Indian App Koo To Shutdown: ‘X’ ನೊಂದಿಗೆ ಸ್ಪರ್ಧಿಸಲು ನಿರ್ಮಿಸಿದ ಭಾರತೀಯ ಅಪ್ಲಿಕೇಶನ್ ‘ಕೂ’ ಬಂದ್ !

ಬಂಡವಾಳದ ಕೊರತೆ, ಜೊತೆಗೆ ಇತರ ಸಂಸ್ಥೆಗಳೊಂದಿಗೆ ಮಾತುಕತೆ ವಿಫಲವಾದ ಕಾರಣ, ಸಂಸ್ಥೆಯ ಮುಖ್ಯಸ್ಥರಿಂದ ಕಠಿಣ ನಿರ್ಧಾರ !

ನವದೆಹಲಿ – ವಿದೇಶಿ ಸಾಮಾಜಿಕ ಮಾಧ್ಯಮ ‘X’ (ಹಿಂದಿನ ಟ್ವಿಟರ್)ನೊಂದಿಗೆ ಸ್ಪರ್ಧಿಸಲು ‘ಕೂ’ ಹೆಸರಿನ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿತ್ತು. ಬಿಜೆಪಿ 2022 ರಲ್ಲಿ ಈ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡಿತ್ತು. ಆದ್ದರಿಂದ ಲಕ್ಷಾಂತರ ರಾಷ್ಟ್ರನಿಷ್ಠ ಭಾರತೀಯರು ಈ ಅಪ್ಲಿಕೇಶನ್ ಅನ್ನು ಬಳಸಲು ಪ್ರಾರಂಭಿಸಿದರು; ಆದರೆ ಜಾಗತಿಕವಾಗಿ ಪ್ರಬಲವಾಗಿರುವ X ನೊಂದಿಗೆ ಸ್ಪರ್ಧಿಸಲು ಅಗತ್ಯವಾದ ಬಂಡವಾಳದ ಕೊರತೆ ಮತ್ತು ಇತರ ದೊಡ್ಡ ಸಂಸ್ಥೆಗಳೊಂದಿಗೆ ವಿಲೀನ ಮಾತುಕತೆಗಳ ವಿಫಲತೆಯಿಂದಾಗಿ, ‘ಕೂ’ ಅಪ್ಲಿಕೇಶನ್ ಅನ್ನು ಮುಚ್ಚುವ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು. ಜುಲೈ 3 ರಂದು, ಕಂಪನಿಯ ಮಾಲೀಕರು ಸಾಮಾಜಿಕ ಮಾಧ್ಯಮ ಲಿಂಕ್ kooapp.com ನಲ್ಲಿ ಅಪ್ಲಿಕೇಶನ್ ಅನ್ನು ಬಂದ್ ಮಾಡಲಾಗಿದೆ ಎಂದು ಮನವಿ ಪ್ರಸಾರ ಮಾಡಿದೆ.

ಟ್ವಿಟರ್‌ನ ಏಕೈಕ ಪ್ರತಿಸ್ಪರ್ಧಿ ‘ಕೂ’ ಅಪ್ಲಿಕೇಶನ್ !

‘ಕೂ’ ಆ್ಯಪ್‌ನ ಸಹ-ಸಂಸ್ಥಾಪಕರಾದ ಅಪ್ರಮೇಯ ಮತ್ತು ಮಯಾಂಕ್ ಪ್ರಸಾರ ಮಾಡಿದ ಮನವಿಯಲ್ಲಿ, ಜನರನ್ನು ಅವರ ಸ್ಥಳೀಯ ಭಾಷೆಯ ಆಧಾರದ ಮೇಲೆ ಒಟ್ಟಿಗೆ ಸೇರಿಸುವ ಉದ್ದೇಶದಿಂದ ನಾವು ‘ಕೂ’ ಅನ್ನು ಪ್ರಾರಂಭಿಸಿದ್ದೇವೆ. ಹೆಚ್ಚಿನ ಜಾಗತಿಕ ಉತ್ಪನ್ನಗಳು ಇಂಗ್ಲಿಷ್ ಮೇಲೆ ಕೇಂದ್ರೀಕರಿಸುತ್ತವೆ; ಆದರೆ ವಿಶ್ವದ 80 ಪ್ರತಿಶತ ಜನರು ಇಂಗ್ಲಿಷ್ ಹೊರತುಪಡಿಸಿ 1 ಸಾವಿರ ಭಾಷೆಗಳನ್ನು ಮಾತನಾಡುತ್ತಾರೆ. ಈ ಬಳಕೆದಾರರು ಹೆಚ್ಚು ಅರ್ಥಪೂರ್ಣ ರೀತಿಯಲ್ಲಿ ಪರಸ್ಪರ ಸಂಪರ್ಕಿಸಲು ಮತ್ತು ವಿಚಾರಗಳನ್ನು ಹಂಚಿಕೊಳ್ಳಲು ಸಹಾಯ ಮಾಡಲು ನಾವು ಬಯಸಿದ್ದೆವು. ನಾವು 4 ವರ್ಷಗಳ ಹಿಂದೆ ಮಾರ್ಚ್ 2020 ರಲ್ಲಿ ಕರೋನಾ ಸಂಚಾರ ನಿರ್ಬಂಧದ ಮೊದಲು ‘ಕು’ ಅನ್ನು ಪ್ರಾರಂಭಿಸಿದ್ದೇವೆ. ಕಳೆದ 4 ವರ್ಷಗಳಲ್ಲಿ, ‘ಕೂ’ ಪ್ರಪಂಚದಾದ್ಯಂತದ ಸಾರ್ವಜನಿಕರು, ನಿರ್ಮಾಪಕರು, ಗಣ್ಯರು ಮತ್ತು ಮಾಧ್ಯಮಗಳಿಂದ ಸಾಕಷ್ಟು ಪ್ರೀತಿಯನ್ನು ಪಡೆದಿದೆ. ಈ ಅಪ್ಲಿಕೇಶನ್ ‘ಟ್ವಿಟರ್’ ನ ಏಕೈಕ ಪ್ರತಿಸ್ಪರ್ಧಿಯಾಗಿತ್ತು. ಆ್ಯಪ್ 6 ಕೋಟಿ ಡೌನ್‌ಲೋಡ್‌ಗಳು, 8 ಸಾವಿರ ಸೂಪರ್ ಪೇಯ್ಡ್ ಖಾತೆಗಳು, ಜೊತೆಗೆ 100 ಪ್ರಕಾಶಕರ ಖಾತೆಗಳನ್ನು ಹೊಂದಿತ್ತು. ಈ ಸಾಮಾಜಿಕ ಮಾಧ್ಯಮವನ್ನು ನಿಯಮಿತವಾಗಿ ನಡೆಸಲು ಅಗತ್ಯವಾದ ಬಂಡವಾಳವನ್ನು ಸಂಗ್ರಹಿಸಲು ನಾವು ಕಳೆದ 2 ವರ್ಷಗಳಿಂದ ಶ್ರಮಿಸುತ್ತಿದ್ದೇವೆ, ಆದರೆ ಅದು ಯಶಸ್ವಿಯಾಗಲಿಲ್ಲ. ಆದ್ದರಿಂದ ನಮಗೆ ಸಹಾಯ ಮಾಡಿದ ಲಕ್ಷಾಂತರ ಕೂ ಬಳಕೆದಾರರಿಗೆ ನಾವು ಕೃತಜ್ಞರಾಗಿರುತ್ತೇವೆ; ಆದರೆ ದುಃಖದಿಂದ ನಾವು ‘ಕೂ’ ಅನ್ನು ಮುಚ್ಚಬೇಕಾಗಿದೆ ಎಂದು ಹೇಳಿದೆ.