Hindu Gather at Vishalgad Fort: ಅತಿಕ್ರಮಣವನ್ನು ತೆಗೆದುಹಾಕಲು ಸಾವಿರಾರು ಶಿವಾಜಿ ಮಹಾರಾಜ ಪ್ರೇಮಿಗಳು ವಿಶಾಲಗಡದ ತಳದಲ್ಲಿ ಮಹಾಆರತಿ !

ವಿಶಾಲಗಡದಲ್ಲಿ ಇರುವ ಹ.ಭ.ಪ. ಶಿರೀಷ್ ಮಹಾರಾಜ್ ಮೋರೆ ಹಾಗೂ ಶಿವಾಜಿ ಮಹಾರಾಜ ಪ್ರೇಮಿಗಳು

ಕೊಲ್ಹಾಪುರ – ವಿಶಾಲಗಡವನ್ನು ಕೂಡಲೇ ಅತಿಕ್ರಮಣದಿಂದ ಮುಕ್ತಗೊಳಿಸಬೇಕು, ಈ ಬೇಡಿಕೆಗಾಗಿ ವಿಶಾಲಗಡದ ತಳದಲ್ಲಿ ಸಾವಿರಾರು ಶಿವಾಜಿ ಮಹಾರಾಜ ಪ್ರೇಮಿಗಳು ಶ್ರೀ ವಾಘಝೈ ದೇವಿಯ ಮಹಾಆರತಿ ಮಾಡಿದರು. ಧಾರಾಕಾರ ಮಳೆಯಲ್ಲಿಯೇ ವಿಶಾಲಗಢದಲ್ಲಿ ಸಾವಿರಾರು ಶಿವಾಜಿ ಮಹಾರಾಜ ಪ್ರೇಮಿಗಳು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಶಿವಾಜಿ ಮಹಾರಾಜ ಪ್ರೇಮಿಗಳು ‘ಮುಕ್ತ ಕರಾ-ಮುಕ್ತ ಕರಾ ವಿಶಾಲಗಡ ಮುಕ್ತ ಕರಾ’ (ಮುಕ್ತಗೊಳಿಸಿ ಮುಕ್ತ ಗೊಳಿಸಿ ವಿಶಾಲಗಡ ಮುಕ್ತಗೊಳಿಸಿ), ‘ಆಯಿ ಭವಾನಿ ಶಕ್ತಿ ದೇ-ವಿಶಾಲಗಡಾಲಾ ಮುಕ್ತಿ ದೇ’(ತಾಯಿ ಭವಾನಿ ಮಾತೆ ಶಕ್ತಿ ನೀಡು ವಿಶಾಲಗಡಕ್ಕೆ ಮುಕ್ತಿ ನೀಡು), ಎಂಬ ಘೋಷಣೆಗಳನ್ನು ಕೂಗಿದರು. ಸಕಲ ಹಿಂದೂ ಸಮಾಜ, ಹಿಂದುತ್ವನಿಷ್ಠ ಸಂಘಟನೆ ಹಾಗೂ ಜಗದ್ಗುರು ಸಂತ ತುಕಾರಾಂ ಮಹಾರಾಜರ ವಂಶಸ್ಥರಾದ ಹ.ಭ.ಪ.ದ ಶಿರೀಶ ಮಹಾರಾಜ್ ಮೋರೆ ನೇತೃತ್ವದಲ್ಲಿ ಈ ಆಂದೋಲನವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ್ ಬಂದೊಬಸ್ತು ಮಾಡಲಾಗಿತ್ತು. ಈ ಸಮಯದಲ್ಲಿ ಹಿಂದೂ ಏಕತಾ ಆಂದೋಲನದ ಕೊಲ್ಹಾಪುರ ಜಿಲ್ಲಾಧ್ಯಕ್ಷ ಶ್ರೀ. ದೀಪಕ ದೇಸಾಯಿ, ಭ್ರಷ್ಟಾಚಾರ ವಿರೋಧಿ ಜಾಗೃತಿ ಸಮಿತಿ ಪ್ರಾಂತೀಯ ಉಪಾಧ್ಯಕ್ಷ ಶ್ರೀ. ಆನಂದರಾವ್ ಪಾವಳ, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ ಶ್ರೀ. ಕುಂದನ್ ಪಾಟೀಲ್, ಧರ್ಮ ಪ್ರೇಮಿ ಶ್ರೀ. ರಾಮಭಾವು ಮೇಥೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಶ್ರೀ. ಅನಿರುದ್ಧ ಕೊಲ್ಹಾಪುರೆ ಸಹಿತ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ವಿಶಾಲಗಡವು ಪುರಾತತ್ವ ಇಲಾಖೆಗೆ ಒಳಪಟ್ಟಿರುವಾಗಲೂ ಅತಿಕ್ರಮಣ ಹೇಗಾಯಿತು ? – ಹ.ಭ.ಪ. ಶಿರೀಶ ಮಹಾರಾಜ ಮೊರೆ

ರಾಜ್ಯದ ಪುರಾತತ್ವ ಇಲಾಖೆಗೆ ಒಳಪಡುವ ರಾಜಗಡ ಮತ್ತು ರಾಯಗಡದಿಂದ ಒಂದು ಕಲ್ಲನ್ನು ಕೂಡ ಸ್ಥಳಾಂತರಿಸಬೇಕಿದ್ದರೇ ಹಲವು ಅನುಮತಿಗಳನ್ನು ಪಡೆಯಬೇಕಾಗುತ್ತದೆ. ಮತ್ತೊಂದೆಡೆ, ಇದೇ ಪುರಾತತ್ವ ಇಲಾಖೆಯಡಿಯಲ್ಲಿರುವ ವಿಶಾಲಗಡದಲ್ಲಿ 156 ಅತಿಕ್ರಮಣಗಳು ಹೇಗೆ ಇವೆ? ಅದು ಆಗುವವರೆಗೆ ಇಲಾಖೆ ಏನು ಮಾಡುತ್ತದೆ? ರೆಹಾನ್ ಮಲಿಕ್ ದರ್ಗಾ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಅತಿಕ್ರಮಣ ಹೇಗೆ ನಡೆಯುತ್ತಿದೆ? ಮತ್ತು ಮೇಲೆ ಉಳಿಯಲು ಕೊಠಡಿಗಳು ಹೇಗೆ ಮಾಡಲಾಗಿದೆ ? ಈ ಸಂದರ್ಭದಲ್ಲಿ ಹೀಗೊಂದು ಪ್ರಶ್ನೆ ಹ.ಭ. ಶಿರೀಶ ಮಹಾರಾಜ್ ಮೋರೆ ಇವರು ಎಲ್ಲಾ ಶಿವ ಪ್ರೇಮಿಗಳ ಸಮ್ಮುಖದಲ್ಲಿ ಮಾತನಾಡುವಾಗ ಕೇಳಿದರು.

ಸಂಪಾದಕೀಯ ನಿಲುವು

ವಿಶಾಲಗಡದ ಅತಿಕ್ರಮಣವನ್ನು ತೆಗೆಯಲು ಶಿವಭಕ್ತರು ಮಹಾ ಆರತಿ ಮಾಡಬೇಕಾಗುತ್ತದೆ, ಇದು ಆಡಳಿತ ಮತ್ತು ಪೊಲೀಸರಿಗೆ ನಾಚಿಕೆಗೇಡು !