ಉತ್ತರಪ್ರದೇಶದ ಸಚಿವ ಕಪಿಲ ದೇವ ಅಗ್ರವಾಲ ಇವರ ಕರೆ !
ಲಕ್ಷ್ಮಣಪುರಿ (ಉತ್ತರಪ್ರದೇಶ) – ಕಾವಡ ಯಾತ್ರೆಯಲ್ಲಿ ಮುಸಲ್ಮಾನರು ತಮ್ಮ ಅಂಗಡಿಗಳಿಗೆ ಹಿಂದೂ ದೇವತೆಗಳ ಹೆಸರು ನೀಡಿದರೆ ವಿವಾದಗಳು ನಿರ್ಮಾಣವಾಗಬಹುದು ಮತ್ತು ಅನೇಕರು ಆಕ್ಷೇಪ ವ್ಯಕ್ತಪಡಿಸಬಹುದು. ನಿಮಗೆ ಬೇಕಿರುವ ಹೆಸರು ಇಡೀ ನಮ್ಮ ಆಕ್ಷೇಪವಿಲ್ಲ; ಆದರೆ ದೇವತೆಗಳ ಹೆಸರು ಉಪಯೋಗಿಸಬೇಡಿ ಎಂದು ಉತ್ತರಪ್ರದೇಶದ ಸಚಿವ ಕಪಿಲ ದೇವ ಅಗ್ರವಾಲ ಇವರು ಕರೆ ನೀಡಿದ್ದಾರೆ. ಈ ಯಾತ್ರೆಯ ಸಂದರ್ಭದಲ್ಲಿ ಇಲ್ಲಿ ಆಯೋಜಿಸಲಾದ ಒಂದು ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಶ್ರಾವಣ ಮಾಸದಲ್ಲಿ ಉತ್ತರಪ್ರದೇಶದಲ್ಲಿ ಕಾವಡ ಯಾತ್ರೆ (ಹರಿದ್ವಾರಕ್ಕೆ ಹೋಗಿ ಅಲ್ಲಿಂದ ಗಂಗಾಜಲ ತಂದು ಶಿವ ಮಂದಿರದಲ್ಲಿ ಅಭಿಷೇಕ ಮಾಡುವುದು.) ನಡೆಯುತ್ತದೆ.
ಸಂಪಾದಕೀಯ ನಿಲುವುಕಾವಡ ಯಾತ್ರೆಯ ಸಮಯದಲ್ಲಿ ಅಷ್ಟೇ ಅಲ್ಲದೆ, ಇನ್ನಿತರ ಸಮಯದಲ್ಲಿ ಕೂಡ ಮುಸಲ್ಮಾನರು ಹಿಂದೂ ದೇವತೆಗಳ ಹೆಸರು ಅಂಗಡಿಗೆ ಇಡಬಾರದು ಎಂದು ದೇಶಾದ್ಯಂತ ಕಾನೂನು ರೂಪಿಸಬೇಕು ! ಇಸ್ಲಾಂನಲ್ಲಿ ಮೂರ್ತಿ ಪೂಜೆ ‘ಹರಾಮ'(ಇಸ್ಲಾಮ ವಿರೋಧಿ) ಆಗಿರುವುದರಿಂದ ಮತಾಂಧ ಮುಸಲ್ಮಾನರು ಹಿಂದುಗಳನ್ನು ‘ಮೂರ್ತಿ ಪೂಜಕ’ನೆಂದು ಅಣಕಿಸುತ್ತಾರೆ. ಇದೇ ಮುಸಲ್ಮಾನರಿಗೆ ವ್ಯಾಪಾರದಿಂದ ಹಣ ಗಳಿಸಲು ಹಿಂದೂ ದೇವತೆಗಳ ಆಧಾರ ಪಡೆಯಬೇಕಾಗುತ್ತದೆ. ಮುಸಲ್ಮಾನರ ಇಂತಹ ಕೃತಿಯಿಂದ ‘ಇಸ್ಲಾಂ ಖತರೆ ಮೆ’ ಆಗುವುದಿಲ್ಲವೇ ? |