ಪರಾತ್ಪರ ಗುರು ಡಾ. ಆಠವಲೆಯವರು ಶಾಲಾ ಜೀವನದಲ್ಲಿ ಬರೆದ ಪ್ರಬಂಧ

ಕು. ಜಯಂತ ಆಠವಲೆ (೧೪ ವರ್ಷಗಳು, ವರ್ಷ ೧೯೫೬)

ರಸ್ತೆ ಬದಿಯ ದೀಪದ ಆತ್ಮಕಥನ !

ಶ್ರೀಮನ್ನಾರಾಯಣನ ಅಂಶವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ವಿದ್ಯಾರ್ಥಿ ದೆಶೆಯಲ್ಲಿರುವಾಗ ಬರೆದ ಪ್ರಬಂಧವು ‘ಬೆಳೆಯುವ ಪೈರು ಮೊಳಕೆಯಲ್ಲಿ ಈ ಗಾದೆಮಾತಿನಂತೆ ಅವರಲ್ಲಿರುವ ದೇವತ್ವದ ಅನುಭೂತಿ ನೀಡುವಂತಹದ್ದಾಗಿದೆ. ಅವರ ಲೇಖನದಲ್ಲಿರುವ ಪ್ರಬುದ್ಧತ್ವ, ಶಬ್ದಗಳ ಆಯ್ಕೆ, ವಿಷಯದ ಅಭ್ಯಾಸ, ಅಲಂಕಾರಿಕ ಶಬ್ದಪ್ರಯೋಗ ಮತ್ತು ಕಾಲಾತೀತತೆ ಈ ವಿಷಯಗಳು ಇದರಿಂದ ಗಮನಕ್ಕೆ ಬರುತ್ತದೆ.

೨೦.೭.೫೭

ಜಯಂತ ಆಠವಲೆ

೧. ದೀಪದ ಸ್ಥಾನ

‘ಸೂರ್ಯನಷ್ಟು ಅಪಾರ ಪ್ರಕಾಶವು ನಮ್ಮ ದೀಪಕುಲಗಳಲ್ಲಿ (ದೀಪಗಳ ಸಂಕುಲದಲ್ಲಿ) ಇಲ್ಲ, ಆದರೂ ನಮ್ಮ ಕಾರ್ಯದ ಮಹತ್ವ ಅಪಾರವಾಗಿದೆ. ಉಪವನದಲ್ಲಿರುವ ಮರಗಿಡಗಳಿಗೆ ಧಾರಾಕಾರ ಮಳೆಯಿಂದ ಅಷ್ಟೇನು ಉಪಯೋಗವಾಗುವುದಿಲ್ಲ; ಆದರೆ ಗ್ರೀಷ್ಮಋತುವಿನ ಉರಿಬಿಸಿಲಿನಿಂದ ಭೂಮಿ ಬೇಯುತ್ತಿರುವಾಗ ಮರಗಿಡಗಳಿಗೆ ಹೂದೋಟದ ಕಾವಲುಗಾರನು ಹಾಕುವ ಒಂದು ತಂಬಿಗೆ ನೀರಿಗೆ ಮರಗಿಡಗಳ ಜೀವನದಲ್ಲಿ ಇರುವ ಸ್ಥಾನವೇ ಅಖಿಲ ಮನುಕುಲದ ಜೀವನದಲ್ಲಿ ನಮ್ಮ ದೀಪಕುಲದ್ದಾಗಿದೆ. ನನ್ನ

ಸಹೋದರರಲ್ಲಿ ಕೆಲವರು ದೇವಸ್ಥಾನ ಮತ್ತು ಮನೆಗಳನ್ನು ಪ್ರಕಾಶಿತ ಗೊಳಿಸುತ್ತಿದ್ದಾರೆ. ಆದರೆ ‘ನಮ್ಮ ಈ ದೀಪಕುಲದಲ್ಲಿ ರಸ್ತೆಯ ಬದಿಯ ದೀಪದ ಕಂಬದ ಮೇಲೆ ವಿರಾಜಮಾನವಾಗಿರುವ ನಾನೇ ಒಬ್ಬ ‘ಕುಲದೀಪಕನಾಗಿದ್ದೇನೆ; ಎಂದು ಆತ್ಮಸ್ತುತಿಯೊಂದಿಗೆ, ನಾನು ಎದೆತಟ್ಟಿಕೊಂಡು ಹೇಳಬಲ್ಲೆನು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಹಸ್ತಾಕ್ಷರದಲ್ಲಿರುವ ಪ್ರಬಂಧ

೨. ಆಗಮನ ಮತ್ತು ಆನಂದೋತ್ಸವ

ಆ ದಿನಗಳು ಇಂದಿಗೂ ನನಗೆ ನನ್ನ ಕಣ್ಮುಂದೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಒಂದು ಕತ್ತಲೆಯ ಓಣಿಯಲ್ಲಿ ಆ ದಿನ ನನ್ನ ಆಗಮನವಾಗಿತ್ತು. ಕಣ್ಣುಗಳಿದ್ದವರನ್ನೂ ರಾತ್ರಿಯ ಸಮಯದಲ್ಲಿ ಕುರುಡರಂತೆ ಮಾಡುವ ಕತ್ತಲೆಯ ಸಾಮ್ರಾಜ್ಯವು ನನ್ನ ಆಗಮನದೊಂದಿಗೆ ಲುಪ್ತವಾಗಿತ್ತು. ಅಬಾಲವೃದ್ಧರು ಎಲ್ಲರೂ ನನ್ನ ಜನ್ಮೋತ್ಸವವನ್ನು ದೊಡ್ಡ ಉತ್ಸಾಹದಿಂದ ಆಚರಿಸುತ್ತಿದ್ದರು. ಕೆಲವರಂತೂ ನನ್ನ ಬಗ್ಗೆ ‘ರಾತ್ರಿಯ ಆ ಕಡುಗತ್ತಲೆಯ, ಭಯಾನಕ ಕತ್ತಲೆಯಲ್ಲಿ | ಯೋಗ್ಯ ಜನರಿಗೆ ಯೋಗ್ಯ ಮಾರ್ಗ ತೋರಿಸಿ, ಮಾರ್ಗ ಬೆಳಗುವುದು | |

ಈ ರೀತಿ ಗೌರವಪೂರ್ಣ ಕಾವ್ಯಗಳನ್ನು ಕೂಡ ರಚಿಸಿದರು. ‘ಇಂತಹ ಜನರ ಸೇವೆಯಲ್ಲಿ ಇನ್ನು ಮುಂದೆ ನನ್ನ ಸಂಪೂರ್ಣ ಜೀವನ ಮುಡುಪಾಗಿಡುತ್ತೇನೆ ಈ ಕಲ್ಪನೆಯಿಂದಲೇ ನನಗೆ ಅತ್ಯಂತ ಆನಂದ ವಾಯಿತು. ಆ ದಿನ ನನಗೆ ನನ್ನ ಜನ್ಮ ಸಾರ್ಥಕವಾದಂತೆ ಎನಿಸಿತು.

೩. ಸೇವೆ ಮತ್ತು ಉಪಯೋಗ

ಒಬ್ಬರು ಹೇಳಿದ್ದಾರೆ, ‘ಮಾನವ ಆಯೆ, ಮಾನವ ಜಾಯೆ, ಫಿರಬಿ ಕಬಸೆ ಅಡಾ (ಅಂದರೆ ಕರ್ತವ್ಯ ಮಾಡುತ್ತಾ) ಖಡಾ ಹೈ | ದೇವಸ್ಥಾನಗಳು, ಆಸ್ಪತ್ರೆಗಳು, ಪ್ರಾಂಗಣ, ಓಣಿಗಳು ಈ ಸ್ಥಳ ಗಳಲ್ಲಿ ಜನರು ನಾನಿರುವುದರಿಂದ ನಿರ್ಭಯವಾಗಿ ಓಡಾಡುತ್ತಿರುತ್ತಾರೆ; ಆದರೆ ನಾನು ಇಂತಹ ಸ್ಥಳಗಳಲ್ಲಿ ಕಣ್ಣುಗಳಲ್ಲಿ ಎಣ್ಣೆ ಹಾಕಿಕೊಂಡು ವಿಚಾರ ಮಾಡುತ್ತಿರುತ್ತೇನೆ, ಈ ಸ್ಥಳದಲ್ಲಿ ಒಂದು ಕ್ಷಣ ಕತ್ತಲೆಯಾದರೂ ಎಷ್ಟೋ ಅನರ್ಥಗಳು ಜರುಗಬಹುದು. ನನಗೆ ನನ್ನ ಸ್ಥಾನವನ್ನು ಸಹಸ್ರರಶ್ಮಿ ಸೂರ್ಯನಾರಾಯಣ ಉದಯವಾಗುವವರೆಗೆ ಬಿಡಲು ಸಾಧ್ಯವಿಲ್ಲ. ಈ ಜಗತ್ತಿನ ಒಳ್ಳೆಯದು ಕೆಟ್ಟದ್ದು ಎಲ್ಲ ರೀತಿಯ ಅನುಭವವನ್ನು ನಾನು ಪಡೆದಿದ್ದೇನೆ. ನನ್ನ ಎದುರಿನ ಮನೆಯಲ್ಲಿ ವಾಸಿಸುವ ಒಂದು ಬಡ ಕುಟುಂಬಕ್ಕೆ ಸಹಾಯ ಮಾಡಿ ನಾನು ಅವರ ದೀಪಕ್ಕೆ ತಗಲುವ ವೆಚ್ಚವನ್ನು ಉಳಿಸುತ್ತೇನೆ. ಹಾಗೆಯೇ ಯಾರೂ ಆಶ್ರಯ ನೀಡದಿದ್ದ, ಎಷ್ಟೋ ಜಾಣ ಮತ್ತು ಆಶಾವಾದ ಮಕ್ಕಳಿಗೆ ಆಶ್ರಯವನ್ನು ನೀಡಿ ನಾನು ಅವರ ಜ್ಞಾನಾಭಿವೃದ್ಧಿಗೆ ನೆರವಾಗುತ್ತಿದ್ದೇನೆ.  ಪ್ರತಿವರ್ಷದ ಪರೀಕ್ಷೆಯಲ್ಲಿನ  ಅವರಿಗೆ ಸಿಗುವ ಯಶಸ್ಸು ನೋಡಿ ನನಗೆ ಬಹಳ ಆನಂದವಾಗುತ್ತದೆ. ನಾಯಿಯ ಭಯದಿಂದ ಓಡುವ ಬೆಕ್ಕುಗಳಿಗೆ ಕೂಡ ಆಶ್ರಯವನ್ನು ನೀಡಿ ನಾನು ಅವರ ಧನ್ಯವಾದದ ಸ್ಥಾನವಾಗಿದ್ದೇನೆ.

೪. ಅಂಧತ್ವ

(ಆದರೆ) ನನ್ನನ್ನು ತಿರಸ್ಕರಿಸುವ, ನನ್ನ ಸದ್ಗುಣಗಳನ್ನು ದುರ್ಗುಣಗಳೆಂದು ತಿಳಿಯುವವರೇನೂ ಕಡಿಮೆ ಇಲ್ಲ. ಕಡುಗತ್ತಲೆಯಲ್ಲಿ ಕರಾಳ ಕೃತ್ಯಗಳನ್ನು ಮಾಡುವ ಕಳ್ಳಕಾರರು ಮುಂತಾದ ದುಷ್ಟ ಜನರಿಗೆ ನಾನು ಅವರ ಕಣ್ಣೆದುರಿಗೂ ಬೇಡವಾಗಿರುತ್ತೇನೆ. ಕೊನೆಗೆ ಹಾಗೆಯೇ ಆಯಿತು. ಹಿಂದಿನ ವರ್ಷ ಯಾವುದೋ ರಾಜಕೀಯ ಗಲಾಟೆ ನಡೆದಿತ್ತು. ಆಗ ಯಾರೋ ಒಬ್ಬನು ಬಂದನು ಮತ್ತು ಅವನು ಕಲ್ಲು ಎಸೆದು ನನ್ನ ಕಣ್ಣನ್ನೆ ಒಡೆದನು. ಅಲ್ಲಿಗೆ ಮುಗಿಯಿತು ! ಎಲ್ಲೆಡೆ ಸೈತಾನನ ರಾಜ್ಯ ಶಿಖರಕ್ಕೇರಿತು.

೫. ನಗರಪಾಲಿಕೆಯು ತಕ್ಷಣವೇ ಉಪಚಾರ ಮಾಡುವುದು

ಆದರೆ ನನ್ನ ವಿಧಾತನಿಗೆ (ನಗರಪಾಲಿಕೆಗೆ) ನನ್ನ ಬಗ್ಗೆ ಬಹಳ ಕಾಳಜಿ ಇತ್ತು. ‘ನನ್ನ ಕಣ್ಣಿಗೆ ಗಾಯವಾಗಿದೆ ಎಂದು ತಿಳಿದ ಬಳಿಕ ವಿಧಾತನು ಓರ್ವ ತಜ್ಞನನ್ನು ತಕ್ಷಣವೇ ಕಳುಹಿಸಿದನು. ನನ್ನ ಆರೋಗ್ಯ ಸ್ವಲ್ಪ ಸರಿಯಿಲ್ಲವೆಂದ ಕೂಡಲೇ ನನ್ನ ಸೇವೆಗೆ ಜನರು ಬರುತ್ತಾರೆ. ನನಗೆ ಪ್ರತಿದಿನ ಸ್ನಾನ ಮಾಡಿಸಲು ಮತ್ತು ಮಲಗಿಸಲು ಸ್ವತಂತ್ರ ನೌಕರನನ್ನು ನಿಯೋಜಿಸಿದ್ದಾರೆ. ಇಷ್ಟು ಮಾಡಿದರೂ ಕೆಲವೊಮ್ಮೆ ಚೇತನ ಆತ್ಮ ನನ್ನ ಜಡ ಶರೀರವನ್ನು ಬಿಟ್ಟು ಹೋದರೂ, ನಾನು ಪುನರ್ಜನ್ಮವನ್ನು ಪುನಃ ಜಡ ಶರೀರದಲ್ಲಿ ತೆಗೆದುಕೊಳ್ಳುತ್ತೇನೆ.

೬. ಕೆಟ್ಟ ವಿಷಯಗಳು

ಮಕ್ಕಳ ಅಪಹರಣ, ಯುವಕ-ಯುವತಿಯರ ಪಲಾಯನ, ಹಗಲಿನಲ್ಲಿ ಸಜ್ಜನರಂತೆ ಕಾಣುವ; ಆದರೆ ರಾತ್ರಿ ಮತ್ತೆಲ್ಲಿಗೋ ಹೋಗುವ ಜನರನ್ನು ನೋಡಿ, ನನಗೆ ಈ ಜಗತ್ತಿನ ಬಗ್ಗೆ ಬಹಳ ಅಸಹ್ಯವೆನಿಸುತ್ತಿದೆ ಮತ್ತು ‘ಕಣ್ಣು ಮುಚ್ಚಿಕೊಳ್ಳಬೇಕು, ಎಂದು ಎನಿಸತೊಡಗುತ್ತಿದೆ ಕಳ್ಳರಿಗೆ ಎಷ್ಟೋ ಸಲ ಕಳ್ಳತನ ಮಾಡುವ ಬಗ್ಗೆ ಗುಪ್ತವಾಗಿ ನಿಶ್ಚಯಿಸಿದ್ದೇನೆಂದು ಅನಿಸುತ್ತದೆ; ಆದರೆ ಸರ್ವಜ್ಞನಾಗಿರುವ ನಾನು ಎಲ್ಲವನ್ನೂ ನೋಡುತ್ತಲೇ ಇರುತ್ತೇನೆ. ಕಳ್ಳತನದಿಂದ ತಂದಿರುವ ಸಾಮಗ್ರಿಗಳನ್ನು ಹಂಚಿಕೊಳ್ಳುವಾಗ ನಾನು ನೋಡಿದ್ದೇನೆ; ಆದರೆ ‘ಎಂದಿಗೂ ಚಾಡಿ ಹೇಳಬಾರದು’; ಎಂದು ನಾನು ಅವರ ವಿರುದ್ಧ ಒಂದು ಚಕಾರ ಮಾತನಾಡುವುದಿಲ್ಲ.

೭. ಜನರ ಕೃತಘ್ನತೆ

ಪೂಜೆಯಲ್ಲಿ ದೀಪಪೂಜೆಯನ್ನು ದೇವರಪೂಜೆಯ ಒಂದು ಅಂಗವೆಂದು ತಿಳಿಯಲಾಗುತ್ತದೆ; ಆದರೆ ಒಂದು ವೇಳೆ ಅಲ್ಲಿರುವ ನಂದಾದೀಪ, ಇತರ ದೀಪಗಳ ಪೂಜೆಯನ್ನು ಮಾಡಲಾಗುತ್ತದೆ. ಮಾನವನಿಗೆ ಇಷ್ಟು ರೀತಿ ಯಲ್ಲಿ ಸಹಾಯ ಮಾಡಿದರೂ ಕೂಡ ನನ್ನ ಪೂಜೆ ಮಾಡುವುದಂತೂ ಬಹಳ ದೂರವೇ ಉಳಿಯಿತು; ಆದರೆ ಅವರು ನನ್ನ ಬಳಿ ಅಪಹಾಸ್ಯದಿಂದ ಮತ್ತು ತುಚ್ಛವಾಗಿ ನೋಡುತ್ತಾರೆ. ಅದನ್ನು ನೋಡಿ ನನಗೆ ಬಹಳ ಕೆಟ್ಟದೆನಿಸುತ್ತದೆ; ಆದರೆ ನೀವು ನನ್ನೊಂದಿಗೆ ಕೆಟ್ಟ ರೀತಿಯಲ್ಲಿ ನಡೆದುಕೊಂಡರೂ, ನನಗೆ  ನಿಮ್ಮೊಂದಿಗೆ ‘ಜಬತಕ ತನಮೆ ಪ್ರಾಣ ಹೈ, ತಬತಕ ಮಾರ್ಗ ಹೀ ಬತಾವೂಂಗಾ | ಹಾಗೆಯೇ  ಒಳ್ಳೆಯ ರೀತಿಯಿಂದ ನಡೆದುಕೊಳ್ಳುವ ಬುದ್ಧಿಯನ್ನು ದೇವರೇ ನನಗೆ ನೀಡಬೇಕು, ಇಷ್ಟೇ ದೇವರಲ್ಲಿ ನನ್ನ ಬೇಡಿಕೆಯಾಗಿದೆ.