ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನದ ಆರನೇ ದಿನ
ಸತ್ರ : ವಕೀಲರ ವಕಾಲತ್ತು ಮತ್ತು ಹೋರಾಟ
ವಿದ್ಯಾಧಿರಾಜ್ ಸಭಾಂಗಣ – ದಸರಾ, ದೀಪಾವಳಿ, ಗಣೇಶೋತ್ಸವ ಹೀಗೆ ಹಲವು ಉತ್ಸವಗಳಲ್ಲಿ ಅನೇಕ ದುರಾಚಾರಗಳು ನಡೆಯುತ್ತವೆ. ಈ ಕಾರ್ಯಕ್ರಮಗಳಲ್ಲಿ ‘ಡಿಜೆ ಸಿಸ್ಟಮ್’ (ದೊಡ್ಡ ಧ್ವನಿ ವ್ಯವಸ್ಥೆಗಳು) ಮತ್ತು ‘ಎಲ್‌ಇಡಿ ಲೈಟ್ಸ್’ (ಬೆಳಕಿನ ವ್ಯವಸ್ಥೆಗಳು) ಮಿತಿ ಇಲ್ಲದೇ ಉಪಯೋಗಿಸಲಾಗುತ್ತದೆ. ಕಳೆದ 10 ರಿಂದ 12 ವರ್ಷಗಳಲ್ಲಿ, ಡಿಜೆ ವ್ಯವಸ್ಥೆಗಳು ಮತ್ತು ಎಲ್ಇಡಿ ದೀಪಗಳು ಅಗಾಧವಾಗಿ ಬೆಳೆದಿವೆ. ಇದರ ದುಷ್ಪರಿಣಾಮವನ್ನು ವೃದ್ಧರು, ಗರ್ಭಿಣಿಯರು ಹಾಗೂ ರೋಗಿಗಳಿಗೆ ಅನುಭವಿಸಬೇಕಾಗುತ್ತದೆ. ಹಲವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಎಲ್‌ಇಡಿ ದೀಪಗಳಿಂದಾಗಿ ಅನೇಕರಿಗೆ ಕಣ್ಣಿನ ಸಮಸ್ಯೆ ನಿರ್ಮಾಣವಾಗಿದೆ. ಈ ಎಲ್ಲಾ ದುಷ್ಕೃತ್ಯಗಳ ವಿರುದ್ಧ ಮತ್ತು ಶಬ್ದ ಮಾಲಿನ್ಯದ ವಿರುದ್ಧ ನಾವು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದೇವೆ. ಇದನ್ನು ಗಮನಿಸಿದ ನ್ಯಾಯಾಲಯವು ಈ ದುರಾಚಾರವನ್ನು ನಿಲ್ಲಿಸುವಂತೆ ಆಡಳಿತಕ್ಕೆ ಆದೇಶಿಸಿತು. ಅದರಿಂದ ಸಮಾಜ ಮತ್ತು ಧರ್ಮಕ್ಕೆ ಆಗುವ ಹಾನಿಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ‘ಆಪರೇಷನ್ ಡಿಜೆ’ ಶೀರ್ಷಿಕೆಯಡಿ ಈ ಅಭಿಯಾನ ನಡೆಸಿದ್ದೇವೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮೂಲಕ ನಾವು ಸಮಾಜ ಮತ್ತು ಧರ್ಮವನ್ನು ರಕ್ಷಿಸಲು ಸಾಕಷ್ಟು ಕೆಲಸ ಮಾಡಬಹುದು. ಗುರುಗಳ ಆಶೀರ್ವಾದದಿಂದ ಈ ಕಾರ್ಯ ಯಶಸ್ವಿಯಾಗುತ್ತಿದೆ. ಸಮಾಜ ಮತ್ತು ರಾಷ್ಟ್ರದ ಹಿತಕ್ಕಾಗಿ ನಾವು ಈ ಕೆಲಸವನ್ನು ಧೈರ್ಯದಿಂದ ಮಾಡಬೇಕು. ಇದಕ್ಕಾಗಿ ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಆದರ್ಶವನ್ನು ನಮ್ಮ ಮುಂದೆ ಇಡಬೇಕು. ಸ್ವಾತಂತ್ರ್ಯವೀರ ಸಾವರ್ಕರ್ ಅವರು ವಕೀಲರ ಶಿರೋಮಣಿಯೂ ಹೌದು ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಉಪಾಧ್ಯಕ್ಷ ನ್ಯಾಯವಾದಿ ಅಮೃತೇಶ್ ಎನ್.ಪಿ. ಇಲ್ಲಿ ಮಾತನಾಡುವಾಗ ಹೇಳಿದರು. ಅವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಆರನೇ ದಿನದಂದು ‘ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮೂಲಕ ಸಮಾಜ ಮತ್ತು ರಾಷ್ಟ್ರವನ್ನು ಹೇಗೆ ರಕ್ಷಿಸುವುದು?’ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.
Adv. Amrutesh NP (National Vice President, Hindu Vidhidnya Parishad, Bengaluru, Karanataka) speaks on PIL – An Effective Tool for safeguarding society and Dharma
⭕️Watch now : https://t.co/xkJPCm4wqP#Hindu_Legal_Force | Vaishvik Hindu Rashtra Mahotsav
Join us :… pic.twitter.com/6EcPXRQAdt— HinduJagrutiOrg (@HinduJagrutiOrg) June 29, 2024
ವಕೀಲ ಅಮೃತೇಶ್ ಮಾತು ಮುಂದುವರೆಸಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮೂಲಕ ಬೆಂಗಳೂರು, ಮುಂಬಯಿನಂತಹ ದೊಡ್ಡ ನಗರಗಳಲ್ಲಿ ರಸ್ತೆ ಬದಿ ಹಾಕಿರುವ ಎಲ್‌ಇಡಿ ಹೋರ್ಡಿಂಗ್‌ಗಳ ವಿರುದ್ಧವೂ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಮೂಲಕ ನ್ಯಾಯಾಲಯದ ಹೋರಾಟವನ್ನೂ ಆರಂಭಿಸಿದ್ದೇವೆ. ಗುರುಗಳ ಆಶೀರ್ವಾದದಿಂದ ಸಮಾಜ ಮತ್ತು ಧರ್ಮಕ್ಕಾಗಿ ಕಾರ್ಯ ಮಾಡಲು ಪ್ರೇರಣೆ ದೊರೆಯುತ್ತಿದೆ ಎಂದು ಹೇಳಿದರು.