Muslims Are Richer Than Hindus: ದೇಶದಲ್ಲಿ ಮುಸಲ್ಮಾನರ ಆರ್ಥಿಕ ಉತ್ಪನ್ನದಲ್ಲಿ ಹಿಂದೂಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ !

‘ಪ್ರೈಸ್’ ಈ ಸ್ವಯಂಸೇವಾ ಸಂಘಟನೆ ನಡೆಸಿದ ಸಮೀಕ್ಷೆಯಿಂದ ದೊರೆತ ಮಾಹಿತಿ

ನವದೆಹಲಿ – ‘ಪೀಪಲ್ಸ್ ರಿಸರ್ಚ್ ಆನ್ ಇಂಡಿಯಾಸ್ ಕನ್ಝ್ಯೂಮರ್ ಎಕಾನಮಿ’ (ಪ್ರೈಸ್) ಎಂಬ ಸ್ವಯಂಸೇವಾ ಸಂಸ್ಥೆಯು ನಡೆಸಿರುವ ಸಮೀಕ್ಷೆಯಲ್ಲಿ ದೇಶದಲ್ಲಿ ಮುಸ್ಲಿಮರ ವಾರ್ಷಿಕ ಆದಾಯವು ಶೇ. 28 ರಷ್ಟಾದರೆ ಹಿಂದೂಗಳ ವಾರ್ಷಿಕ ಆದಾಯವು ಶೇ. 19 ರಷ್ಟು ಹೆಚ್ಚಳವಾಗಿರುವುದು ಬಹಿರಂಗವಾಗಿದೆ. ಈ ಸಂಸ್ಥೆಯು ದೇಶದಲ್ಲಿರುವ 165 ಜಿಲ್ಲೆಗಳಲ್ಲಿರುವ 1944 ಹಳ್ಳಿಗಳಲ್ಲಿರುವ 2 ಲಕ್ಷದ 1900 ಕುಟುಂಬಗಳಲ್ಲಿ ಸಮೀಕ್ಷೆ ನಡೆಸಿತ್ತು. ಈ ಅಂಕಿಅಂಶಗಳ ಪ್ರಕಾರ, ಮುಸಲ್ಮಾನ ಕುಟುಂಬಗಳ ವಾರ್ಷಿಕ ಆದಾಯವು 2 ಲಕ್ಷ 73 ಸಾವಿರ ರೂಪಾಯಿಗಳಿಂದ ಶೇ. 27.7ರಷ್ಟು ಹೆಚ್ಚಾಗಿದೆ ಅಂದರೆ 3 ಲಕ್ಷದ 49 ಸಾವಿರ ರೂಪಾಯಿ ಆಗಿದೆ, ಆದರೆ ಹಿಂದೂ ಕುಟುಂಬಗಳ ವಾರ್ಷಿಕ ಆದಾಯವು 2 ಲಕ್ಷ 96 ಸಾವಿರ ರೂಪಾಯಿಗಳಿಂದ ಶೇ. 18.8ರಷ್ಟು ಏರಿಕೆಯಾಗಿ 3 ಲಕ್ಷ 52 ಸಾವಿರ ರೂಪಾಯಿಗಳಾಗಿರುವುದು ಬಹಿರಂಗವಾಗಿದೆ. ಮುಸಲ್ಮಾನ ಸಮಾಜವು ಆರ್ಥಿಕವಾಗಿ ದುರ್ಬಲ ವರ್ಗಗಳಲ್ಲಿ ಬರುತ್ತದೆ. ಇದರಿಂದ ಈ ವರ್ಗದಲ್ಲಿ ತುಲನಾತ್ಮಕ ಉನ್ನತಿಯಿಂದ ಮುಸಲ್ಮಾನ ಕುಟುಂಬಗಳಿಗೆ ಅಧಿಕ ಲಾಭವಾಗಿರುವುದು ಈ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

1. ‘ಪ್ರೈಸ್’ನ ಅಂಕಿ ಅಂಶಗಳ ಪ್ರಕಾರ ಮೇಲ್ವರ್ಗದ ಉತ್ಪಾದನೆ ಶೇ.52ರಿಂದ ಶೇ.45ಕ್ಕೆ ಕುಸಿದಿದೆ. ಮೇಲ್ವರ್ಗದವರ ಉತ್ಪನ್ನದ ಪಾಲು ಅಲ್ಪವಾಗಿರುವುದರಿಂದ ಬಡವರು ಮತ್ತು ಮಧ್ಯಮ ವರ್ಗದವರ ಉತ್ಪನ್ನ ಹೆಚ್ಚಾಗಿದೆ. ಸರಕಾರದ ಉಚಿತ ಧಾನ್ಯ ಯೋಜನೆ, ಕಿಸಾನ ಸಮ್ಮಾನ ನಿಧಿ ಮತ್ತು ವಸತಿ ಯೋಜನೆಗಳು ಸಾಮಾಜಿಕ-ಆರ್ಥಿಕ ಅಂತರವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. (ದೇಶದಲ್ಲಿ ಬಡವರು-ಶ್ರೀಮಂತರ ನಡುವೆ ಅಂತರ ಹೆಚ್ಚುತ್ತಿದೆಯೆಂದು ಹೇಳುವ ಕಾಂಗ್ರೆಸ್ಸಿಗೆ ಕಪಾಳಮೋಕ್ಷ – ಸಂಪಾದಕರು)

2. ದೇಶದಲ್ಲಿರುವ ಸಿಖ್ ಕುಟುಂಬಗಳ ವಾರ್ಷಿಕ ಆದಾಯ 4 ಲಕ್ಷ 40 ಸಾವಿರದಿಂದ 6 ಲಕ್ಷ 93 ಸಾವಿರಗಳ ವರೆಗೆ ಏರಿಕೆಯಾಗಿದೆ. ಜೈನ-ಪಾರ್ಸಿ ಹಾಗೂ ಇತರೆ ಸಣ್ಣ ಸಮುದಾಯಗಳ ವಾರ್ಷಿಕ ಆದಾಯ 3 ಲಕ್ಷ 64 ಸಾವಿರದಿಂದ 5 ಲಕ್ಷ 57 ಸಾವಿರದ ವರೆಗೆ ಏರಿಕೆಯಾಗಿದೆ.

ಸಂಪಾದಕೀಯ ನಿಲುವು

ಸರಕಾರದ ವಿವಿಧ ಸಮಾಜೋಪಯೋಗಿ ಯೋಜನೆಗಳ ಇತರರ ತುಲನೆಯಲ್ಲಿ ಅಧಿಕ ಲಾಭವನ್ನು ಪಡೆದುಕೊಂಡು ಅಲ್ಪಸಂಖ್ಯಾತ ಮುಸಲ್ಮಾನ ಸಮಾಜವು ಆರ್ಥಿಕದೃಷ್ಟಿಯಿಂದ ಸಕ್ಷಮವಾಗುತ್ತಿದೆ. ಆದರೂ ಕಾಂಗ್ರೆಸ್ಸಿಗರು ಮತ್ತು ಸಾಮ್ಯವಾದಿಗಳು `ದೇಶದಲ್ಲಿ ಮುಸಲ್ಮಾನರ ಮೇಲೆ ಅನ್ಯಾಯವಾಗುತ್ತಿದೆ’, ಎಂದು ಕೂಗಾಡುತ್ತಾರೆ.