ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಸಾಧಕರಿಗೆ ಸಹಜವಾಗಿ ಸ್ಥೂಲ ಮತ್ತು ಸೂಕ್ಷ್ಮ ಸ್ತರದಲ್ಲಿ ನೀಡಿದ ಬೋಧನೆ !

ಗೋವಾದ ಫೋಂಡಾದಲ್ಲಿನ ಸುಖಸಾಗರ ಆಶ್ರಮದಲ್ಲಿ ಸಾಧಕರೊಂದಿಗೆ ಕಟ್ಟಡ ನಿರ್ಮಾಣ ಕಾರ್ಯದ ಸೇವೆಯನ್ನು ಮಾಡುತ್ತಿರುವ ಪರಾತ್ಪರ ಗುರು ಡಾ. ಆಠವಲೆ (೧೧.೧೦.೨೦೦೦)

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ; ಅದಕ್ಕೂ ಮೊದಲು ಅವರು ತಮ್ಮ ಸೇವಾಕೇಂದ್ರಗಳು ಮತ್ತು ಆಶ್ರಮಗಳಲ್ಲಿ ಹಿಂದೂ ರಾಷ್ಟ್ರ ನಿರ್ಮಾಣದ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಉತ್ತಮ ವ್ಯವಸ್ಥೆ, ಮಿತವ್ಯಯ ಇತ್ಯಾದಿ ವ್ಯಷ್ಟಿ ಗುಣಗಳು ಮತ್ತು ಅಪಾರ ಸಮಷ್ಟಿ ಗುಣಗಳಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪ್ರತಿಯೊಂದು ಕಾರ್ಯವನ್ನು ಮೊದಲು ತಾವು ಮಾಡಿ ಆ ಮೇಲೆ ಅದನ್ನು ಸಾಧಕರಿಗೆ ಕಲಿಸುತ್ತಾರೆ. ಅದೇ ರೀತಿ ಸಾಧಕರಲ್ಲಿ ಪ್ರೀತಿ, ಕೌಟುಂಬಿಕ ಭಾವನೆ ಹಾಗೂ ವ್ಯಾಪಕತೆ ಮೂಡಲು ಹೇಗೆ ಪ್ರಯತ್ನಿಸಿದರು, ಎಂಬುದನ್ನು ಈ ಲೇಖನದಿಂದ ಕೆಲವು ಉದಾಹರಣೆಗಳ ಮೂಲಕ ಮಂಡಿಸಲು ಪ್ರಯತ್ನಿಸಲಾಗಿದೆ.

ಶ್ರೀಮತಿ ಪೇಠೆಅಜ್ಜಿ (ಈಗಿನ ಪ.ಪೂ. ಪೇಠೆಅಜ್ಜಿ) ಯವರ ೭೫ ನೇ ಹುಟ್ಟುಹಬ್ಬದ ನಿಮಿತ್ತ ಅವರಿಗೆ ಪತ್ರದ ರೂಪದಲ್ಲಿ ಶುಭಾಶಯವನ್ನು ನೀಡುತ್ತಿರುವ ಪ.ಪೂ. ಡಾ. ಆಠವಲೆ

೧. ಪರಾತ್ಪರ ಗುರು ಡಾ. ಆಠವಲೆಯವರು ಆಶ್ರಮದಲ್ಲಿನ ಸಾಧಕರಲ್ಲಿ ಕೌಟುಂಬಿಕಭಾವನೆಯನ್ನು ಮೂಡಿಸುವುದು

೧ ಅ. ಮನೆ-ಮಠಗಳನ್ನು ತ್ಯಜಿಸಿ ಪೂರ್ಣವೇಳೆ ಸಾಧನೆ ಮಾಡುವ ಸಾಧಕರ ಹುಟ್ಟುಹಬ್ಬವನ್ನು ಕುಟುಂಬದಲ್ಲಿನ ವ್ಯಕ್ತಿಗಳ ಹಾಗೆ ಆಚರಿಸಲು ಹೇಳಿ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರ ಮನಸ್ಸಿನಲ್ಲಿ ಕೌಟುಂಬಿಕಭಾವನೆಯನ್ನು ಮೂಡಿಸುವುದು : ‘೩೧.೩.೧೯೯೮ ರಂದು ಅನುರಾಧಾ ವಾಡೆಕರ್ (ಈಗಿನ ಸದ್ಗುರು ಅನುರಾಧಾ ವಾಡೆಕರ್) ಇವರ ಹುಟ್ಟುಹಬ್ಬವಿತ್ತು. ಅವರು ಮತ್ತು ಶ್ರುತಿ ಶೆಲಾರ್ (ಈಗಿನ ಸೌ. ಜಾಹ್ನವಿ ಶಿಂದೆ) ಇವರಿಬ್ಬರೂ ದೈನಿಕ ‘ಸನಾತನ ಪ್ರಭಾತದಲ್ಲಿನ ಬೋಧಚಿತ್ರಗಳನ್ನು ಸಿದ್ಧಪಡಿಸುತ್ತಿದ್ದರು. ಅನುರಾಧಾ ವಾಡೆಕರ್ ಆಗಷ್ಟೇ ಗೋವಾಗೆ ಬಂದಿದ್ದರೂ, ಕೆಲವು ಸಾಧಕರಿಗೆ ಅವರ ಹುಟ್ಟುಹಬ್ಬದ ದಿನಾಂಕ ತಿಳಿದಿತ್ತು. ಆದ್ದರಿಂದ ಎಲ್ಲ ಸಾಧಕರು ಒಟ್ಟಾಗಿ ಅವರ ಹುಟ್ಟುಹಬ್ಬವನ್ನು ಆಚರಿಸಿದರು. ಆಗ ದೈನಿಕ ‘ಸನಾತನ ಪ್ರಭಾತದ ಕಾರ್ಯಾಲಯ ದಿ. ಪ್ರಭಾಕರ (ಭಾಯಿ) ವೇರೆಕರ್ ಮತ್ತು ದಿ. ಡಾ. (ಸೌ.) ಮಂಗಲಾ ವೇರೆಕರ್ (೨೦೨೩ ರಲ್ಲಿ ಅವರಿಬ್ಬರ ಆಧ್ಯಾತ್ಮಿಕ ಮಟ್ಟ ಶೇ. ೬೩.) ಇವರ ನಿವಾಸದಲ್ಲಿತ್ತು. ಆದ್ದರಿಂದ ಅವರು ಕೂಡ ಇದರಲ್ಲಿ ಮುಂದಾಳತ್ವವನ್ನು ವಹಿಸಿದ್ದರು. ಗೋವಾದಲ್ಲಿ ಸಾಧಕರ ವತಿಯಿಂದ ಆಚರಿಸಲಾದ ಮೊದಲ ಹುಟ್ಟುಹಬ್ಬ ಇದಾಗಿತ್ತು. ಅದರ ಬೆನ್ನಿಗೇ ೨ ತಿಂಗಳಲ್ಲಿ ಕು. ಕವಿತಾ ರಾಠಿವಡೆಕರ್ (೨೦೨೩ ರಲ್ಲಿ ಆಧ್ಯಾತ್ಮಿಕ ಮಟ್ಟ ಶೇ. ೬೭) ಇವರ ಹುಟ್ಟುಹಬ್ಬ ಇತ್ತು; ಆಗ ‘ಕವಿತಾ ಇವರ ಜನ್ಮ ದಿನಾಂಕ ಯಾವುದು, ಎಂಬುದು ಯಾರಿಗೂ ತಿಳಿದಿರಲಿಲ್ಲ; ಆದರೆ ಯಾವ ದಿನ ಕವಿತಾ ಇವರ ಹುಟ್ಟುಹಬ್ಬವಿತ್ತೊ, ಅದೇ ದಿನ ಅಂದರೆ ೨೮.೫.೧೯೯೮ ರಂದು ಪ.ಪೂ. ಡಾಕ್ಟರರಿಗೆ ಅದು ತಿಳಿಯಿತು. ಅವರು ತಕ್ಷಣ ಜವಾಬ್ದಾರ ಸಾಧಕರಿಗೆ ತಿಳಿಸಿದರು. ಆಗ ಪ.ಪೂ. ಡಾಕ್ಟರರು ನಮಗೆ ಮುಂದಿನಂತೆ ಹೇಳಿದರು, “ಸಾಧಕರು ಮನೆ-ಮಠಗಳನ್ನು ತ್ಯಜಿಸಿ ಇಲ್ಲಿ ಪೂರ್ಣವೇಳೆ ಸಾಧನೆ ಮಾಡುತ್ತಿದ್ದಾರೆ. ಆದ್ದರಿಂದ ಎಲ್ಲ ಸಾಧಕರು ಒಂದು ಕುಟುಂಬದ ಹಾಗೆ ಇರಬೇಕು. ನಾವೇ ಸಾಧಕರ ಹುಟ್ಟುಹಬ್ಬವನ್ನು ಆಚರಿಸಬೇಕು. ಅನಂತರ ನಾವು ಕವಿತಾ ಇವರಿಗೆ ದೀಪ ಬೆಳಗಿಸಿ (ಆರತಿ ಮಾಡಿ) ಅವರ ಹುಟ್ಟುಹಬ್ಬವನ್ನು ಆಚರಿಸಿದೆವು. ಅನಂತರ ಎಲ್ಲ ಸಾಧಕರ ಹುಟ್ಟುಹಬ್ಬದ ಪಟ್ಟಿಯನ್ನೇ ಮಾಡಲಾಯಿತು ಹಾಗೂ ಆಯಾ ದಿನ ಆಯಾ ಸಾಧಕರಿಗೆ ಆರತಿಯನ್ನೆತ್ತಿ ಅವರ ಹುಟ್ಟುಹಬ್ಬವನ್ನು ಆಚರಿಸಲು ಆರಂಭವಾಯಿತು.

ಕವಿತಾ ಇವರು ಆ ಸಮಯದಲ್ಲಿ ಪ.ಪೂ. ಡಾಕ್ಟರರ ಕೋಣೆಯ ಸ್ವಚ್ಛತೆಯ ಸೇವೆಯನ್ನು ಮಾಡುತ್ತಿದ್ದರು. ನನಗೆ ದೈನಿಕ ‘ಸನಾತನ ಪ್ರಭಾತಕ್ಕೆ ಸಂಬಂಧಿಸಿದ ಸೇವೆ ಮಾಡುವ ಸಾಧಕರ ಬಗ್ಗೆ ಎಷ್ಟು ಆತ್ಮೀಯತೆ ಇತ್ತೋ, ಅಷ್ಟು ಆತ್ಮೀಯತೆ ಪಾಕಶಾಲೆ ಅಥವಾ ಸ್ವಚ್ಛತೆಗೆ ಸಂಬಂಧಿಸಿದ ಸೇವೆ ಮಾಡುವ ಸಾಧಕರ ಬಗ್ಗೆ ಇರಲಿಲ್ಲ. ಈ ಪ್ರಸಂಗದಿಂದ ಪ.ಪೂ. ಡಾಕ್ಟರರು ನನಗೆ ‘ಸಾಧನೆ ಮಾಡುವ ಪ್ರತಿಯೊಬ್ಬರ ಬಗ್ಗೆ ಪ್ರೇಮಭಾವ ಇರಬೇಕು, ಎಂಬುದನ್ನು ಕಲಿಸಿದರು.

ಸೌ. ವಿಜಯಲಕ್ಷ್ಮಿ ಆಮಾತಿ

೧ ಆ. ‘ಸಾಧಕನ ಶರ್ಟಿನ ಬಟನ್ ತುಂಡಾಗಿದ್ದಾಗ, ಅದನ್ನು ಬದಲಾಯಿಸಿ ಹೊಸತನ್ನು ಹಾಕಿಕೊಡದ ತಪ್ಪನ್ನು ಸತ್ಸಂಗದಲ್ಲಿ ಹೇಳಿ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರ ಮನಸ್ಸಿನಲ್ಲಿ ಇತರ ಸಾಧಕರ ಬಗ್ಗೆ ಆತ್ಮೀಯತೆಯನ್ನು ಮೂಡಿಸುವುದು : ೨೦೦೧ ರಲ್ಲಿ ಸನಾತನ ಸಂಸ್ಥೆಯ ಕಾರ್ಯ ಫೋಂಡಾದ ‘ಸುಖಸಾಗರದಲ್ಲಿ ಆರಂಭವಾಯಿತು. ಅಲ್ಲಿ ಕೆಲವು ಕಟ್ಟಡ ನಿರ್ಮಾಣ ಕಾರ್ಯ ಮಾಡಲಿಕ್ಕಿತ್ತು. ಪ.ಪೂ. ಡಾಕ್ಟರರೂ ಈ ಸೇವೆಯನ್ನು ಕಲಿಯಲು ಬರುತ್ತಿದ್ದರು. ಅವರು ಕಲ್ಲುಕೆತ್ತುವುದರಿಂದ ಹಿಡಿದು ಎಲ್ಲ ಕೆಲಸಗಳನ್ನು ಮಾಡಿ ನೋಡಿದರು. ಅವರು ಬೆಳಗಿನ ಸಮಯದಲ್ಲಿ ಕಾಮಗಾರಿಯ ಸೇವೆಯಲ್ಲಿನ ಸಾಧಕರಿಗೆ ಸಹಾಯ ಮಾಡುತ್ತಿದ್ದರು. ಕಾಮಗಾರಿಯ ಸೇವೆಯನ್ನು ಮಾಡಲು ಸಿಂಧುದುರ್ಗದಿಂದ ಕೆಲವು ಸಾಧಕರು ಬಂದಿದ್ದರು. ಅವರಲ್ಲಿ ಓರ್ವ ಸಾಧಕರು ಸುಮಾರು ೪೦ ರಿಂದ ೪೫ ವಯಸ್ಸಿನವರಾಗಿದ್ದರು. ಅವರ ಶರ್ಟಿನ ಎರಡು ಬಟನ್‌ಗಳು ತುಂಡಾಗಿದ್ದವು, ಆದರೂ ಅವರು ಆ ಶರ್ಟನ್ನು ಹಾಗೆಯೆ ಹಾಕಿಕೊಳ್ಳುತ್ತಿದ್ದರು. ಪ.ಪೂ. ಡಾಕ್ಟರರು ವಾರದಲ್ಲಿ ಒಮ್ಮೆ ಬೆಳಗ್ಗೆ ೯.೩೦ ರಿಂದ ೧೧ ಈ ಸಮಯದಲ್ಲಿ ಸತ್ಸಂಗ ತೆಗೆದುಕೊಳ್ಳುತ್ತಿದ್ದರು. ಒಂದು ಸತ್ಸಂಗದಲ್ಲಿ ಪ.ಪೂ. ಡಾಕ್ಟರರು ನಮ್ಮೆಲ್ಲ ಸಾಧಕರಿಗೆ ಮುಂದಿನಂತೆ ಹೇಳಿದರು, “ಈ ಸಾಧಕರ ಶರ್ಟಿನ ಬಟನ್ ತುಂಡಾಗಿದೆ, ಇದು ಎಲ್ಲ ಸಾಧಕರಿಗೂ ಕಾಣಿಸುತ್ತಿದ್ದರೂ ಯಾರೂ ಅವರ ಶರ್ಟಿನ ಬಟನ್ ಹಾಕಿಕೊಡಲಿಲ್ಲ. ಈ ವಯಸ್ಸಿನಲ್ಲಿ ಅವರು ಆ ಕೆಲಸವನ್ನು ಅವರೇ ಮಾಡಿಕೊಳ್ಳ ಬೇಕೇ ? ಇದೇಕೆ ಯಾರಿಗೂ ಗೊತ್ತಾಗಲಿಲ್ಲ ? ನಮ್ಮ ಮನೆಯಲ್ಲಿ ಯಾರದ್ದಾದರೂ ಶರ್ಟಿನ ಬಟನ್ ತುಂಡಾಗಿದ್ದರೆ ನಾವು ಅವರಿಗೆ ಆ ಶರ್ಟನ್ನು ಹಾಗೆಯೆ ಹಾಕಲು ಬಿಡುತ್ತಿದ್ದೇವೆಯೆ ? ಈ ಪ್ರಸಂಗದಿಂದ ಪ.ಪೂ. ಡಾಕ್ಟರರು ‘ನಾವೆಲ್ಲ ಸಾಧಕರು ಒಂದು ಕುಟುಂಬದಲ್ಲಿದ್ದು ಪರಸ್ಪರರಿಗೆ ಆತ್ಮೀಯತೆಯಿಂದ ಸಹಾಯ ಮಾಡಬೇಕು, ಎಂಬುದನ್ನು ಕಲಿಸಿದರು.

೧ ಇ. ‘ಸಾಧಕನಿಗೆ ಜ್ವರ ಇರುವಾಗ ಬಸ್‌ನಲ್ಲಿ ಮನೆಗೆ ಹೋಗಲು ಬಿಡುವುದು, ಈ ತಪ್ಪನ್ನು ತೋರಿಸಿಕೊಟ್ಟು ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರ ಬಗ್ಗೆ ಕೌಟುಂಬಿಕಭಾವನೆಯನ್ನು ಹೆಚ್ಚಿಸಲು ಕಲಿಸುವುದು : ‘ಸುಖಸಾಗರದಲ್ಲಿರುವಾಗ ಎಲ್ಲ ಸಾಧಕರಿಗೆ ಆಶ್ರಮಜೀವನ ಹೊಸದಾಗಿತ್ತು. ಕೆಲವೊಮ್ಮೆ ಸಾಧಕರಿಗೆ ಜ್ವರ ಬಂದರೆ ಅಥವಾ ಅವರಿಗೆ ಅಸ್ವಸ್ಥವೆನಿಸುತ್ತಿದ್ದರೆ, ಆ ಸಾಧಕರು ಮನೆಗೆ ಹೋಗುತ್ತಿದ್ದರು. ‘ನಮ್ಮ ಕಾಳಜಿ ವಹಿಸಲು ಸಾಧಕರು ತಮ್ಮ ಸೇವೆಯ ಸಮಯವನ್ನು ನೀಡುವಂತಾಗಬಾರದು, ಎಂಬುದು ಅವರ ವಿಚಾರವಾಗಿರುತ್ತಿತ್ತು. ಒಮ್ಮೆ ನಿರ್ಮಾಣ ಕಾರ್ಯದ ಸೇವೆ ಮಾಡುವ ಓರ್ವ ವಯಸ್ಸಾದ ಸಾಧಕರಿಗೆ ಜ್ವರ ಬಂದಿತ್ತು. ಆದ್ದರಿಂದ ಅವರು ಜವಾಬ್ದಾರ ಸಾಧಕರಿಗೆ ಹೇಳಿ ಮನೆಗೆ ಹೋದರು. ಅವರ ಮನೆಯು ಬಸ್‌ನಿಂದ ಪ್ರಯಾಣಿಸಿದಾಗ ೧ ರಿಂದ ೧.೩೦ ಗಂಟೆಯ ದೂರದಲ್ಲಿತ್ತು. ಇದು ಪ.ಪೂ. ಡಾಕ್ಟರರಿಗೆ ತಿಳಿದಾಗ ಅವರು ಜವಾಬ್ದಾರ ಸಾಧಕರಿಗೆ ಅವರ ತಪ್ಪನ್ನು ಹೇಳಿದರು. ಅವರು, ‘ಜ್ವರ ಬರುತ್ತಿದ್ದ ವಯಸ್ಸಾದ ಸಾಧಕರನ್ನು ನೀವು ಬಸ್‌ನಲ್ಲಿ ಹೇಗೆ ಕಳುಹಿಸಿದಿರಿ ? ಮನೆಯಲ್ಲಿ ಹಿರಿಯರಿಗೆ ಜ್ವರ ಬರುತ್ತಿದ್ದರೆ ನಾವು ಹೀಗೆ ಹೊರಗೆ ಕಳುಹಿಸುತ್ತೇವೆಯೆ ? ಅವರಿಗೆ ಮನೆಗೆ ಹೋಗಲೇಬೇಕೆಂದು ಅನಿಸಿದ್ದರೆ, ಅವರ ಜೊತೆಗೆ ಒಬ್ಬ ಸಾಧಕನನ್ನಾದರೂ ಕಳುಹಿಸ ಬಹುದಿತ್ತು ಅಥವಾ ನಮ್ಮ ವಾಹನದಿಂದ ಅವರನ್ನು ಮನೆ ತನಕ ಬಿಡಬೇಕಿತ್ತು ಎಂದು ಹೇಳಿದರು. ಸಾಧಕರಿಂದಾಗುವ ಇಂತಹ ತಪ್ಪುಗಳನ್ನು ಪದೇ ಪದೇ ಹೇಳಿ ಪ.ಪೂ. ಡಾಕ್ಟರರು ಸಾಧಕರ ಮನಸ್ಸಿನಲ್ಲಿ ಸಾಧಕರ ವಿಷಯದಲ್ಲಿ ಕೌಟುಂಬಿಕಭಾವನೆಯನ್ನು ಮೂಡಿಸಿದರು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಹಜಾವಸ್ಥೆ : ಒಬ್ಬ ಸಾಧಕನ ಹೊಸ ವಾಹನ ನಡೆಸಿ ನೋಡುತ್ತಿರುವ ಪರಾತ್ಪರ ಗುರು ಡಾ. ಆಠವಲೆ (ಮುಂಬಯಿ, ೧೯೯೭)

೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜಾಗರೂಕತೆ ಮತ್ತು ಸಹಜಾವಸ್ಥೆ !

೨ ಅ. ಮಳೆಗಾಲದಲ್ಲಿ ಮನೆಯ ಮೇಲ್ಛಾವಣಿಯಲ್ಲಿ (ಟೆರೇಸ್) ಒಣಗಲು ಹಾಕಿದ ಬಟ್ಟೆಗಳತ್ತ ಜಾಗರೂಕತೆ ಯಿಂದ ಗಮನವಿಡುವ ಪರಾತ್ಪರ ಗುರು ಡಾ. ಆಠವಲೆ ! : ೧೯೯೮ ರಲ್ಲಿ ದೈನಿಕ ‘ಸನಾತನ ಪ್ರಭಾತದ ಕಾರ್ಯಾಲಯ ಡೋನಾಪಾವಲಾದಲ್ಲಿನ (ದಿ.) ಪ್ರಭಾಕರ ವೇರೆಕರ್ ಮತ್ತು ದಿ. (ಸೌ.) ಮಂಗಲಾ ವೇರೆಕರ್ ಇವರ ನಿವಾಸದಲ್ಲಿತ್ತು. ಅಲ್ಲಿ ಪ.ಪೂ.ಡಾಕ್ಟರರ ಕೋಣೆ ಮೇಲಿನ ಮಾಳಿಗೆಯಲ್ಲಿತ್ತು ಹಾಗೂ ಅವರ ಕೋಣೆಯ ಸಮೀಪವೇ ಮೇಲ್ಛಾವಣಿ ಇತ್ತು. ಪ.ಪೂ. ಡಾಕ್ಟರ್ ಮತ್ತು ಡಾ. (ಸೌ.) ಕುಂದಾ ತಾಯಿ ಸಹಿತ ಎಲ್ಲ ಸಾಧಕರು ಅವರ ಬಟ್ಟೆಗಳನ್ನು ಮೇಲ್ಛಾಣಿಯಲ್ಲಿ (ಟೆರೇಸ್) ಒಣಗಿಸುತ್ತಿದ್ದರು. ಗೋವಾದಲ್ಲಿ ಕ್ಷಣಾರ್ಧದಲ್ಲಿ ಮಳೆ ಬರುತ್ತದೆ ಹಾಗೂ ತಕ್ಷಣ ನಿಂತು ಬಿಸಿಲೂ ಬರುತ್ತದೆ. ಇಂತಹ ಮಳೆಯ ಅಭ್ಯಾಸ ಇಲ್ಲದ ಕಾರಣ ಬಟ್ಟೆಗಳನ್ನು ಒಣಗಿಸುವ ಸಾಧಕರಿಗೆ ಅದು ತಿಳಿಯುತ್ತಿರಲಿಲ್ಲ. ಮೇಲ್ಛಾವಣಿಯ ಸಮೀಪವೇ ಕು. ಅನುರಾಧಾ ವಾಡೆಕರ್ (ಈಗಿನ ಸದ್ಗುರು ಅನುರಾಧಾ ವಾಡೆಕರ್), ಕು. ಶ್ರುತಿ ಶೆಲಾರ್ (ಈಗಿನ ಸೌ. ಜಾಹ್ನವಿ ಶಿಂದೆ) ಮತ್ತು ಇನ್ನೂ ೨-೩ ಸಾಧಕರು ಸೇವೆ ಮಾಡುತ್ತಿದ್ದರು. ಮಳೆ ಬರುವ ಲಕ್ಷಣ ಅವರಿಗೆ ಕಾಣಿಸಿದ ತಕ್ಷಣ ಮೇಲಿರುವ ಬಟ್ಟೆಗಳನ್ನು ತೆಗೆಯಲು ಓಡುತ್ತಿದ್ದರು; ಆದರೆ ಅದಕ್ಕೂ ಮೊದಲೆ ಪ.ಪೂ. ಡಾಕ್ಟರರು ಎಲ್ಲ ಬಟ್ಟೆಗಳನ್ನು ತೆಗೆದಿಡುತ್ತಿದ್ದರು. ಸ್ವಲ್ಪ ಸಮಯದ ನಂತರ ಬಿಸಿಲು ಬಂದಾಗ ಆ ಸಾಧಕರು ಪುನಃ ಆ ಬಟ್ಟೆಗಳನ್ನು ಒಣಗಿಸಲು ಮೇಲೆ  ಹೋಗುವಷ್ಟರಲ್ಲಿ ಪ.ಪೂ. ಡಾಕ್ಟರರು ಪುನಃ ಆ ಬಟ್ಟೆಗಳನ್ನು ಒಣಗಿಸಲು ಹಾಕಿಡುತ್ತಿದ್ದರು.

೨ ಆ. ಮಳೆಗಾಲದಲ್ಲಿ ಬಟ್ಟೆಗಳನ್ನು ಒಣಗಿಸುವಾಗ ‘ಹಗ್ಗದ ಆಚೆಗಿನ ಬಟ್ಟೆಯ ಭಾಗ ದೊಡ್ಡದು ಹಾಗೂ ಈಚೆಗಿನ ಭಾಗ ಚಿಕ್ಕದಾಗಿ ಮಾಡುವುದರಿಂದ ಬಟ್ಟೆಗಳು ಬೇಗನೆ ಒಣಗುತ್ತವೆ, ಎಂಬುದನ್ನು ಪರಾತ್ಪರ ಗುರು ಡಾ. ಆಠವಲೆಯವರು ಕಲಿಸುವುದು : ಒಮ್ಮೆ ಓರ್ವ ಸಾಧಕಿ ಮೇಲ್ಛಾವಣಿಯಲ್ಲಿ ಹಗ್ಗದ ಮೇಲೆ ಬಟ್ಟೆಗಳನ್ನು ಒಣಗಲು ಹಾಕುವಾಗ ಅವಳು ಬಟ್ಟೆಗಳ ಎರಡೂ ತುದಿಗಳನ್ನು ಜೋಡಿಸಿ ವ್ಯವಸ್ಥಿತವಾಗಿ ಒಣಗಿಸಲು ಹಾಕುತ್ತಿದ್ದಳು. ಆಗ ಪ.ಪೂ. ಡಾಕ್ಟರರು ಅಲ್ಲಿಗೆ ಬಂದು ಆ ಸಾಧಕಿಗೆ ಮುಂದಿನಂತೆ ಹೇಳಿದರು, “ಬೇರೆ ಸಮಯದಲ್ಲಿ ಹಗ್ಗದ ಮೇಲೆ ಬಟ್ಟೆಗಳನ್ನು ಒಣಗಲು ಹಾಕುವಾಗ ಅದರ ತುದಿಗಳನ್ನು ಸರಿಯಾಗಿ ಜೋಡಿಸಿ ಹಾಕಬೇಕು; ಆದರೆ ಮಳೆಗಾಲದಲ್ಲಿ ಬಟ್ಟೆಗಳು ಬೇಗನೆ ಒಣಗುವುದಿಲ್ಲ. ಆದ್ದರಿಂದ ಹಗ್ಗದ ಆಚೆಗಿನ ಬಟ್ಟೆಯ ಭಾಗ ದೊಡ್ಡದಾಗಿಟ್ಟು ಈಚೆಗಿನ ಭಾಗವನ್ನು ಸ್ವಲ್ಪ ಚಿಕ್ಕದಾಗಿಡಬೇಕು. ಅದರಿಂದ ಗಾಳಿಗೆ ಬಟ್ಟೆಗಳು ಅಲ್ಲಾಡುತ್ತಾ ಬೇಗನೆ ಒಣಗುತ್ತವೆ.

ಈ ಮೇಲಿನ ಎರಡೂ ಪ್ರಸಂಗಗಳಿಂದ ಪ.ಪೂ. ಡಾಕ್ಟರರ ಜಾಗರೂಕತೆ ಮತ್ತು ಸಹಜಾವಸ್ಥೆಯು ದೃಢವಾಗಿ ಅರಿವಾಗುತ್ತದೆ.

– ಸೌ. ವಿಜಯಲಕ್ಷ್ಮಿ ಆಮಾತಿ, ಫೋಂಡಾ, ಗೋವಾ. (೧೫.೫.೨೦೨೪)