ನವದೆಹಲಿ – ರಾಜಧಾನಿಯಲ್ಲಿ ಜೂನ್ 27 ಮತ್ತು 28 ರಂದು ಧಾರಾಕಾರ ಸುರಿದಿದೆ. ಈ ಮಳೆ ಕಳೆದ 88 ವರ್ಷಗಳ ದಾಖಲೆಯನ್ನು ಮುರಿದಿದೆ. ಈ ಮಳೆಯಿಂದಾಗಿ ಹಲವೆಡೆ 4ರಿಂದ 5 ಅಡಿ ನೀರು ನಿಂತಿತ್ತು. ಭಾರೀ ಮಳೆಯಿಂದಾಗಿ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ‘ಟರ್ಮಿನಲ್-1’ ನ ವಾಹನ ನಿಲ್ದಾಣದ (ಪಾರ್ಕಿಂಗ್) ಪ್ರದೇಶದ ಮೇಲ್ಛಾವಣಿ ಮತ್ತು ಆಧಾರ ಕಂಬಗಳು ಕುಸಿದಿವೆ. ಅನೇಕ ವಾಹನಗಳು ಅದರಡಿ ನಜ್ಜುಗುಜ್ಜಾಗಿವೆ. ಈ ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿದ್ದಾರೆ. ಈ ಹಠಾತ್ ಮಳೆಯ ಬಗ್ಗೆ ಹವಾಮಾನ ಇಲಾಖೆಯು, ‘ನಮಗೆ ಈ ಮಳೆಯ ಮುನ್ಸೂಚನೆ ಪಡೆಯಲು ಸಾಧ್ಯವಾಗಲಿಲ್ಲ’ ಎಂದು ಸ್ಪಷ್ಟನೆ ನೀಡಿದೆ.
We couldn’t predict the heavy downpour in Delhi. – Acceptance of the Meteorological Department.
👉 Earlier, when Meteorological Department predicted ‘no rain’, people made sure to venture out with umbrellas and raincoats, the same holds true to this day.
👉 Such massive errors… pic.twitter.com/sCg2baVryM
— Sanatan Prabhat (@SanatanPrabhat) June 29, 2024
ಸಂಪಾದಕೀಯ ನಿಲುವುಹವಾಮಾನ ಇಲಾಖೆ ‘ಮಳೆ ಬರುವುದಿಲ್ಲ’ ಎಂದು ಮುನ್ಸೂಚನೆ ನೀಡಿದರೂ `ಹೊರಗೆ ಹೋಗುವಾಗ ಛತ್ರಿ ಅಥವಾ ರೈನ್‌ಕೋಟ್ ತಪ್ಪದೇ ತೆಗೆದುಕೊಂಡು ಹೋಗಬೇಕು’ ಎಂದು ಹೇಳಲಾಗುತ್ತದೆ. ಈ ಮಾತು ಇಂದಿಗೂ ಅಷ್ಟೇ ಸತ್ಯವಾಗಿರುವುದು ಹವಾಮಾನ ಇಲಾಖೆಗೆ ನಾಚಿಕೆಗೇಡಿನ ವಿಷಯ! ವಿಜ್ಞಾನದ ಡಂಗುರ ಬಾರಿಸುವವರು ಈ ಬಗ್ಗೆ ಏನು ಹೇಳುವರು? |