ಮಧ್ಯಪ್ರದೇಶದಲ್ಲಿನ ಮದರಸಾಗಳಿಗೆ ಭಾನುವಾರದ ಬದಲು ಶುಕ್ರವಾರ ರಜೆ !

೯ ಸಾವಿರ ಹಿಂದುಗಳು ಮದರಸಾದಲ್ಲಿ ಶಿಕ್ಷಣ ಪಡೆಯುತ್ತಿವೆ

ಭೋಪಾಲ (ಮಧ್ಯಪ್ರದೇಶ) – ಮಧ್ಯಪ್ರದೇಶ ಮಕ್ಕಳ ಆಯೋಗದ ಸದಸ್ಯೆ ನಿವೇದಿತಾ ಶರ್ಮಾ ಇವರು ಶ್ಯೋಪುರು ಕಲಾನ್ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಿದಾಗ ಇಲ್ಲಿಯ ಮದರಸಾ ಸಂಚಾಲಕ ಸ್ವೇಚ್ಛೆಯಿಂದ ವರ್ತಿಸುವುದು ಕಂಡು ಬಂದಿದೆ. ಮದರಸಾಗಳಿಗೆ ಭಾನುವಾರದ ಬದಲು ಶುಕ್ರವಾರ ರಜೆ ನೀಡಲಾಗುತ್ತಿದೆ, ಹಾಗೂ ಭಾನುವಾರ ಮದರಸಾ ತೆರೆದಿರುತ್ತದೆ. ಮಕ್ಕಳ ಆಯೋಗದಿಂದ ಮದರಸಾದ ಸ್ವೇಚ್ಛೆಯ ವರ್ತನೆಯ ಬಗ್ಗೆ ಆಕ್ಷೇಪಿಸಲಾಗಿದೆ. ಮಧ್ಯಪ್ರದೇಶದಲ್ಲಿ ಸುಮಾರು ಒಂದುವರೆ ಸಾವಿರ ಮದರಸಾಗಳು ಸರಕಾರದ ಜೊತೆಗೆ ಸಂಬಂಧಿತವಾಗಿವೆ. ಅವುಗಳಿಗೆ ಅನುದಾನ ಕೂಡ ದೊರೆಯುತ್ತದೆ. ಆಶ್ಚರ್ಯದ ವಿಷಯವೆಂದರೆ ರಾಷ್ಟ್ರೀಯ ಮಕ್ಕಳ ರಕ್ಷಣಾ ಅಧಿಕಾರ ಆಯೋಗದ ವರದಿಯ ಪ್ರಕಾರ ರಾಜ್ಯದಲ್ಲಿನ ಮದರಸಾಗಳಲ್ಲಿ ಸರಿ ಸುಮಾರು ೯ ಸಾವಿರ ಹಿಂದೂ ಮಕ್ಕಳು ಶಿಕ್ಷಣ ಪಡೆಯುತ್ತಾರೆ. (ಹಿಂದೂ ಪೋಷಕರು ಸ್ವಂತ ಮಕ್ಕಳನ್ನು ಮದರಸಾಗೆ ಕಳುಹಿಸಿ ಹಾನಿ ಮಾಡಿಕೊಳ್ಳುತ್ತಿದ್ದಾರೆ ! – ಸಂಪಾದಕರು)

೧. ಮದರಸಾಗಳಲ್ಲಿ ಮುಸಲ್ಮಾನರ ಜೊತೆಗೆ ಹಿಂದೂ ಮಕ್ಕಳು ಕೂಡ ಶಿಕ್ಷಣ ಪಡೆಯುತ್ತಿದ್ದರೂ ಮದರಸಾ ಸಂಚಾಲಕರು ಸರಕಾರದ ನಿಯಮವನ್ನು ನಿರ್ಲಕ್ಷಿಸಿ ಶುಕ್ರವಾರದ ರಜೆ ಘೋಷಿಸಿದ್ದಾರೆ. ಭಾನುವಾರ ಸರಕಾರಿ ರಜೆಯ ದಿನ ಮದರಸಾ ತೆರೆದಿರುತ್ತದೆ. ಮದರಸಾದಲ್ಲಿನ ಹಿಂದೂ ಹುಡುಗರ ಒಳ್ಳೆಯ ಭವಿಷ್ಯ ರೂಪಿಸುವುದರ ಕುರಿತು ದಾವೇ ಮಾಡುತ್ತಿದ್ದುರೂ ಹಿಂದೂ ಹುಡುಗರ ಶಿಕ್ಷಣದ ಜೊತೆಗೆ ಅವರಿಗೆ ಯಾವುದೇ ಅನುಕಂಪವಿಲ್ಲ, ಇದು ಬೆಳಕಿಗೆ ಬಂದಿದೆ. ಆಶ್ಚರ್ಯದ ವಿಷಯವೆಂದರೆ ಮದರಸಾಗಳಲ್ಲಿ ಯಾವುದೇ ಮಹಾಪುರುಷರ ಛಾಯಾಚಿತ್ರಗಳು ಎಲ್ಲಿಯೂ ಕಾಣುವುದಿಲ್ಲ.

೨. ಮಧ್ಯಪ್ರದೇಶದ ಮದರಸಾಗಳಲ್ಲಿನ ಸ್ವೆಚ್ಚೆಯ ವರ್ತನೆ ಸಹಿಸಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಉದಯ ಪ್ರತಾಪಸಿಂಹ ಇವರು ಹೇಳಿದ್ದಾರೆ. ಅವರು, ಮದರಸಾಗಳಿಗೆ ಶಾಲೆಯ ಶಿಕ್ಷಣ ಇಲಾಖೆಯ ಮಾರ್ಗಸೂಚಿಗಳು ಪಾಲಿಸಬೇಕಾಗುವುದು. ಮಧ್ಯಪ್ರದೇಶದಲ್ಲಿ ಯಾರೇ ತಮ್ಮ ಇಚ್ಛೆಗೆ ಅನುಸಾರ ರಜೆ ನೀಡಲು ಸಾಧ್ಯವಿಲ್ಲ. ಸರಕಾರಿ ರಜೆ ಭಾನುವಾರ ಇರುವುದು ಅದೇ ದಿನ ರಜೆ ನೀಡಬೇಕಾಗುವುದು. ನಿಯಮ ಮತ್ತು ಕಾನೂನು ಎಲ್ಲರಿಗೂ ಸಮಾನವಾಗಿರುತ್ತದೆ. ಪ್ರತಿಯೊಬ್ಬರೂ ಅದರ ಪಾಲನೆ ಮಾಡಬೇಕು, ಇಲಾಖೆ ಈ ಸಂಪೂರ್ಣ ಪ್ರಕರಣದ ಬಗ್ಗೆ ವಿಚಾರಣೆ ನಡೆಸುವುದು, ಎಂದು ಹೇಳಿದರು. (ಸರಕಾರವು ಇಂತಹ ಮದರಸಾಗಳ ಮೇಲೆ ಕ್ರಮ ಕೈಗೊಳ್ಳಬೇಕು. ಅವರಿಗೆ ನೀಡುವ ಅನುದಾನ ನಿಲ್ಲಿಸಬೇಕು, ಆಗ ಮಾತ್ರ ಏನಾದರೂ ಪರಿಣಾಮ ಬೀರುವುದು ! – ಸಂಪಾದಕರು)

೩. ಕಾಂಗ್ರೆಸ್ಸಿನ ಶಾಸಕ ಮತ್ತು ಮಾಜಿ ಸಚಿವ ಲಖನ ಘಂಘೋರಿಯಾ ಮದರಸಾದ ಪ್ರಕರಣದ ಕುರಿತು ಮಾತನಾಡಿ, ಪ್ರತಿಯೊಬ್ಬರಿಗೂ ನಿರ್ಣಯ ತೆಗೆದುಕೊಳ್ಳುವ ಸ್ವಾತಂತ್ರ್ಯವಿದೆ ಎಂದು ಹೇಳಿದರು. (ಕಾಂಗ್ರೆಸ್ಸಿನ ಮುಸಲ್ಮಾನ ಪ್ರೇಮ! ಇಂತಹ ಮುಸಲ್ಮಾನ ಪ್ರೇಮಿ ಕಾಂಗ್ರೆಸ್ಸಿಗರಿಗೆ ಹಿಂದುಗಳು ಮತ ನೀಡುತ್ತಾರೆ ಮತ್ತು ಹಾನಿ ಮಾಡಿಸಿಕೊಳ್ಳುತ್ತಾರೆ! – ಸಂಪಾದಕರು)

ಮದರಸಾಗಳಲ್ಲಿ ದೇಶದ್ರೋಹದ ಚಟುವಟಿಕೆ ನಡೆಯುತ್ತದೆ ! – ಭಾಜಪದ ಶಾಸಕಿ ಉಷಾ ಠಾಕೂರ

ಭಾಜಪದ ಶಾಸಕರಿಗೆ ಇದು ತಿಳಿದಿದೆ, ಹಾಗಾದರೆ ಅವರು ಸರಕಾರದ ಮೇಲೆ ಒತ್ತಡ ಹೇರಿ ಮದರಸಾಗಳನ್ನು ಮುಚ್ಚಿವುದಕ್ಕಾಗಿ ಪ್ರಯತ್ನಿಸಬೇಕು, ಎಂದು ಹಿಂದುಗಳಿಗೆ ಅನಿಸುತ್ತದೆ !

ಮದರಸಾಗಳಲ್ಲಿ ದೇಶದ್ರೋಹದ ಕಾರ್ಯ ನಡೆಯುತ್ತದೆ. ಅಸ್ಸಾಂ ಮತ್ತು ಜಮ್ಮು-ಕಾಶ್ಮೀರ ರಾಜ್ಯಗಳಲ್ಲಿ ಏನು ನಡೆಯುತ್ತಿದೆ, ಇದನ್ನು ನೀವು ನೋಡಿದ್ದೀರಿ. ಆಧುನಿಕ ತಾಂತ್ರಿಕಶಿಕ್ಷಣದ ಯುಗದಲ್ಲಿ ಮದರಸಾಗಳನ್ನು ಶಿಕ್ಷಣದ ಜೊತೆಗೆ ಜೋಡಿಸುವುದು ಅತ್ಯಂತ ಆವಶ್ಯಕವಾಗಿದೆ. ಅನೇಕ ಮದರಸಾಗಳು ಶಿಕ್ಷಣ ಇಲಾಖೆಯ ಅನುಮತಿ ಇಲ್ಲದೆ ನಡೆಯುತ್ತಿವೆ. ಒಂದು ಚಿಕ್ಕ ಕೋಣೆಯಲ್ಲಿಯೇ ೩೦ ರಿಂದ ೪೦ ಮಕ್ಕಳು ಅಭ್ಯಾಸ ಮಾಡುತ್ತಾರೆ. ಇದರಿಂದ ಮಾನವ ಕಳ್ಳ ಸಾಗಾಣಿಕೆಯ ಸಾಧ್ಯತೆಗಳು ಕೂಡ ಹೆಚ್ಚುತ್ತವೆ, ಇದರ ಬಗ್ಗೆ ಸರಕಾರ ಜಾಗರೂಕವಾಗಿದೆ.

ಸಂಪಾದಕೀಯ ನಿಲುವು

ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಮತ್ತು ಮದರಸಾಗಳಿಗೆ ಸರಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನ ನೀಡಲಾಗುತ್ತಿರುವಾಗ ಸರಕಾರ ಇದನ್ನು ಹೇಗೆ ಗಮನಿಸುತ್ತಿಲ್ಲ ?

ಮೂಲತಃ ಜಾತ್ಯತೀತ ದೇಶದಲ್ಲಿ ಧರ್ಮದ ಶಿಕ್ಷಣ ನೀಡುವ ಮದರಸಾಗಳಿಗೆ ಸರಕಾರ ಅನುದಾನ ಹೇಗೆ ನೀಡುತ್ತಿದೆ ?