Amoeba : ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾದಿಂದ ೨ ತಿಂಗಳಲ್ಲಿ ೩ ಜನರ ಸಾವು !

ಕೋಳಿಕೊಡ (ಕೇರಳ) – ರಾಜ್ಯದಲ್ಲಿ ‘ಅಮೀಬಾ’ (ಸೂಕ್ಷ್ಮ ಜೀವಾಣು) ಮನುಷ್ಯನ ಮೆದುಳು ತಿನ್ನುತ್ತಿರುವ ಘಟನೆ ಈಗ ಆಗಾಗ ಬೆಳಕಿಗೆ ಬರುತ್ತಿದೆ. ಕಳೆದ ೨ ತಿಂಗಳಲ್ಲಿ ಇಂತಹ ೪ ಘಟನೆಗಳು ನಡೆದಿದ್ದು ಅದರಲ್ಲಿನ ೩ ಜನರು ಸಾವನ್ನಪ್ಪಿದ್ದಾರೆ. ನಾಲ್ಕನೆಯ ಘಟನೆಯಲ್ಲಿ ಓರ್ವ ೧೪ ವರ್ಷದ ಹುಡುಗನ ಮೆದುಳಿನಲ್ಲಿ ಈ ದುರ್ಲಭ ಸಂಕ್ರಮಣ ಇರುವುದು ‘ಅಮೀಬಿಕ್ ಪ್ರೈಮರಿ ಮೇನಿಗೋಯೆನ್ಸೆಫಲಾಯಟಿಸ’ ಆಗಿರುವುದು ಕಂಡು ಬಂದಿದೆ. ಇದಕ್ಕೆ ಚಿಕಿತ್ಸೆ ನೀಡಲಾಗುತ್ತಿದ್ದು ಅದರಲ್ಲಿ ಸುಧಾರಣೆ ಆಗುತ್ತಿದೆ ಎಂದು ಹೇಳಲಾಗಿದೆ. ಈ ಹುಡುಗ ಉತ್ತರ ಕೇರಳ ಜಿಲ್ಲೆಯಲ್ಲಿನ ಪಯೋಲಿ ಗ್ರಾಮದ ನಿವಾಸಿಯಾಗಿದ್ದಾನೆ. ಅವನಿಗೆ ಜುಲೈ ೧ ರಂದು ಆಸ್ಪತ್ರೆಗೆ ಸೇರಿಸಲಾಗಿತ್ತು.

ಜುಲೈ ೩ ರಂದು ಇನೋರ್ವ ೧೪ ವರ್ಷದ ಹುಡುಗನು ಈ ಸಂಕ್ರಮಣದಿಂದ ಸಾವನ್ನಪ್ಪಿದ್ದಾನೆ. ಈ ಹುಡುಗ ಒಂದು ಚಿಕ್ಕ ಕೇರೆಯಲ್ಲಿ ಸ್ನಾನಕ್ಕಾಗಿ ಹೋಗಿರುವಾಗ ಅವನಿಗೆ ಈ ಸಂಕ್ರಮಣವಾಗಿದೆ. ಈ ಹಿಂದೆ ೨೦೧೬, ೨೦೧೭, ೨೦೧೯, ೨೦೨೦, ೨೦೨೨ ಮತ್ತು ೨೦೨೩ ರಲ್ಲಿ ಈ ರೋಗ ಕೆಲವು ಪ್ರಮಾಣದಲ್ಲಿ ಕಂಡು ಬಂದಿತ್ತು.

ಏನು ಈ ಕಾಯಿಲೆ !

ಕಲುಷಿತ ನೀರಿನಲ್ಲಿ ಕಂಡು ಬರುವ ‘ಅಮೀಬಾ’ ಸೂಕ್ಷ್ಮ ಜೀವಿ ಮೂಗಿನಿಂದ ದೇಹದಲ್ಲಿ ಪ್ರವೇಶಿಸುವುದರಿಂದ ಈ ಸಂಕ್ರಮಣವಾಗುತ್ತದೆ. ‘ಯು.ಎಸ್’ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್’ನ ಪ್ರಕಾರ, ‘ಪ್ರೈಮರಿ ಅಮಿಬಿಕ್ ಮೇನಿಗೋಯೆನ್ಸೆಫಲಾಯಟಿಸ’ (ಪಿ.ಏ.ಎಮ್.) ಇದು ಮೆದುಳಿನ ಸಂಕ್ರಮಣ ಅಮೀಬಾ ಅಥವಾ ನೆಗ್ಲೇರಿಯ ಫಾವರೆಲಿ ಹೆಸರಿನ ಒಂದೇ ಕೋಶ ಜೀವಿಯಿಂದ ಆಗುತ್ತದೆ. ಈ ಅಮೀಬಾ ಕೆರೆ, ನದಿಗಳು ಮತ್ತು ಬಿಸಿ ನೀರು ಹರಿಯುವಂತಹ ಮಣ್ಣು ಮತ್ತು ಬೆಚ್ಚಗಿನ ಸಿಹಿ ನೀರಿನಲ್ಲಿ ಕಂಡು ಬರುತ್ತದೆ. ಇದಕ್ಕೆ ಸಾಮಾನ್ಯವಾಗಿ ‘ಬ್ರೈನ್ ಈಟಿಂಗ್ ಅಮೀಬಾ’ ಎಂದು ಹೇಳುತ್ತಾರೆ. ಇದು ಸಾಮಾನ್ಯ ಅಮೀಬಾವಾಗಿರದೇ ಸಾಮಾನ್ಯ ಆಂಟಿ ಬಯೋಟಿಕ್ ನಿಂದ ವಾಸಿಯಾಗುವುದಿಲ್ಲ. ಇದು ಎಷ್ಟು ಮಾರಣಾಂತಿಕವಾಗಿದೆ ಎಂದರೆ, ಸಂಕ್ರಮಣ ಸಮಯದಲ್ಲಿಯೇ ತಡೆಯದಿದ್ದರೆ ೫ ರಿಂದ ೧೦ ದಿನದಲ್ಲಿ ಆ ವ್ಯಕ್ತಿ ಸಾವನ್ನಪ್ಪಬಹುದು.