FIR Filed Against Calvary Church: ತೆಲಂಗಾಣದಲ್ಲಿ ಪವಾಡದಿಂದ ಬಾಲಕಿಯನ್ನು ಗುಣಪಡಿಸುವುದಾಗಿ ಹೇಳಿದ್ದ ಕ್ರೈಸ್ತ ಮಿಷನರಿ ವಿರುದ್ಧ ದೂರು ದಾಖಲು !

ಭಾಗ್ಯನಗರ – ಇಲ್ಲಿನ ಕ್ರೈಸ್ತ ಮಿಷನರಿಯೊಬ್ಬರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕಿಯನ್ನು ಪವಾಡದಿಂದ ಗುಣಪಡಿಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ಪುಟ್ಟ ಬಾಲಕಿಯನ್ನು ಪವಾಡದ ಹೆಸರಿನಲ್ಲಿ ಕ್ರೂರವಾಗಿ ನಡೆಸಿಕೊಳ್ಳಲಾಯಿತು. ಗಂಭೀರ ಅನಾರೋಗ್ಯ ಹುಡುಗಿಯೊಬ್ಬಳು ಬಲವಂತವಾಗಿ ವೇದಿಕೆಯ ಮೇಲೆ ನಡೆಯುವಂತೆ ಮಾಡಲಾಗಿತ್ತು ಮತ್ತು ಇದು ಪವಾಡ ಎಂದು ಹೇಳಲಾಯಿತು. ಈ ಪ್ರಕರಣದಲ್ಲಿ ಕ್ರೈಸ್ತ ಮಿಷನರಿಯ ವಿರುದ್ಧ ದೂರು ದಾಖಲಾಗಿದೆ. (ಒಬ್ಬ ಹಿಂದೂ ವ್ಯಕ್ತಿಯಿಂದ ಇಂತಹ ದಾವೆಯನ್ನು ಮಾಡಿದ್ದರೆ, ಕಮ್ಯುನಿಸ್ಟ್ ಮಾಧ್ಯಮಗಳು ಮತ್ತು ಸೆಕ್ಯುಲರ್‌ಗಳು ಹಿಂದೂ ವ್ಯಕ್ತಿಯ ಮೇಲೆ ಮುಗಿಬಿದ್ದು ಈ ಘಟನೆಯನ್ನು ರಾಷ್ಟ್ರೀಯ ಮಾತ್ರವಲ್ಲ ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಬ್ರೇಕಿಂಗ್ ನ್ಯೂಸ್’ ಆಗಿ ಬಿತ್ತರಿಸಿ ಹಿಂದೂ ಧರ್ಮವನ್ನು ದೂಷಿಸುತ್ತಿದ್ದರು! – ಸಂಪಾದಕರು)

1. ಕೆಲವು ದಿನಗಳ ಹಿಂದೆ, ಕ್ರೈಸ್ತ ಮಿಷನರಿ ಪ್ರವೀಣ ಕುಮಾರ್ ಅವರು ತಮ್ಮ ‘ಯೂಟ್ಯೂಬ್ ಚಾನೆಲ್‌’ನಲ್ಲಿ ಒಂದು ವೀಡಿಯೊವನ್ನು ಪ್ರಸಾರ ಮಾಡಿದ್ದರು. ಇದರಲ್ಲಿ ಮಗಳ ಕಿಡ್ನಿ ವಿಫಲವಾಗಿದೆ ಎಂದು ಸಂತ್ರಸ್ತ ಬಾಲಕಿಯ ತಾಯಿ ಹೇಳಿದ್ದಾರೆ. ಮಗಳನ್ನು ಕಳೆದ 3 ದಿನಗಳಿಂದ ಭಾಗ್ಯನಗರದ ‘ನಿಲೋಫರ್ ಆಸ್ಪತ್ರೆ’ಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು.

2. ಮಹಿಳೆಯು, ಮಗಳ ಜೀವವನ್ನು ಉಳಿಸಲು ಆಕೆಯು ಹುಡುಗಿಯನ್ನು ಕ್ಯಾಲ್ವರಿ ಚರ್ಚ್‌ನ ಪವಾಡ ಚಿಕಿತ್ಸೆ ಕಾರ್ಯಕ್ರಮಕ್ಕೆ ಕರೆತಂದಿದ್ದೇ. ಮಹಿಳೆಯ ಪ್ರಕಾರ, ಕಿಡ್ನಿ ವೈಫಲ್ಯದಿಂದಾಗಿ ಹುಡುಗಿಗೆ ನಡೆಯಲು ಸಾಧ್ಯವಾಗಲಿಲ್ಲ; ಆದರೆ ಈಗ ಅವಳು ನಡೆಯಬಲ್ಲಳು ಎಂದು ಹೇಳಿದ್ದಾರೆ.

3. ಜುಲೈ 3, 2024 ರಂದು ವೀಡಿಯೊವನ್ನು ಪ್ರಸಾರ ಮಾಡಿದ ನಂತರ, ‘LRPF’ ಎಂಬ ಸಂಘಟನೆಯು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಹುಡುಗಿಯನ್ನು ಕ್ರೂರವಾಗಿ ನಡೆಸಿಕೊಂಡಿದ್ದಕ್ಕಾಗಿ ಕ್ರೈಸ್ತ ಮಿಷನರಿ ವಿರುದ್ಧ ದೂರು ದಾಖಲಿಸಿತು.

4. ಈ ದೂರಿನಲ್ಲಿ, ಕಾರ್ಯಕ್ರಮದ ವೇಳೆ ಕ್ರೈಸ್ತ ಮಿಷನರಿ ಬಾಲಕಿಗೆ ಅಮಾನುಷವಾಗಿ ಕಿರುಕುಳ ನೀಡಿರುವುದನ್ನು ವೀಡಿಯೊ ತೋರಿಸಿದೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟು ಬಾಲಕಿಯ ಘನತೆ ಹಾಗೂ ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆ.

5. 2019 ರಲ್ಲಿ ಅಂತಹ ಒಂದು ಪ್ರಕರಣದಲ್ಲಿ, ಕ್ರೈಸ್ತ ಮಿಷನರಿ ಪ್ರವೀಣ ಕುಮಾರ್ ಮತ್ತು ಅವರ ಪತ್ನಿ ಶೆರಾನ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಸಂಪಾದಕೀಯ ನಿಲುವು

ಹಿಂದೂ ಸಂತರನ್ನು ‘ಕಪಟಿ’ಗಳು ಎಂದು ಹೇಳುವ ಮತ್ತು ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸುವ ಅಂಧಶ್ರದ್ಧಾ ನಿರ್ಮೂಲನ ಸಮಿತಿಯವರು ಮತ್ತು ಬುದ್ಧಿಜೀವಿಗಳು ಈಗ ಯಾವ ಬಿಲದಲ್ಲಿ ಅಡಗಿದ್ದಾರೆ ?