Museum in Ayodhya : ಅಯೋಧ್ಯೆಯಲ್ಲಿ ದೇವಸ್ಥಾನದ ವತಿಯಿಂದ ಸಂಗ್ರಹಾಲಯ ನಿರ್ಮಾಣ !

  • ೭೫೦ ಕೋಟಿ ರೂಪಾಯ ಖರ್ಚು

  • ‘ಟಾಟಾ ಸನ್ಸ್’ ಕಂಪನಿಗೆ ಜವಾಬ್ದಾರಿ

ಅಯೋಧ್ಯೆ (ಉತ್ತರಪ್ರದೇಶ) – ಅಯೋಧ್ಯೆಯಲ್ಲಿ ದೇವಸ್ಥಾನದ ಒಂದು ಬೃಹತ್ ಸಂಗ್ರಹಾಲಯ ಕಟ್ಟಲಾಗುವುದು. ಈ ಸಂಗ್ರಹಾಲಯವನ್ನು ಟಾಟಾ ಗ್ರೂಪ್ ನವರು ಕಟ್ಟುವರು ಅದಕ್ಕಾಗಿ ಸುಮಾರು ೬೫೦ ಕೋಟಿ ರೂಪಾಯಿ ವೆಚ್ಚವಾಗುವುದು. ಉತ್ತರಪ್ರದೇಶ ಸರಕಾರದ ಸಚಿವ ಸಂಪುಟದಿಂದ ಈ ಪ್ರಸ್ತಾವಕ್ಕೆ ಅನುಮತಿ ದೊರೆತಿದೆ. ಸರಕಾರದ ‘ಎಕ್ಸ್’ ಖಾತೆಯಿಂದ ಈ ಮಾಹಿತಿ ನೀಡಲಾಗಿದೆ. ಅಂತರಾಷ್ಟ್ರೀಯ ಮಟ್ಟದ ಸಂಗ್ರಹಾಲಯ ಕಟ್ಟುವುದಕ್ಕಾಗಿ ಮತ್ತು ಅದನ್ನು ಮುಂದುವರಿಸುವುದಕ್ಕಾಗಿ ಭೂಮಿಯ ಬಳಕೆಗಾಗಿ ಅನುಮತಿ ನೀಡುವ ಪ್ರಸ್ತಾವಕ್ಕೂ ಸಮ್ಮತಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

೧. ಸಂಗ್ರಹಾಲಯದ ನಿರ್ಣಯದ ಕುರಿತು ಉತ್ತರಪ್ರದೇಶದ ಪ್ರವಾಸೋದ್ಯಮ ಸಚಿವ ಜಯವೀರ ಸಿಂಗ್ ಇವರು ಮಾತನಾಡಿ, ದೇವಸ್ಥಾನದ ಸಂಗ್ರಹಾಲಯಕ್ಕಾಗಿ ಈ ಭೂಮಿ ಟಾಟಾ ಗ್ರೂಪ್ ೯೦ ವರ್ಷಕ್ಕಾಗಿ ಗುತ್ತಿಗೆ ಮೇರೆಗೆ ೧ ರೂಪಾಯಿ ಟೋಕನ್ ಅಡ್ವಾನ್ಸ್ ನೀಡಲಾಗುವುದು. ಈ ಸಂಗ್ರಹಾಲಯ ಅತ್ಯಾಧುನಿಕವಾಗಿದ್ದು ಮತ್ತು ಅಂತರಾಷ್ಟ್ರೀಯ ಮಾನದಂಡದ ಪ್ರಕಾರ ಕಟ್ಟಲಾಗುವುದು. ಭಾರತದಲ್ಲಿನ ಪ್ರಸಿದ್ಧ ದೇವಸ್ಥಾನದ ವಾಸ್ತು ಮತ್ತು ಇತಿಹಾಸ ಇದರ ಮಾಹಿತಿ ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುವುದು. ಈ ಪ್ರಾಸ್ತಾವಿಕ ಸಂಗ್ರಹಾಲಯದಲ್ಲಿ ‘ಲೈಟ್ ಅಂಡ್ ಸೌಂಡ್ ಶೋ’ ಇದರ ವ್ಯವಸ್ಥೆ ಕೂಡ ಮಾಡಲಾಗುವುದು ಎಂದು ತಿಳಿಸಿದರು.

೨. ಈ ಸಂಗ್ರಹಾಲಯದ ಕಾಮಗಾರಿ ಬಗ್ಗೆ ಟಾಟಾ ಸನ್ಸ್ ಇವರು, ಅವರ ‘ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ’ ನಿಧಿಯಿಂದ ೬೫೦ ಕೋಟಿ ರೂಪಾಯಿ ವೆಚ್ಚದಲ್ಲಿ ಈ ದೇವಸ್ಥಾನದ ಸಂಗ್ರಹಾಲಯ ಕಟ್ಟುವರು. ಅಯೋಧ್ಯೆಯಲ್ಲಿ ಪ್ರಸ್ತುತ ಮಾಂಝಾ ತಾಲೂಕಿನ ಜಾಮತಾರ ಗ್ರಾಮದಲ್ಲಿ ಈ ಸಂಗ್ರಹಾಲಯ ಕಟ್ಟಲಾಗುವುದು. ಆದ್ದರಿಂದ ಗ್ರಾಮದಲ್ಲಿ ಇನ್ನಷ್ಟು ಮೂಲಭೂತ ಸೌಲಭ್ಯಾ ಮಾಡಲಾಗುವುದು. ಅದಕ್ಕಾಗಿ ಸುಮಾರು ೧೦೦ ಕೋಟಿ ರೂಪಾಯಿ ಖರ್ಚು ಮಾಡಲಾಗುವುದು, ಎಂದರೆ ಒಟ್ಟು ೭೫೦ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಾಗುವುದು ಎಂದು ಹೇಳಿದರು.

೩. ಟಾಟಾ ಗ್ರೂಪ್ ನಿಂದ ಈ ಸಂಗ್ರಹಾಲಯ ಕಟ್ಟುವ ಪ್ರಸ್ತಾವ ಮೊದಲ ಬಾರಿ ಕಳೆದ ವರ್ಷದಲ್ಲಿ ಮಂಡಿಸಲಾಗಿತ್ತು. ಅದರ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೆ ಈ ಯೋಜನೆಯ ಮಾಹಿತಿ ನೀಡಲಾಯಿತು. ಈ ಪ್ರಸ್ತಾವ ಪ್ರಧಾನಮಂತ್ರಿ ಅವರಿಗೆ ಬಹಳ ಹಿಡಿಸಿತು. ಬಳಿಕ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರ ಜೊತೆಗೆ ಹಿರಿಯ ಅಧಿಕಾರಿಗಳಿಗೆ ಈ ಯೋಜನೆಯ ಬಗ್ಗೆ ವಿಸ್ತೃತ ಮಾಹಿತಿ ನೀಡಲಾಯಿತು ಮತ್ತು ಈಗ ಈ ಪ್ರಸ್ತಾವಕ್ಕೆ ಅನುಮತಿ ದೊರೆತಿದೆ.

೪. ಅಯ್ಯೋದ್ಯೆಯಲ್ಲಿನ ಶ್ರೀ ರಾಮನ ದರ್ಶನಕ್ಕಾಗಿ ಬರುವ ಭಕ್ತರು ಮತ್ತು ಪ್ರವಾಸಿಗಳಿಗೆ ಈ ಸಂಗ್ರಹಾಲಯಕ್ಕೂ ಕೂಡ ಭೇಟಿ ನೀಡಲು ಮತ್ತು ಅದರಿಂದ ಆ ಸ್ಥಳ ಪ್ರವಾಸೋದ್ಯಮ ಎಂದು ಇನ್ನಷ್ಟು ವಿಕಾಸವಾಗುವುದೆಂದು ಅಪೇಕ್ಷೆ ಇದೆ.

೫. ಶ್ರೀರಾಮ ಮಂದಿರದ ಕಾರ್ಯ ಕೂಡ ೨೦೨೫ ವರೆಗೆ ಪೂರ್ಣಗೊಳ್ಳುವುದು. ಮೊದಲನೆಯ ಮಹಡಿಯ ಕಾರ್ಯ ಜುಲೈ ಕೊನೆವರೆಗೆ ಪೂರ್ಣವಾಗುವುದು.

ಸಂಪಾದಕೀಯ ನಿಲುವು

ದೇವಸ್ಥಾನದ ಸಂಗ್ರಹಾಲಯ ಕಟ್ಟುವುದಕ್ಕಾಗಿ ದೇಶದಲ್ಲಿನ ಎಲ್ಲಾ ದೇವಸ್ಥಾನಗಳು ಹೇಗೆ ಒಳ್ಳೆಯ ರೀತಿ ಇರಬಹುದು ? ಮತ್ತು ಇಲ್ಲಿಯ ಸಾತ್ವಿಕತೆ ಹೇಗೆ ಉಳಿಸಿಕೊಳ್ಳಬಹುದು ?, ಇದಕ್ಕಾಗಿ ಕೂಡ ಪ್ರಯತ್ನ ಆಗಬೇಕು !