Promise by Nishikant Dubey: ಮುಸ್ಲಿಮರಿಂದ ತೊಂದರೆಗೊಳಗಾದ ಹಿಂದೂ ಸಂತ್ರಸ್ತರಿಗೆ ‘ನಮೋ ಭವನ’ ನಿರ್ಮಾಣ !

  • ಜಾರ್ಖಂಡ್‌ನ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಇವರ ಘೋಷಣೆ!

  • ಸಂತಾಲ್ ಪರಗಣದಿಂದ ಬಾಂಗ್ಲಾದೇಶಿ ಒಳನುಸುಳುಕೋರರನ್ನು ಹೊರಹಾಕುವ ಬಗ್ಗೆ ಹೇಳಿಕೆ ನೀಡಿದರು !

ರಾಂಚಿ (ಜಾರ್ಖಂಡ್) – ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಶೇಕಡ 60 ಕ್ಕಿಂತ ಹೆಚ್ಚು ಮತಗಳನ್ನು ಪಡೆಯುವಲ್ಲಿ, 50 ಲಕ್ಷದಿಂದ 1 ಕೋಟಿ ರೂಪಾಯಿ ವೆಚ್ಚದಲ್ಲಿ ‘ನಮೋ ಭವನ’ ನಿರ್ಮಿಸಲಾಗುವುದು. ಅದೇ ರೀತಿ ಮುಸ್ಲಿಮರಿಂದ ತೊಂದರೆಗೊಳಗಾದ ಹಿಂದೂಗಳಿಗೆ ಬಿಜೆಪಿ ಹೆಚ್ಚು ಮತಗಳನ್ನು ಪಡೆಯುವ ಸ್ಥಳಗಳಲ್ಲಿ ‘ನಮೋ ಭವನ’ ನಿರ್ಮಿಸಲಾಗುವುದು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಹೇಳಿದ್ದಾರೆ. “ಬಾಂಗ್ಲಾದೇಶಿ ನುಸುಳುಕೋರರನ್ನು ಥಳಿಸಲಾಗುವುದು ಮತ್ತು ಸಂತಾಲ್ ಪರಗಣದಿಂದ ಹೊರದಬ್ಬಲಾಗುವುದು” ಎಂದು ಅವರು ಈ ಸಮಯದಲ್ಲಿ ಹೇಳಿದರು. ಸಂತಾಲ್ ಪರಗಣವು ಜಾರ್ಖಂಡ್ ರಾಜ್ಯದ 5 ವಿಭಾಗಗಳಲ್ಲಿ ಒಂದಾಗಿದೆ. ಈ ವಿಭಾಗವು ಗೊಡ್ಡಾ, ದಿಯೋಘರ್, ದುಮ್ಕಾ, ಜಮ್ತಾರಾ, ಸಾಹಿಬ್‌ಗಂಜ್ ಮತ್ತು ಪಾಕುರ್ ಎಂಬ 6 ಜಿಲ್ಲೆಗಳನ್ನು ಒಳಗೊಂಡಿದೆ.

ಈ ಘೋಷಣೆ ಸಂವಿಧಾನಕ್ಕೆ ವಿರುದ್ಧವಾಗಿಲ್ಲ ಎಂದು ಸಂಸದ ದುಬೆ ಹೇಳಿದ್ದಾರೆ. ನಾವು ಪಕ್ಷಪಾತಿ ಎಂದು ವಿರೋಧಿಗಳು ಹೇಳುತ್ತಿದ್ದಾರೆ; ಆದರೆ ಕಾಂಗ್ರೆಸ್ 75 ವರ್ಷಗಳಲ್ಲಿ ಇದನ್ನು ಹಲವು ಬಾರಿ ಮಾಡಿದೆ. ಅಲ್ಪಸಂಖ್ಯಾತರಾದ ಮುಸ್ಲಿಮರಿಗೆ ಸವಲತ್ತುಗಳನ್ನು ನೀಡಿದರೆ, ಹಿಮದೂ ಎಂದು ನಾವು ಹಿಂದೂಗಳಿಗೆ ಲಾಭವನ್ನು ನೀಡುತ್ತೇವೆ ಎಂದು ಹೇಳಿದರು.

ಈ ದೇಶ ಹಿಂದೂ ರಾಷ್ಟ್ರವಾಗಿದ್ದು ಮುಸ್ಲಿಮರ ಹೆಸರಿನಲ್ಲಿ ರಾಜಕೀಯ ಮಾಡುವಂತಿಲ್ಲ !

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಮಾತನಾಡುತ್ತಾ ಹಿಂದೂಗಳನ್ನು ಹಿಂಸಾತ್ಮಕ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ನಿಶಿಕಾಂತ್ ದುಬೆ, ಪ್ರತಿಪಕ್ಷಗಳು ಸುಳ್ಳನ್ನು ಸತ್ಯವೆಂದು ಬಿಂಬಿಸಲು ಪ್ರಯತ್ನಿಸುತ್ತಿವೆ ಎಂದು ಲೋಕಸಭೆಯಲ್ಲಿ ಹೇಳಿದ್ದರು. ಸದಾ ಮುಸಲ್ಮಾನರನ್ನು ಓಲೈಸುವ ವಿರೋಧ ಪಕ್ಷಗಳು ಇಂದು ‘ಹಿಂದೂ-ಹಿಂದೂ’ ಎಂದು ಜೈಘೋಷ ಮಾಡುತ್ತಿದೆ. ಈ ದೇಶ ಹಿಂದೂ ರಾಷ್ಟ್ರವಾಗಿದೆ ಮತ್ತು ಮುಸ್ಲಿಮರ ಹೆಸರಿನಲ್ಲಿ ಇಲ್ಲಿ ಯಾವುದೇ ರಾಜಕೀಯ ಮಾಡುವಂತಿಲ್ಲ ಎಂಬ ಸಂದೇಶವನ್ನು ಪ್ರಧಾನಿ ಮೋದಿಯವರು ಇಡೀ ದೇಶಕ್ಕೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ಮುಸ್ಲಿಮರಿಂದ ತೊಂದರೆಗೊಳಗಾದ ಹಿಂದೂಗಳಿಗೆ ಭವನವನ್ನು ಕಟ್ಟಿಸುವುದರಜೊತೆಗೆ ಹಿಂದುಗಳ ಮೇಲೆ ದಬ್ಬಾಳಿಕೆ ಮಾಡುವ ಧೈರ್ಯ ಯಾರಿಗೂ ಬರದಂತಹ ಪರಿಸ್ಥಿತಿ ನಿರ್ಮಾಣವಾಗಬೇಕು. ಅದಕ್ಕೆ ಹಿಂದೂ ರಾಷ್ಟ್ರವೊಂದೇ ಪರ್ಯಾಯವಾಗಿದೆ !