ರಾಮನಾಥಿ – ಸಿಬಿಐನ ತನಿಖಾಧಿಕಾರಿ ಸುಭಾಷ್ ರಾಮರೂಪ ಸಿಂಗ್ ನನ್ನನ್ನು ಸುಳ್ಳು ಆರೋಪದ ಮೇಲೆ ಬಂಧಿಸಿದ್ದರು. ‘ಬೇರೆ ರಾಜ್ಯದಲ್ಲಿ ಪ್ರಕರಣದಡಿ ಬಂಧಿಸಲಾಗುತ್ತಿದೆ’, ಎಂದು ಸಿಂಗ್ ನನಗೆ ತಿಳಿಸಿದರು. ಸುಭಾಷ ರಾಮರೂಪ ಸಿಂಗ್ ಅವರು ನನ್ನ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿದ್ದಾರೆ. ನಾನು ಜಾಮೀನಿಗೆ ಅರ್ಜಿ ಸಲ್ಲಿಸಿದ್ದೇನೆ; ಆದರೆ ನನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಯಿತು. ನನ್ನ ಮೇಲೆ ಭಯೋತ್ಪಾದನೆ ಆರೋಪವಿದೆ ಎಂದು ಸುಳ್ಳು ಹೇಳಿಕೆ ನೀಡಿ ಜಾಮೀನು ನಿರಾಕರಿಸಲಾಯಿತು. ಹಾಗಾಗಿ ನಾನು ಯಾವುದೇ ಅಪರಾಧ ಮಾಡದಿದ್ದರೂ 2 ವರ್ಷ ಜೈಲಿನಲ್ಲಿ ಕಳೆಯಬೇಕಾಯಿತು. ನಂತರ ನ್ಯಾಯಾಲಯ ನನ್ನನ್ನು ದೋಷಮುಕ್ತಗೊಳಿಸಿತು. ಯಾವುದೇ ತಪ್ಪಿಲ್ಲದಿರುವಾಗ ನನ್ನನ್ನು 2 ವರ್ಷ ಜೈಲಿನಲ್ಲಿಟ್ಟಿರುವುದು ನ್ಯಾಯಾಲಯದಲ್ಲಿ ಸಿದ್ಧವಾಯಿತು. ಸಿಬಿಐ ತನಿಖಾಧಿಕಾರಿ ಸುಭಾಷ ರಾಮರೂಪ ಸಿಂಗ್ ನನಗೆ ಪ್ರತೀಕಾರವಾಗಿ ಅನ್ಯಾಯ ಮಾಡಿದ್ದಾರೆ. ಅಂತಹ ಸುಭಾಷ ಸಿಂಗ್ ಗೆ ಕಠಿಣ ಶಿಕ್ಷೆ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.