೧೯೯೦ ರಿಂದ ೧೯೯೫ ಈ ಕಾಲಾವಧಿ ಯಲ್ಲಿ ನಾನು ಸೇವೆಯ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆಯವರ ಮುಂಬಯಿಯ ಮನೆಯಲ್ಲಿ ವಾಸಿಸುತ್ತಿದ್ದೆ. ಆಗ ನಾನು ಅನುಭವಿಸಿದ ಪರಾತ್ಪರ ಗುರು ಡಾ. ಆಠವಲೆಯವರ ದಾರ್ಶನಿಕತೆಯನ್ನು ಅವರ ಚರಣಗಳಲ್ಲಿ ಅರ್ಪಿಸುತ್ತಿದ್ದೇನೆ.
೧. ಸಾಧಕರ ಜೀವನದಲ್ಲಿ ಮುಂದೆ ಘಟಿಸಲಿರುವ ವಿಷಯವನ್ನು ಸಹಜವಾಗಿ ಹೇಳುವುದು.
ಅ. ನಾನು ಭಾಂಡುಪದಲ್ಲಿ ಒಂದು ಕೋಣೆಯನ್ನು ಖರೀದಿಸಿದ್ದೆ; ಆದರೆ ನಂತರ ನಾನು ಆ ಕೋಣೆಯನ್ನು ಮಾರುವವನಿದ್ದೆ. ಆ ಬಗ್ಗೆ ನಾನು ಗುರುದೇವರಿಗೆ ಕೇಳಿದೆ. ಅವರು ನನಗೆ, “ಕೋಣೆಗೆ ನೀನು ಖರ್ಚು ಮಾಡಿರುವ ಹಣದಲ್ಲಿ ಕೇವಲ ಶೇಕಡ ೩೦ ರಷ್ಟೇ ಹಣ ನಿನಗೆ ಸಿಗುವುದು”, ಎಂದು ಹೇಳಿದರು. ಅದು ಹಾಗೆಯೇ ಆಯಿತು.
ಆ. ನಮ್ಮಂತಹ ಸಾಧಕರಿಗೆ ಎಂತಹ ಪತ್ನಿ ಸಿಗುವಳು ? ಎಂಬ ವರ್ಣನೆಯನ್ನೂ ಅವರು ನಮಗೆ ಮೊದಲೇ ಹೇಳಿದ್ದರು ಮತ್ತು ಮುಂದೆ ಹಾಗೆಯೇ ನಡೆಯಿತು.
೨. ಭಾರತ-ಪಾಕಿಸ್ತಾನ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಗೆಲ್ಲುವುದು ಆದುದರಿಂದ ಅದನ್ನು ನೋಡಲು ಸಮಯ ವ್ಯರ್ಥ ಕಳೆಯದೇ ಕೊನೆಯ ೧೦ ಓವರ್‌ಗಳನ್ನು ನೋಡಿ ಎಂದು ಪರಾತ್ಪರ ಗುರು ಡಾ. ಆಠವಲೆಯವರು ಹೇಳುವುದು
ಒಮ್ಮೆ ಭಾರತ-ಪಾಕಿಸ್ತಾನ್ ಇವರ ನಡುವೆ ೫೦ ಓವರ್‌ಗಳ ಕ್ರಿಕೆಟ್ ಪಂದ್ಯ ನಡೆದಿತ್ತು. ನಾವು ಅದನ್ನು ನೋಡುತ್ತಿದ್ದೆವು. ಗುರುದೇವರು ಅಲ್ಲಿಗೆ ಬಂದಾಗ ನಾವೆಲ್ಲರೂ ಎದ್ದು ನಿಂತೆವು. ಅವರು ನಮಗೆ, “ಪಾಕಿಸ್ತಾನದ ೨೨೫ ರನ್‌ಗಳು ಆಗುವವು, ಆದರೆ ಭಾರತ ಪಂದ್ಯವನ್ನು ಗೆಲ್ಲುವುದು; ಆದ್ದರಿಂದ ಈಗ ಸಮಯವನ್ನು ವ್ಯರ್ಥ ಕಳೆಯದೇ ಕೇವಲ ಕೊನೆಯ ೧೦ ಓವರ್‌ಗಳನ್ನು ನೋಡಿ”, ಎಂದು ಹೇಳಿದರು. ನಂತರ ಹಾಗೇ ಆಯಿತು.
೩. ‘ಮಳೆಯಿಂದ ಗುರುಸೇವೆಯಲ್ಲಿ ವ್ಯತ್ಯಯ ಬರಬಾರದೆಂದು ಪರಾತ್ಪರ ಗುರು ಡಾ. ಆಠವಲೆ ಇವರು ‘೪ ಗಂಟೆ ಮಳೆ ಬರುವುದಿಲ್ಲ ಎಂದು ಹೇಳಿದ ನಂತರ ಮಳೆ ಬಾರದಿರುವುದು, ಅದರಿಂದ ಅವರ ಪಂಚಮಹಾಭೂತಗಳ ಮೇಲಿನ ಪ್ರಭುತ್ವ ಗಮನಕ್ಕೆ ಬರುವುದು
೧೯೯೫ ರಲ್ಲಿ ಇಂದೂರಿನಲ್ಲಿ ಪ.ಪೂ. ಬಾಬಾರವರ ಅಮೃತ ಮಹೋತ್ಸವ ನಡೆಯಲಿತ್ತು. ಅದಕ್ಕಾಗಿ ಶ್ರೀ. ರೋಹನ ಭೋಜನೆ (ಈಗಿನ ದಿ. ರೋಹನ ಭೋಜನೆ) ಮತ್ತು ಶ್ರೀ. ಸದಾನಂದ ಪಾಂಚಾಳ ಇವರು ಇತರ ಸಾಧಕರ ಜೊತೆಗೆ ಡಫಲಿಯ ಆಕಾರದ ದೊಡ್ಡ ಪ್ರವೇಶದ್ವಾರವನ್ನು ತಯಾರಿಸುವ ಸೇವೆಯನ್ನು ಮಾಡುತ್ತಿದ್ದರು. ಮುಂಬಯಿ ಸೇವಾಕೇಂದ್ರದ ಮಾಳಿಗೆಯಲ್ಲಿ ಈ ಸೇವೆ ನಡೆಯುತ್ತಿತ್ತು. ಶ್ರೀ ಭೋಜನೆ ಇವರಿಗೆ ಭಾನುವಾರ ರಜೆ ಇದ್ದುದರಿಂದ ಅವರು ಆ ದಿನ ಹೆಚ್ಚು ಸೇವೆ ಮಾಡುತ್ತಿದ್ದರು; ಮತ್ತು ಮಳೆಗಾಲದ ದಿನವಾಗಿದ್ದರಿಂದ ಒಮ್ಮೆ ಬೆಳಗ್ಗೆಯೇ ಮಳೆ ಆರಂಭವಾಯಿತು. ಆಗ ಅವರಿಗೆ, ಈಗ ಸೇವೆಯನ್ನು ಹೇಗೆ ಮಾಡಲಿ ? ಎಂದು ಪ್ರಶ್ನೆ ಮೂಡಿತು. ಅವರು ಗುರುದೇವರಿಗೆ ಈ ಬಗ್ಗೆ ಕೇಳಿದರು. ಆಗ ಗುರುದೇವರು ಅವರಿಗೆ, “ನಿಮಗೆ ಸೇವೆ ಮಾಡಲು ಎಷ್ಟು ಗಂಟೆ ಬೇಕಾಗುತ್ತದೆ ?”, ಎಂದು ಕೇಳಿದರು. ರೋಹನ ಭೋಜನೆ ಇವರು, ‘೪ ಗಂಟೆಗಳು ಬೇಕಾಗುತ್ತವೆ’, ಎಂದು ಹೇಳಿದರು. ಇದಕ್ಕೆ ಗುರುದೇವರು, “೪ ಗಂಟೆ ಮಳೆ ಬೀಳುವುದಿಲ್ಲ. ನಾವು ಅವರಿಗೆ (ವರುಣ ದೇವರಿಗೆ) ಹೇಳೋಣ”, ಎಂದು ಹೇಳಿದರು. ಆಶ್ಚರ್ಯವೆಂದರೆ ಮಳೆ ನಿಂತಿತು ಮತ್ತು ೪ ಗಂಟೆ ಮಳೆ ಬರಲಿಲ್ಲ. ಆಗ ನಾವೆಲ್ಲರೂ ಮನಸ್ಸಿನಲ್ಲಿ ಕೈಜೋಡಿಸಿ ಗುರುಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಿದೆವು.
– ಶ್ರೀ. ವಿಷ್ಣು ಕದಮ್ (ವಯಸ್ಸು ೬೪ ವರ್ಷಗಳು) ಆರೆ, ದೇವಗಡ ತಾಲುಕು, ಸಿಂಧುದುರ್ಗ ಜಿಲ್ಲೆ (೧೫.೨.೨೦೨೪)