ಶಾಲೆಯ ಮೊದಲ ದಿನ ಎಲ್ಲಾ ವಿದ್ಯಾರ್ಥಿಗಳಿಗೆ ತಿಲಕ ಹಚ್ಚಿ ಸ್ವಾಗತ ಮಾಡುತ್ತಿದ್ದರಿಂದ ಮುಸ್ಲಿಂ ಪೋಷಕರಲ್ಲಿ ಆಕ್ರೋಶ !

ಪೊಲೀಸರಲ್ಲಿ ದೂರು ದಾಖಲು !

ಮುಜಾಫ್ಫರ್‌ನಗರ (ಉತ್ತರ ಪ್ರದೇಶ) – ಇಲ್ಲಿನ ಕಾವಲ್ ಗ್ರಾಮದ ಸರಕಾರಿ ಮಹಾವಿದ್ಯಾಲಯದಲ್ಲಿ ಪ್ರವೇಶದ ಮೊದಲ ದಿನ ಮುಸ್ಲಿಂ ವಿದ್ಯಾರ್ಥಿಗಳ ಹಣೆಯ ಮೇಲೆ ತಿಲಕ ಹಾಕಿದ ವಿರುದ್ಧ ಪ್ರತಿಭಟನೆ ಮಾಡಲಾಯಿತು. ಈ ಸಂಬಂಧ ಮುಸ್ಲಿಂ ವಿದ್ಯಾರ್ಥಿಗಳ ಪೋಷಕರು ಮುಖ್ಯೋಪಾಧ್ಯಾಯರ ವಿರುದ್ಧ ಪೊಲೀಸರಿಗೆ ದೂರು ನೀಡಲು ಯತ್ನಿಸಿದಾಗ, ಪೊಲೀಸರು ಅವರನ್ನು ಸಮಾಧಾನ ಪಡಿಸಿ ಹಿಂತಿರುಗಿಸಿದರು.

ಜುಲೈ ೧ರಿಂದ ಶಾಲೆಗಳು ಮತ್ತು ಮಹಾವಿದ್ಯಾಲಯಗಳು ಆರಂಭಗೊಂಡವು. ವಿದ್ಯಾರ್ಥಿಗಳನ್ನು ಸ್ವಾಗತಿಸಲು ಅವರ ಹಣೆಯ ಮೇಲೆ ತಿಲಕ ಹಾಕಲಾಯಿತು. ಮುಸ್ಲಿಂ ವಿದ್ಯಾರ್ಥಿಗಳು ಮನೆಯೆಗೆ ಹೋದಾಗ, ಪೋಷಕರು ತಿಲಕ ಹಾಕಿದ ಬಗ್ಗೆ ವಿಚಾರಿಸಿದ ನಂತರ ಅವರು ಶಾಲೆಗೆ ಬಂದರು ಮತ್ತು ಈ ಘಟನೆಗೆ ವಿರೋಧ ವ್ಯಕ್ತಪಡಿಸಿದರು. ನಂತರ ಅವರು ಪೊಲೀಸ್ ಠಾಣೆಗೆ ಹೋದಾಗ, ಪೊಲೀಸರು ಮುಖ್ಯೋಪಾಧ್ಯಾಯ ರಣವೀರ್ ಸಿಂಗ್ ಅವರನ್ನು ಕರೆಸಿದರು. ಮುಖ್ಯೋಪಾಧ್ಯಾಯ ಸಿಂಗ್ ಅವರು ತಿಲಕ ಹಾಕುವ ಕುರಿತು ಯಾರ ಭಾವನೆಗಳಿಗೆ ಹಾನಿ ಮಾಡುವ ಉದ್ದೇಶವಿಲ್ಲ ಎಂದು ಪೋಷಕರಿಗೆ ವಿವರಿಸಿದರು. ಇನ್ನು ಮುಂದೆ ಮುಸ್ಲಿಮರಿಗೆ ತಿಲಕ ಹಚ್ಚುವುದಿಲ್ಲ ಎಂದು ಹೇಳಿದ್ದಾರೆ. ನಂತರ ಪ್ರಕರಣ ಶಾಂತವಾಯಿತು.

ಸಂಪಾದಕೀಯ ನಿಲುವು

ಹಿಂದೂಗಳು ಗೋಲು ಟೋಪಿ ಹಾಕಬೇಕು ಎಂದು ಮುಸ್ಲಿಂಗಳು ಆಶಿಸುತ್ತಾರೆ. ಆದರೆ ಹಿಂದೂಗಳು ಅವರಿಗೆ ತಿಲಕ ಹಚ್ಚಿದರೆ, ಅದು ಸಹಿಸುವುದಿಲ್ಲ. ಅಂದರೆ ಸರ್ವಧರ್ಮ ಸಮಭಾವ ಮತ್ತು ಜಾತ್ಯತೀತವು ಕೇವಲ ಹಿಂದೂಗಳು ಪಾಲಿಸಬೇಕು, ಇತರ ಧರ್ಮೀಯರು ಪಾಲಿಸಬಾರದು ಎಂದು ಅರ್ಥವಾಗುತ್ತದೆ. ಆತ್ಮಘಾತುಕ ಜಾತ್ಯತೀತತೆ ಪಾಲಿಸುವ ಹಿಂದೂಗಳು ಇದನ್ನು ಯಾವಾಗ ಗಮನಿಸುವರು ?