ಪೌರಾಣಿಕ ಚಲನಚಿತ್ರ ನಿರ್ಮಾಣದ ಮೊದಲು ಚಿತ್ರಕಥೆ ಪರಿಶೀಲನೆಗಾಗಿ ವಿಶೇಷ ಸಮಿತಿ ಸ್ಥಾಪನೆ ಮಾಡಲು ಅಗ್ರಹ
ಮುಂಬಯಿ – ‘ಕಲ್ಕಿ ೨೮೯೮ ಏಡಿ ‘ ಈ ಹಿಂದಿ ಚಲನಚಿತ್ರ ೭ ದಿನಗಳ ಹಿಂದೆ ಬಿಡುಗಡೆಯಾಗಿದ್ದೂ ವೀಕ್ಷಕರಿಂದ ಇದಕ್ಕೆ ಬಹಳಷ್ಟು ಮೆಚ್ಚುಗೆ ದೊರೆಯುತ್ತಿದೆ. ನಟ ಮುಕೇಶ್ ಖನ್ನಾ ಇವರು ಈ ಚಲನಚಿತ್ರದಲ್ಲಿನ ಒಂದು ಪ್ರಸಂಗದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಹಾಭಾರತದಲ್ಲಿನ ನೈಜಸ್ಥಿತಿಯನ್ನು ಹೇಗೆ ತಿರುಚಲಾಗಿದೆ ? ಇದನ್ನು ಹೇಳುತ್ತಾ ಅವರು ಈ ಚಲನಚಿತ್ರದಲ್ಲಿನ ಒಂದ ದೃಶ್ಯದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಸರಕಾರವು ಒಂದು ವಿಶೇಷ ಸಮಿತಿ ಸ್ಥಾಪಿಸಿ ಅದು ಪೌರಾಣಿಕ ಕಥೆಗಳನ್ನು ಆಧಾರಿಸಿ ನಿರ್ಮಿಸಿರುವ ಚಲನಚಿತ್ರಗಳ ಚಿತ್ರಕಥೆಯನ್ನು ಹಂತಹಂತವಾಗಿ ನಿರಾಕರಿಸುವುದು ಅಥವಾ ಸಮ್ಮತಿಸಬಹುದು, ಎಂದು ಖನ್ನಾ ಅವರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಒಂದು ವಿಡಿಯೋ ಅವರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಿದ್ದಾರೆ.
ಮುಕೇಶ್ ಖನ್ನಾ ಮಾತು ಮುಂದುವರೆಸಿ,
೧. ಚಲನಚಿತ್ರದ ಆರಂಭದಲ್ಲಿ ‘ಶ್ರೀ ಕೃಷ್ಣ ಅಶ್ವತ್ಥಾಮಾನ ಹಣೆಯಲ್ಲಿರುವ ಮಣಿಯನ್ನು ತೆಗೆದುಹಾಕಿ ಶಾಪ ನೀಡುತ್ತಾನೆ ಎಂದು ತೋರಿಸಲಾಗಿದೆ. ಪ್ರತ್ಯಕ್ಷದಲ್ಲಿ ಮಹಾಭಾರತದಲ್ಲಿ ಹೀಗೆ ಎಂದಿಗೂ ನಡೆದಿಲ್ಲ. ನಾನು ನಿರ್ಮಾಪಕರಿಗೆ ಕೇಳಲು ಇಚ್ಚಿಸುತ್ತೇನೆ ಏನೆಂದರೆ, ‘ಇಲ್ಲಿ (ಮಹಾಭಾರತದಲ್ಲಿ) ಇಲ್ಲದಿರುವುದು, ಎಲ್ಲಿಯೂ ಇರಲು ಸಾಧ್ಯವಿಲ್ಲ’, ಹೀಗೆ ಹೇಳುವ ವ್ಯಾಸಮುನಿಗಳಿಗಿಂತಲೂ ಎರಡು ಹೆಜ್ಜೆ ಮುಂದೆ ಹೋಗಿ ನೀವು ಹೆಚ್ಚಿನದು ಸೇರಿಸಿ ಹೇಗೆ ತೋರಿಸಬಹುದು ? ನಾನು ಬಾಲ್ಯದಿಂದಲೂ ಮಹಾಭಾರತ ಓದುತ್ತಿದ್ದೇನೆ. ಅಶ್ವತ್ಥಾಮಾನು ದ್ರೌಪದಿಯ ೫ ಮಕ್ಕಳನ್ನು ವಧಿಸಿದನು; ಆದ್ದರಿಂದ ದ್ರೌಪದಿಯ ಆಗ್ರಹದಿಂದ ಭಗವಾನ್ ಶ್ರೀ ಕೃಷ್ಣನು ಅಶ್ವತ್ಥಾಮಾನಿಂದ ಮಣಿ ತೆಗೆದುಕೊಂಡಿದ್ದನು.
೨. ಅರ್ಜುನ ಮತ್ತು ಅಶ್ವತ್ಥಾಮಾ ಇವರಲ್ಲಿ ದೊಡ್ಡ ಯುದ್ಧವೇ ನಡೆದಿತ್ತು. ಆ ಯುದ್ದದಲ್ಲಿ ಇಬ್ಬರೂ ಬ್ರಹ್ಮಾಸ್ತ್ರ ಪ್ರಯೋಗಿಸಿದರು. ಕೃಷ್ಣ ಮತ್ತು ವ್ಯಾಸಮುನಿ ಈ ಇಬ್ಬರಿಗೆ ಅರ್ಜುನ ಮತ್ತು ಅಶ್ವತ್ಥಾಮಾಗೆ, ಬ್ರಹ್ಮಾಸ್ತ್ರ ಪ್ರಯೋಗಿಸಬೇಡಿ ಎಂದು ತಿಳಿಸಿ ಹೇಳಿದ್ದರು. ಈ ಬಗ್ಗೆ ಅರ್ಜುನನು ‘ಬ್ರಹ್ಮಾಸ್ತ್ರ ಹಿಂಪಡೆಯುವೆನು’, ಎಂದು ಹೇಳಿದನು. ಆದರೆ ಅಶ್ವತ್ಥಾಮಾಗೆ ‘ಬ್ರಹ್ಮಾಸ್ತ್ರ ಹೇಗೆ ಹಿಂಪಡೆಯುವುದು ?’ ಇದು ತಿಳಿದಿರಲಿಲ್ಲ. ಆಗ ಶ್ರೀ ಕೃಷ್ಣನು ಅವನಿಗೆ, ‘ನೀನು ಬ್ರಹ್ಮಸ್ತ್ರ ಎಲ್ಲಿ ಪ್ರಯೋಗಿಸಬೇಕಿದೆ ? ಎಂದು ಕೇಳಿದಾಗ ಅಶ್ವತ್ಥಾಮಾ ಉತ್ತರಾಳ (ಅಭಿಮನ್ಯುವಿನ ಪತ್ನಿ) ಗರ್ಭದ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವುದಾಗಿ ಹೇಳಿದನು. ಆಗ ಶ್ರೀ ಕೃಷ್ಣನು ಅವನಿಗೆ ಬ್ರಹ್ಮಾಸ್ತ್ರ ಪ್ರಯೋಗಿಸುವ ಅನುಮತಿ ನೀಡಿದನು; ಆದರೆ ಕೃಷ್ಣನು ಸುದರ್ಶನ ಚಕ್ರದಿಂದ ಉತ್ತರಾಳ ಗರ್ಭವನ್ನು ೯ ತಿಂಗಳು ರಕ್ಷಿಸಿದನು.
೩. ಈ ಚಲನಚಿತ್ರದಲ್ಲಿನ ಮೇಲಿನ ಪ್ರಸಂಗ ತಪ್ಪಾದ ರೀತಿಯಲ್ಲಿ ತೋರಿಸಿರುವುದರಿಂದ ಪ್ರತಿಯೊಬ್ಬ ಸನಾತನಿ ಹಿಂದೂಗಳು ಈ ಕುರಿತು ಆಕ್ಷೇಪಿಸಬೇಕು. ದಕ್ಷಿಣದ ಚಲನಚಿತ್ರ ನಿರ್ಮಾಪಕರು ನಮ್ಮ ಪರಂಪರೆಯನ್ನು ಹೆಚ್ಚು ಗೌರವಿಸುತ್ತಾರೆ, ಎಂದು ನನಗೆ ಅನಿಸುತ್ತಿತ್ತು; ಆದರೆ ಇಲ್ಲಿ ಏನಾಗಿದೆ ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಂಪಾದಕೀಯ ನಿಲುವುಕೇಂದ್ರ ಚಲನಚಿತ್ರ ಪರೀಕ್ಷಾ ಮಂಡಳಿಯಲ್ಲಿ ಚಲನಚಿತ್ರಕ್ಕೆ ಪ್ರಮಾಣ ಪತ್ರ ನೀಡಿರುವ ಸದಸ್ಯರಿಗೆ ಹಿಂದೂ ಧರ್ಮದ ಅಭ್ಯಾಸ ಇದೆಯೇ ? ಹಿಂದೂ ಧರ್ಮದ ಬಗ್ಗೆ ಶ್ರದ್ಧೆ ಇದೆಯೇ ? ಇದು ಕೇಂದ್ರ ಸರಕಾರವು ನೋಡಬೇಕು ಮತ್ತು ಅಂತಹವರನ್ನೇ ಅಲ್ಲಿ ನೇಮಿಸಬೇಕು ! |