Jagannath Chariot Firing : ಇಂಫಾಲ (ಮಣಿಪುರ) : ಭಗವಾನ್ ಜಗನ್ನಾಥನ ಯಾತ್ರೆಗಾಗಿ ತಯಾರಿಸುತ್ತಿದ್ದ ರಥದ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ!

ಇಂಫಾಲ (ಮಣಿಪುರ) – ಜುಲೈ 4 ರ ರಾತ್ರಿ ಭಗವಾನ್ ಜಗನ್ನಾಥ ದೇವರ ಯಾತ್ರೆಗಾಗಿ ತಯಾರಿಸಲಾಗುತ್ತಿದ್ದ ರಥದ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಇಂಫಾಲದ ಸಾನಾ ಕೊನುಂಗ್ ಬಳಿ ಈ ಘಟನೆ ನಡೆದಿದ್ದು ಈ ದಾಳಿಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಈ ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜುಲೈ 8ರಂದು ರಥಯಾತ್ರೆ ಆರಂಭವಾಗಲಿದ್ದು ಅದಕ್ಕಾಗಿ ಈ ರಥವನ್ನು ತಯಾರಿಸಲಾಗುತ್ತಿದೆ. ರಥದ ಮೇಲೆ ಗುಂಡಿನ ದಾಳಿಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ.

ಇಂಫಾಲದಲ್ಲಿಯ ಈ ರಥ ಯಾತ್ರೆಯು ರಾಜ್ಯದ ಮಹತ್ವದ ಉತ್ಸವಗಳಲ್ಲಿ ಒಂದಾಗಿದೆ. ಈ ಉತ್ಸವವು 10 ದಿನಗಳ ಕಾಲ ನಡೆಯುತ್ತದೆ. ಈ ರಥಯಾತ್ರೆಯು ಒಡಿಶಾದ ಪುರಿಯಲ್ಲಿರುವ ಜಗನ್ನಾಥ ರಥಯಾತ್ರೆಯನ್ನು ಹೋಲುತ್ತದೆ. ಈ ರಥ ಯಾತ್ರೆಯಲ್ಲಿ ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಸುಭದ್ರ ರಥದ ಮೇಲೆ ವಿರಾಜಮಾನರಾಗಿರುತ್ತಾರೆ. ಸುಮಾರು 20 ಅಡಿ ಎತ್ತರವಿರುವ ಈ ರಥವನ್ನು ಭಕ್ತರು ಕೈಯಿಂದ ಎಳೆಯುತ್ತಾರೆ.

ಸಂಪಾದಕೀಯ ನಿಲುವು

ಮಣಿಪುರದಲ್ಲಿ ಕಳೆದ ಒಂದೂವರೆ ವರ್ಷಗಳಿಗೂ ಅಧಿಕ ಕಾಲದಿಂದ ಮೈತೇಯಿ ಹಿಂದೂ ಮತ್ತು ಕುಕಿ ಕ್ರಿಶ್ಚಿಯನ್ನರ ನಡುವೆ ನಡೆಯುತ್ತಿರುವ ಹಿಂಸಾಚಾರವೇ ಈ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ!