“ನೀಟ್”ಮರುಪರೀಕ್ಷೆಯ ಫಲಿತಾಂಶ ಪ್ರಕಟ
ನವದೆಹಲಿ- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್.ಟಿ.ಎ)ಯು ’ನೀಟ್’(ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ಮರು ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ರಿಯಾಯಿತಿ ಅಂಕಗಳನ್ನು ಪಡೆದ ೧,೫೬೩ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ನಡೆಸಲಾಯಿತು; ಆದರೆ ಅದರಲ್ಲಿ ೮೧೩ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಿದ್ದರು. ಫಲಿತಾಂಶದ ಜೊತೆಗೆ ಹೊಸ ಅಂಕದ (ಮೆರಿಟ್) ಪಟ್ಟಿ ಕೂಡ ಹೊರ ಬಂದಿದೆ. ಇದರಲ್ಲಿ ಹೆಚ್ಚು ಅಂಕ ಪಡೆದವರ ಸಂಖ್ಯೆ ಕಡಿಮೆಯಾಗಿದೆ. ಹಳೆಯ ಪಟ್ಟಿಯ ಪ್ರಕಾರ ಹೆಚ್ಚು ಅಂಕ ಪಡೆದವರ ಸಂಖ್ಯೆ ೬೭ ಇತ್ತು ಈಗ ಅದು ೬೧ಕ್ಕೆ ಇಳಿದಿದೆ. ಇದರ ಜೊತೆಗೆ ಕಳೆದ ಪರಿಕ್ಷೆಯಲ್ಲಿ ೭೨೦ ಗಳಿಸಿದ ೬ ವಿದ್ಯಾರ್ಥಿಗಳ ಪೈಕಿ ೫ ವಿದ್ಯಾರ್ಥಿಗಳು ಮರುಪರೀಕ್ಷೆ ಬರೆದಿದ್ದರು. ಆದರೆ ಈ ಬಾರಿ ಇವರಲ್ಲಿ ಯಾರಿಗೂ ಕೂಡ ೭೨೦ ಅಂಕಗಳು ಸಿಕ್ಕಿಲ್ಲ.