ಭವಿಷ್ಯದಲ್ಲಿ ‘ಸೆಕ್ಯುಲರ್’ ಮತ್ತು ‘ಸೋಶಲಿಸ್ಟ್’ ಶಬ್ದಗಳು ಸಂವಿಧಾನ ವಿರೋಧಿ ಎಂದು ನಿರ್ಧರಿಸಲಾಗುವುದು ! – ವಕೀಲ ವಿಷ್ಣು ಶಂಕರ್ ಜೈನ್, ಸುಪ್ರೀಂ ಕೋರ್ಟ್ ಮತ್ತು ವಕ್ತಾರ, ಹಿಂದು ಫ್ರಂಟ್ ಫಾರ್ ಜಸ್ಟಿಸ್

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಆರನೇ ದಿನ (ಜೂನ್ 29)

ಹಿಂದೂ ರಾಷ್ಟ್ರ ನಿರ್ಮಾಣದಲ್ಲಿ ವಕೀಲರ ಕೊಡುಗೆ

ವಿದ್ಯಾಧಿರಾಜ ಸಭಾಂಗಣ : ಪ್ರೊ. ಕೆ.ಟಿ. ಶಾ ಇವರು 1948ರಲ್ಲಿ ಮೂರು ಬಾರಿ ‘ಧರ್ಮನಿರಪೇಕ್ಷ’ (ಸೆಕ್ಯುಲರ್) ಮತ್ತು ‘ಸಮಾಜವಾದ’ (ಸೋಶಲಿಸ್ಟ್) ಶಬ್ದಗಳನ್ನು ಸಂವಿಧಾನದಲ್ಲಿ ಸೇರಿಸುವ ಪ್ರಸ್ತಾಪವನ್ನು ಮಾಡಿದ್ದರು; ಆದರೆ, ಆ ಪ್ರಸ್ತಾಪ ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದ್ದು, ಸಂವಿಧಾನ ರಚನಾ ಸಮಿತಿಯು ಮೂರೂ ಬಾರಿಯೂ ತಿರಸ್ಕರಿಸಿತು. 1976ರಲ್ಲಿ ನಿಷೆಧಾಜ್ಞೆಯ ಸಮಯದಲ್ಲಿ ಯಾವುದೇ ಪ್ರಕಾರದ ಚರ್ಚೆ ಇಲ್ಲದೆ ಈ ಎರಡು ಶಬ್ದಗಳನ್ನು ಅಕ್ರಮವಾಗಿ ಸಂವಿಧಾನದಲ್ಲಿ ಸೇರಿಸಲಾಯಿತು. ಸಂವಿಧಾನದಲ್ಲಿ ಈ ಶಬ್ದಗಳನ್ನು ಸೇರಿಸುವುದು ಸಂವಿಧಾನ ವಿರೋಧಿ ಕೆಲಸವಾಗಿದೆ. ಈ ಎರಡು ಶಬ್ದಗಳನ್ನು ಸಂವಿಧಾನದಲ್ಲಿ ಸೇರಿಸುವುದಕ್ಕೆ ವಿರುದ್ಧ ನಾವು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇವೆ.

ಭವಿಷ್ಯದಲ್ಲಿ ‘ಸೆಕ್ಯುಲರ್’ ಮತ್ತು ‘ಸೋಶಲಿಸ್ಟ್’ ಶಬ್ದಗಳು ಸಂವಿಧಾನ ವಿರೋಧಿ ಎಂದು ತೀರ್ಮಾನಿಸಲಾಗುತ್ತದೆ. ಜುಲೈ ತಿಂಗಳಲ್ಲಿ ಈ ವಿಷಯದ ಮೇಲೆ ವಿಚಾರಣೆ ನಡೆಯುವ ಸಾಧ್ಯತೆಇದೆ ಎಂದು ಹಿಂದು ಫ್ರಂಟ್ ಫಾರ್ ಜಸ್ಟಿಸ್ ವಕ್ತಾರ ಮತ್ತು ಸುಪ್ರೀಂ ಕೋರ್ಟ್ ವಕೀಲ ವಿಷ್ಣು ಶಂಕರ್ ಜೈನ್ ಅವರು ಹೇಳಿದರು. ಅವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಆರನೇ ದಿನದ ‘ಸಂವಿಧಾನದ ಸೆಕ್ಯುಲರ್ ಶಬ್ದ ಮತ್ತು ನ್ಯಾಯಾಂಗ ಹೋರಾಟ’ ಎಂಬ ವಿಷಯದ ಬಗ್ಗೆ ಮಾರ್ಗದರ್ಶನ ನೀಡಿದರು.