ಆಸ್ಟ್ರೇಲಿಯಾ: ಸಂಸತ್ತಿನ ಛಾವಣಿಯ ಮೇಲೆ ‘ಫ್ರೀ ಪ್ಯಾಲೆಸ್ಟೈನ್’ ಫಲಕ!

ಮುಸ್ಲಿಂ ಮಹಿಳಾ ಸಂಸದೆ ಅಮಾನತು

ಕ್ಯಾನ್‌ಬೆರಾ – ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಪ್ಯಾಲೇಸ್ಟಿನಿಯನ್ ಬೆಂಬಲಿತ ಪ್ರತಿಭಟನಾಕಾರರು ಸಂಸತ್ತಿನ ಛಾವಣಿಯ ಮೇಲೆ ‘ಫ್ರೀ ಪ್ಯಾಲೆಸ್ಟೈನ್’ ಎಂಬ ಫಲಕವನ್ನು ಹಾರಿಸಿದರು. ಆಸ್ಟ್ರೇಲಿಯಾದ ವೃತ್ತವಾಹಿನಿ ‘ಎಬಿಸಿ’ ನೀಡಿರುವ ಮಾಹಿತಿಯನುಸಾರ ಕಪ್ಪುಬಟ್ಟೆ ಧರಿಸಿರುವ ನಾಲ್ಕು ಜನರು ಶೀಘ್ರವಾಗಿ ಸಂಸತ್ತಿಗೆ ನುಗ್ಗಿದರು ಮತ್ತು ಛಾವಣಿಯ ಮೇಲೆ ಹೋಗಿ ‘ಫ್ರೀ ಪ್ಯಾಲೆಸ್ತೀನ್’ ಎಂದು ಕೂಗಲು ಪ್ರಾರಂಭಿಸಿದರು. ಅವರ ಕೈಗಳಲ್ಲಿ ‘ಫ್ರೀ ಪ್ಯಾಲೆಸ್ತೀನ್’ ಎಂದು ಬರೆದಿರುವ ಫಲಕಗಳಿದ್ದವು. ಪ್ರತಿಭಟನಾಕಾರರು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ ಮೇಲೆ ಇಸ್ರೇಲ್‌ಗೆ ಬೆಂಬಲ ನೀಡಿದ್ದಾರೆಂದು ಆರೋಪಿಸಿದರು. ಭದ್ರತಾ ಸಿಬ್ಬಂದಿ ಪ್ರತಿಭಟನಾಕಾರರನ್ನು ಸಂಸತ್ತಿನಿಂದ ಹೊರಗೆ ಕರೆದೊಯ್ದರು.

ಕೆಲವು ದಿನಗಳ ಹಿಂದೆ, ಅಲ್ಲಿನ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರ ಸರಕಾರವು ಮುಸ್ಲಿಂ ಸಂಸದೆ ಫಾತಿಮಾ ಪೇಮನ್ ಅವರನ್ನು ಅವರ ಪಕ್ಷದಿಂದ ಅಮಾನತುಗೊಳಿಸಿತ್ತು. ಪ್ಯಾಲೆಸ್ತೀನ್ ಅನ್ನು ಸ್ವತಂತ್ರ ರಾಷ್ಟ್ರವೆಂದು ಗುರುತಿಸುವಂತೆ ಆಸ್ಟ್ರೇಲಿಯಾದ `ಗ್ರೀನ್ ಪಾರ್ಟಿ’ ಯು ಮಂಡಿಸಿದ ಪ್ರಸ್ತಾಪನೆಯನ್ನು ಫಾತಿಮಾ ಅವರು ಬೆಂಬಲಿಸಿದ್ದರು.

ಸಂಪಾದಕೀಯ ನಿಲುವು

ಪ್ಯಾಲೆಸ್ಟೈನ್ ಜನರಿಗಾಗಿ ಪ್ರಪಂಚದಾದ್ಯಂತದ ಮುಸ್ಲಿಂ ರಾಜಕಾರಣಿಗಳು ತಮ್ಮ ಪಕ್ಷ ಮತ್ತು ಇತರ ವಿಷಯಗಳನ್ನು ಮರೆತು ಬೆಂಬಲಿಸುತ್ತಾರೆ. ಹಿಂದೂ ಪ್ರಜಾಪ್ರತಿನಿಧಿಗಳು ಎಂದಾದರೂ ಹಿಂದೂಗಳ ಸಮಸ್ಯೆಗಳಿಗಾಗಿ ಈ ರೀತಿ ಸಂಘಟಿತರಾಗುತ್ತಾರೆಯೇ?