕದ ವಿಜಯಪುರದಲ್ಲಿ ಮಾತನಾಡಿದ ಪೇಜಾವರ ಸ್ವಾಮೀಜಿಯವರು ‘ಸಹಿಷ್ಣುತೆ ಇರುವವರನ್ನು ಕೀಟಲೆ ಮಾಡುವುದು ಮತ್ತು ಅವರ ಸಹನೆ ಭಂಗ ಮಾಡುವುದು ಕೆಲವರಿಗೆ ಅಭ್ಯಾಸವಾಗಿದೆ. ಸಹಿಷ್ಣುಗಳನ್ನು ಕೀಟಲೆ ಮಾಡಿ ಗೊಂದಲ ನಿರ್ಮಾಣ ಮಾಡುವುದು ಮತ್ತು ಅದರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ದುರುದ್ದೇಶ ಅವರಲ್ಲಿದೆ’ ಎಂದಿದ್ದರು.

ಸಂಪಾದಕೀಯ ನಿಲುವು

ಹಿಂದೂ ಧರ್ಮಶಾಸ್ತ್ರಾನುಸಾರ ರಾಜ್ಯಆಡಳಿತವು ಧರ್ಮದ ಅಧೀನದಲ್ಲಿರುತ್ತದೆ. ಒಂದು ವೇಳೆ ರಾಜಕಾರಣಿಗಳು ಏನಾದರೂ ತಪ್ಪು ಮಾಡಿದರೆ ಮತ್ತು ಅದಕ್ಕೆ ಹಿಂದೂ ಸಂತರು ಅವರ ಕಿವಿ ಹಿಂಡಿದರೆ ಅದರಲ್ಲಿ ತಪ್ಪೇನು? ಕಾಂಗ್ರೆಸ್ ನ ದುರಹಂಕಾರದ ಧೋರಣೆ ಇದರಿಂದ ಕಂಡುಬರುತ್ತದೆ !