ಪ್ರಧಾನಮಂತ್ರಿ ಮೋದಿ ಅವರ ವಿರುದ್ಧ ಘೋಷಣೆ ನೀಡುತ್ತಾ ತ್ರಿವರ್ಣ ಧ್ವಜಕ್ಕೆ ಅವಮಾನ !
ಒಟಾವಾ(ಕೆನಡಾ) – ಕೆನಡಾದಲ್ಲಿ ಮತ್ತೊಮ್ಮೆ ಖಲಿಸ್ತಾನಿಗಳ ಸಮರ್ಥಕರಿಂದ ಪ್ರತಿಭಟನೆ ನಡೆಸಲಾಗಿದೆ. ಇದರಲ್ಲಿ ಭಾರತ ವಿರೋಧಿ ಘೋಷಣೆ ಕೂಗುತ್ತಾ ತ್ರಿವರ್ಣ ಧ್ವಜವನ್ನು ಅವಮಾನಿಸಲಾಗಿದೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಕೂಡ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಲಾಗಿದೆ. ಒಟಾವಾದಲ್ಲಿನ ಭಾರತೀಯ ಉಚ್ಚಾಯುಕ್ತರ ಕಚೇರಿಯ ಎದುರು ಈ ಪ್ರತಿಭಟನೆ ನಡೆದಿದೆ. ಪ್ರತಿಭಟನಾಕಾರರು ಭಾರತ ಸರಕಾರವನ್ನು ಆರೋಪಿಸುತ್ತಾ ಕೆನಡಾದಲ್ಲಿನ ಭಾರತೀಯ ಉಚ್ಚಾಯುಕ್ತರಾದ ಸಂಜಯ ವರ್ಮಾ ಅವರ ವಿರುದ್ಧ ಮೊಕದ್ದಮೆ ನಡೆಸುವಂತೆ ಆಗ್ರಹಿಸಿದರು.
ಈ ವರ್ಷ ಮಾರ್ಚ್ ತಿಂಗಳಿನಲ್ಲಿ ಭಾರತೀಯ ಉಚ್ಚಾಯುಕ್ತ ಸಂಜಯ ಕುಮಾರ್ ವರ್ಮ ಎಡ್ಮಂಟನಲ್ಲಿ ಇಂಡೋ-ಕೇನೆಡಿಯನ್ ಚೇಂಬರ್ ಆಫ್ ಕಾಮರ್ಸ್ ಕಾರ್ಯಕ್ರಮದಲ್ಲಿ ಮಾತನಾಡುವಾಗ ನೂರಾರು ಖಲಿಸ್ತಾನಿ ಸಮರ್ಥಕರು ಅವಮಾನಾಸ್ಪದ ಘೋಷಣೆಗಳನ್ನು ನೀಡಿದರು. ಈ ಹಿಂದೆ ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಹತ್ಯೆಯ ಪ್ರಕರಣದಲ್ಲಿ ಖಲಿಸ್ತಾನಿ ಸಮರ್ಥಕರು ಕೆನಡಾದಲ್ಲಿನ ಬೇರೆ-ಬೇರೆ ನಗರಗಳಲ್ಲಿ ಅನೇಕ ಬಾರಿ ಭಾರತ ವಿರೋಧಿ ಪ್ರತಿಭಟನೆಗಳು ನಡೆಸಿದ್ದಾರೆ.
ಸಂಪಾದಕೀಯ ನಿಲುವುಕೆನಡಾದಲ್ಲಿ ಖಲಿಸ್ತಾನಿಗಳಿಗೆ ಪಾಠ ಕಲಿಸುವುದಕ್ಕಾಗಿ ಕೆನಡಾದಲ್ಲಿನ ನಾಗರೀಕರೇ ಇನ್ನು ಪ್ರಯತ್ನಿಸಬೇಕಿದೆ ! |