ಮೊಬೈಲ್ ‘ರೀಚಾರ್ಜ್ ಪ್ಲಾನ್’ ದರವನ್ನು ಕಡಿಮೆ ಮಾಡುವ ಬಗ್ಗೆ ಹಸ್ತಕ್ಷೇಪ ಮಾಡಲು ಕೇಂದ್ರ ಸರ್ಕಾರದ ನಿರಾಕರಣೆ!

ನವದೆಹಲಿ – ದೇಶದ ಪ್ರಮುಖ ದೂರಸಂಚಾರ ಸಂಸ್ಥೆಗಳು ಕೆಲವು ದಿನಗಳ ಹಿಂದೆ ಮೊಬೈಲ್ ರೀಚಾರ್ಜ ಪ್ಲಾನ’ ದರವನ್ನು ಶೇಕಡಾ 11 ರಿಂದ 25 ರಷ್ಟು ಹೆಚ್ಚಿಸಿವೆ. ಕೇಂದ್ರ ಸರಕಾರ ಅಥವಾ ದೂರಸಂಚಾರ ನಿಯಂತ್ರಕ `ಟ್ರಾಯ್’ ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಸಧ್ಯಕ್ಕಂತೂ ‘ಸರಕಾರಿ ಅಧಿಕಾರಿಗಳು ಮಧ್ಯಪ್ರವೇಶಿಸುವಷ್ಟು ಪರಿಸ್ಥಿತಿ ಗಂಭೀರವಾಗಿಲ್ಲ. ಗ್ರಾಹಕರು ಸ್ವಲ್ಪ ಹೊರೆಯನ್ನು ಸಹಿಸಬೇಕಾಗುತ್ತದೆ. ಕಾರಣ ಮೂರು ವರ್ಷಗಳ ನಂತರ ದರವನ್ನು ಹೆಚ್ಚಿಸಲಾಗಿದೆ ಎಂದು ಸರಕಾರ ಸ್ಪಷ್ಟನೆ ನೀಡಿದೆ. ಇದರಿಂದಾಗಿ ದೇಶದಾದ್ಯಂತ ಗ್ರಾಹಕರು ದುಬಾರಿ ರೀಚಾರ್ಜ್ ಪ್ಲಾನ್ ಬಳಸಬೇಕಾಗುತ್ತದೆ ಎಂಬುದು ಸ್ಪಷ್ಟವಾಗಿದೆ. ‘ದೂರಸಂಚಾರ ಸಂಸ್ಥೆಗಳು ತಮ್ಮ ಸೇವಾ ದರ್ಜೆಯನ್ನು ಸುಧಾರಿಸಲು ಹೆಚ್ಚಿನ ಒತ್ತು ನೀಡಬೇಕು’ ಎಂದು ಕೇಂದ್ರ ಸರಕಾರ ಸೂಚನೆಯನ್ನು ನೀಡಿದೆ. (ದೂರಸಂಚಾರ ಸಂಸ್ಥೆಗಳು ಸೇವೆಯ ದರ್ಜೆಯನ್ನು ಸುಧಾರಿಸದಿದ್ದರೆ, ಸರಕಾರ ಅವರ ವಿರುದ್ಧ ಏನು ಕ್ರಮ ತೆಗೆದುಕೊಳ್ಳುತ್ತದೆ? ಎನ್ನುವುದೂ ಕೂಡ ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು! – ಸಂಪಾದಕರು)

ಸಂಪಾದಕೀಯ ನಿಲುವು

ಪೆಟ್ರೋಲ್-ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡಲು ಸಾಧ್ಯವಾಗದಿರುವ ಸರಕಾರಕ್ಕೆ ಖಾಸಗಿ ಸಂಸ್ಥೆಗಳ ರೀಚಾರ್ಜ್ ಪ್ಲಾನ್ ಗಳನ್ನು ಕಡಿಮೆ ಮಾಡಲು ಮಧ್ಯ ಪ್ರವೇಶಿಸುತ್ತದೆ ಎಂದು ನಿರೀಕ್ಷಿಸುವುದು ತಪ್ಪಾಗಿದೆ.