30 Muslims Convert to Hinduism: ಇಂದೋರ (ಮಧ್ಯಪ್ರದೇಶ)ನಲ್ಲಿ 30 ಮುಸಲ್ಮಾನರು ಹಿಂದೂ ಧರ್ಮದಲ್ಲಿ ಪ್ರವೇಶ !

ಇಂದೋರ (ಮಧ್ಯಪ್ರದೇಶ) – ಇಲ್ಲಿನ ಖಜರಾನಾ ದೇವಸ್ಥಾನದಲ್ಲಿ 30 ಮುಸಲ್ಮಾನರು ವಿಧಿವತ್ತಾಗಿ ಹಿಂದೂ ಧರ್ಮಕ್ಕೆ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಇಲ್ಲಿ ಯಜ್ಞ ಮಾಡಲಾಯಿತು. ಇದರಲ್ಲಿ ಹಿಂದೂ ಧರ್ಮವನ್ನು ಪ್ರವೇಶಿಸಿದವರೆಲ್ಲರೂ ಭಾಗವಹಿಸಿದ್ದರು. ಈ ಮೊದಲು ಈ 30 ಜನರು ಗಂಗಾ ಮತ್ತು ಗೋಮೂತ್ರ ಸೇರಿದಂತೆ ದೇಶದ 10 ವಿವಿಧ ನದಿಗಳ ನೀರಿನಿಂದ ಸ್ನಾನ ಮಾಡಿದರು. ಈ ಜನರು ತಮ್ಮ ಮತಾಂತರವನ್ನು ಕಾನೂನುಬದ್ಧಗೊಳಿಸುವಂತೆ ಇಂದೋರಿನ ಜಿಲ್ಲಾಧಿಕಾರಿ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ. ಅವರ ಹಿಂದೂ ಧರ್ಮದಲ್ಲಿನ ಪ್ರವೇಶವು ವಿಶ್ವ ಹಿಂದೂ ಪರಿಷತ್ತಿನ ನಾಯಕರ ಸಂರಕ್ಷಣೆಯಲ್ಲಿ ನಡೆಯಿತು.

ವಿಹಿಂಪದ ಮಾಳವಾ ರಾಜ್ಯ ಪ್ರಮುಖರಾದ ಸಂತೋಷ ಶರ್ಮಾರವರು ಮಾತನಾಡುತ್ತ, ಇವರೆಲ್ಲರೂ ಸ್ವಇಚ್ಛೆಯಿಂದ ಹಿಂದೂ ಧರ್ಮಕ್ಕೆ ಬಂದಿದ್ದಾರೆ. ಈ ಜನರು ಹಿಂದೂ ಧರ್ಮಕ್ಕೆ ಮರಳಲು ನಮ್ಮನ್ನು ಸಂಪರ್ಕಿಸಿದ್ದರು. ಆ ನಂತರ ಅವರಿಗಾಗಿ ಧಾರ್ಮಿಕ ವಿಧಿವಿಧಾನಗಳನ್ನು ಏರ್ಪಡಿಸಲಾಗಿತ್ತು. ಅವರೆಲ್ಲರೂ ಹುಟ್ಟಿನಿಂದ ಮುಸಲ್ಮಾನರಾಗಿದ್ದು ಈಗ ಹಿಂದೂಗಳಾಗಿದ್ದಾರೆ. ನಮ್ಮ ಸಂಪರ್ಕದಲ್ಲಿ ಹಿಂದೂ ಧರ್ಮಕ್ಕೆ ಮರಳಲು ಇಚ್ಛಿಸುವ ಇನ್ನೂ ಸಾಕಷ್ಟು ಜನರಿದ್ದಾರೆ. ಅವರನ್ನೂ ಶೀಘ್ರದಲ್ಲೇ ಕರೆತರಲಾಗುವುದು ಎಂದಿದ್ದಾರೆ.