ರಾಮನಾಥಿ (ಗೋವಾ), ಜೂ.29 (ಸುದ್ದಿ) – ಡಾ. ನರೇದ್ರ ದಾಭೊಲ್ಕರ್ ಕೊಲೆ ಕ್ರಕರಣದಲ್ಲಿ ಖುಲಾಸೆಗೊಂಡ ಸನಾತನದ ಸಾಧಕ ಶ್ರೀ. ವಿಕ್ರಂ ಭಾವೆ ಸಹಿತ ‘ಹಿಂದುತ್ವದ ಕಾರ್ಯ’ ಎಂದು ಉಚಿತವಾಗಿ ನ್ಯಾಯಾಂಗ ಹೋರಾಟ ಮಾಡಿದ ನ್ಯಾಯವಾದಿಗಳ ಸನ್ಮಾನ ಮಾಡಲಾಯಿತು.
ನ್ಯಾಯವಾದಿ ಪ್ರಕಾಶ ಸಾಳಸಿಂಗಿಕರಗಿಕರ್, ನ್ಯಾಯವಾದಿ ಘನಶ್ಯಾಮ ಉಪಾಧ್ಯಾಯ, ವಕೀಲೆ (ಸೌ.) ಮೃಣಾಲ್ ವ್ಯವಹಾರೆ-ಸಾಖರೆ ಮತ್ತು ವಕೀಲೆ (ಸೌ.) ಸ್ಮಿತಾ ದೇಸಾಯಿ ಇವರನ್ನು ಬಿಜೆಪಿಯ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ ಇವರ ಹಸ್ತದಿಂದ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಸನ್ಮಾನಿಸಲಾಯಿತು.
ರಾಜಾ ಸಿಂಗ್ ಲೋಧ್ ಅವರು ಶಾಲು ಹೊಧಿಸಿ, ಶ್ರೀಫಲ ನೀಡಿ ಜೊತೆಗೆ ದೇವತೆಗಳ ಸಾತ್ವೀಕ ಪ್ರತಿಮೆಯನ್ನು ನೀಡಿ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಸಭಾಂಗಣದಲ್ಲಿ ಸೇರಿದ್ದ ಹಿಂದೂ ಧರ್ಮಪ್ರೇಮಿಗಳು ‘ಹರ ಹರ ಮಹಾದೇವ್’, ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದರು.
ಈ ಮೊಕದ್ದಮೆಯಲ್ಲಿ ಗಣನೀಯ ಕೊಡುಗೆ ನೀಡಿದ ಹಿರಿಯ ನ್ಯಾಯವಾದಿ ಸುಭಾಷ್ ಝಾ, ನ್ಯಾಯವಾದಿ ಸಂಜೀವ್ ಪುನಾಳೆಕರ್, ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್, ನ್ಯಾಯವಾದಿ ಸುವರ್ಣ ವತ್ಸ್-ಅವ್ಹಾಡ್ ಮೊದಲಾದವರು ಸಭೆಯ ಸ್ಥಳದಲ್ಲಿ ಪ್ರತ್ಯಕ್ಷವಾಗಿ ಇರಲು ಸಾಧ್ಯವಾಗಲಿಲ್ಲ. ಇವರೆಲ್ಲರಿಗೂ ವೈಶ್ವಿತಿಕ ಹಿಂದೂ ರಾಷ್ಟ್ರ ಮಹೋತ್ಸವದ ಸಂದರ್ಭದಲ್ಲಿ ಅಭಿನಂಧಿಸಲಾಯಿತು ಹಾಗೂ ಘೋಷಣೆಗಳನ್ನು ನೀಡಿ ಗೌರವಿಸಲಾಯಿತು.