ನವದೆಹಲಿ – ಇತ್ತೀಚೆಗೆ ರಾಜ್ಯಸಭೆಗೆ ನೇಮಕಗೊಂಡ ಸಂಸದೆ ಸುಧಾ ಮೂರ್ತಿ ಅವರು ಜುಲೈ 2 ರಂದು ರಾಜ್ಯಸಭೆಯಲ್ಲಿ ತಮ್ಮ ಪ್ರಥಮ ಭಾಷಣ ಮಾಡಿದರು. `ಇನ್ಫೋಸಿಸ್ ‘ ಸಂಸ್ಥೆಯ ಸಹ-ಸಂಸ್ಥಾಪಕ ನಾರಾಯಣ ಮೂರ್ತಿಯವರ ಪತ್ನಿಯಾಗಿರುವ ಸುಧಾ ಮೂರ್ತಿ ಅವರು ಮಹಿಳೆಯರ ಆರೋಗ್ಯ ಮತ್ತು ಭಾರತದ ಪ್ರವಾಸಿ ತಾಣಗಳ ಬಗ್ಗೆ ಸಭಾಸದಸ್ಯರ ಗಮನವನ್ನು ಸೆಳೆದರು. ಅವರು ಮಾತನಾಡಿ, ದೇಶೀಯ ಪ್ರವಾಸೋದ್ಯಮ ಕುರಿತು ಮಾತನಾಡಿದ ಸುಧಾ ಮೂರ್ತಿಯವರು, ಭಾರತವು 42 ವಿಶ್ವ ಪರಂಪರೆಯ ತಾಣಗಳನ್ನು ಹೊಂದಿದೆ ಮತ್ತು ಇನ್ನೂ 57 ವಿಶ್ವ ಪರಂಪರೆಯ ತಾಣಗಳನ್ನು ಪರಿಗಣಿಸಬೇಕು. ಇದರಲ್ಲಿ ಕರ್ನಾಟಕದ ಶ್ರವಣಬೆಳಗೊಳದ ಬಾಹುಬಲಿ ಮೂರ್ತಿ, ತ್ರಿಪುರಾದ ಉನಾಕೋಟಿ ಬಂಡೆಯ ಮೇಲಿನ ಕುಸುರಿ ಕೆತ್ತನೆ ಕೆಲಸ, ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಮಹಾರಾಜರ ಕೋಟೆ, ಮಧ್ಯಪ್ರದೇಶದ ಮಿತಾವಲಿಯ 64 ಯೋಗಿನಿಯರ ದೇವಸ್ಥಾನ ಇತ್ಯಾದಿಗಳನ್ನು ಸೇರಿಸಬಹುದಾಗಿದೆ ಎಂದರು.
ಮಹಿಳೆಯರ ಗರ್ಭಾಶಯದ ಕ್ಯಾನ್ಸರ್ ತಪ್ಪಿಸಲು ಅವರಿಗೆ ಲಸಿಕೆ ನೀಡಬೇಕು: ಸಂಸದೆ ಸುಧಾ ಮೂರ್ತಿ ಕೋರಿಕೆ
ಕಳೆದ ಕೆಲವು ವರ್ಷಗಳಲ್ಲಿ ಮಹಿಳೆಯರಲ್ಲಿ ಗರ್ಭಾಶಯದ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿದೆ. ಇದರಿಂದ ಮಹಿಳೆಯರ ಸಾವಿನ ಪ್ರಮಾಣ ಕೂಡ ಹೆಚ್ಚಾಗಿದೆ. ಈ ರೋಗವನ್ನು ತಡೆಗಟ್ಟುವ ಸಲುವಾಗಿ, ಪಾಶ್ಚಿಮಾತ್ಯ ದೇಶಗಳಲ್ಲಿ 9 ರಿಂದ 14 ವರ್ಷ ವಯಸ್ಸಿನ ಯುವತಿಯರಿಗೆ ಗರ್ಭಾಶಯದ ಗರ್ಭನಿರೋಧಕ ಲಸಿಕೆಗಳನ್ನು ನೀಡಲಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಸಂಭವಿಸಬಹುದಾದ ಕ್ಯಾನ್ಸರ್ ಅನ್ನು ತಡೆಗಟ್ಟಬಹುದಾಗಿದೆ. ರೋಗ ಗುಣಪಡಿಸುವುದಕ್ಕಿಂತ ಅದನ್ನು ತಡೆಗಟ್ಟುವಿಕೆಯೇ ಉತ್ತಮ ಎಂದು ಅವರು ಹೇಳಿದರು. ಸರಕಾರವು ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಅತ್ಯಂತ ದೊಡ್ಡ ಲಸಿಕೆ ಅಭಿಯಾನವನ್ನು ಕೈಕೊಂಡಿತ್ತು. ಆದ್ದರಿಂದ 9 ರಿಂದ 14 ವರ್ಷ ವಯಸ್ಸಿನ ಯುವತಿಯರಿಗೆ ಗರ್ಭಾಶಯದ ಕ್ಯಾನ್ಸರ್ ತಡೆಗಟ್ಟುವ ಅಭಿಯಾನವನ್ನು ಕೈಗೊಳ್ಳುವುದು ಸರ್ಕಾರಕ್ಕೆ ಕಷ್ಟವೇನಲ್ಲ. ಈ ಲಸಿಕೆಯು ಬಹಳ ದುಬಾರಿಯೇನಲ್ಲ. ಇದು 1,400 ರೂಪಾಯಿಗಳಿಗೆ ಲಭ್ಯವಿದ್ದು, ಸರಕಾರ ಮಧ್ಯಪ್ರವೇಶಿಸಿ ಚರ್ಚಿಸಿ ಆ ಲಸಿಕೆಯನ್ನು 700-800 ರೂಪಾಯಿಗಳಲ್ಲಿ ನೀಡಬಹುದು ಎಂದು ಮನವಿ ಮಾಡಿದರು.
ಸಂಪಾದಕೀಯ ನಿಲುವುಸರಕಾರದ ಬಳಿ ಇಂತಹ ಬೇಡಿಕೆ ಮಾಡುವ ಪ್ರಮಯ ಬರಬಾರದು, ಸರಕಾರ ತಾವಾಗಿಯೇ ಇಂತಹವುಗಳ ವಿಶ್ವ ಪರಂಪರೆಯ ತಾಣವಾಗಲು ಪ್ರಯತ್ನಿಸಬೇಕು ! |