|
ಬೆಂಗಳೂರು – ನಗರದ ಅಮಾನಿಕೆರೆಯಲ್ಲಿ 3 ಸಾವಿರ ಫ್ಲಾಟ್‌ಗಳನ್ನು ಹೊಂದಿರುವ ‘ಪ್ರಾವಿಡೆಂಟ್ ವೆಲ್‌ವರ್ತ್ ಸಿಟಿ ಅಪಾರ್ಟ್‌ಮೆಂಟ್’ ಸಂಕೀರ್ಣದಲ್ಲಿ ಹಿಂದೂಗಳು ನಿರ್ಮಿಸಿರುವ ತುಳಸಿ ಕಟ್ಟೆಯನ್ನು ಮುಸ್ಲಿಮರು ವಿರೋಧಿಸಿ ಅದನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಈ ಜಾಗದಲ್ಲಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಲಾಗಿದೆ. ಈ ಬೇಡಿಕೆಯಿಂದಾಗಿ ಇಲ್ಲಿ ನೆಲೆಸಿರುವ ಸಿಖ್ಖರು ಕೂಡ ಗುರುದ್ವಾರ ನಿರ್ಮಿಸಲು ಅನುಮತಿ ಕೋರಿದ್ದಾರೆ. ಇದರಿಂದ ಸಂಕೀರ್ಣದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಮುಸ್ಲಿಮರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಪ್ರಸ್ತುತ ಈ ಸಂಕೀರ್ಣದಲ್ಲಿ 15 ಸಾವಿರ ಜನರು ವಾಸಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಿಂದ ತಂಡವೊಂದು ಬಂದು ಸಂಕೀರ್ಣಕ್ಕೆ ಭೇಟಿ ನೀಡಲಿದೆ.