ಅಸದುದ್ದೀನ ಓವೈಸಿಯವರ ದೆಹಲಿಯ ಮನೆಯ ಮೇಲೆ ಕಪ್ಪು ಶಾಯಿ ಎಸೆದರು !
ನವದೆಹಲಿ – ಎಂ. ಐ. ಎಂ.ನ ಅಧ್ಯಕ್ಷ ಮತ್ತು ಸಂಸದ ಅಸದುದ್ದೀನ ಓವೈಸಿಯವರ ದೆಹಲಿಯ ಮನೆಯ ಮೇಲೆ ಕಪ್ಪು ಶಾಯಿಯನ್ನು ಎಸೆಯಲಾಯಿತು. ಜೂನ್ 25 ರಂದು ಸಂಸತ್ತಿನಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಓವೈಸಿ ‘ಜಯ ಭೀಮ, ಜಯ ಮೀಮ, ಜಯ ತೆಲಂಗಾಣ, ಜಯ ಪ್ಯಾಲೆಸ್ತೀನ್, ಅಲ್ಲಾಹು ಅಕ್ಬರ್ (ಅಲ್ಲಾಹ ಮಹಾನನಿದ್ದಾನೆ)’ ಎಂದು ಘೋಷಣೆ ಕೂಗಿದ್ದರು. ಆ ಹಿನ್ನೆಲೆಯಲ್ಲಿಯೇ ಕಪ್ಪು ಶಾಯಿಯನ್ನು ಎಸೆಯಲಾಗಿದೆಯೆಂದು ಹೇಳಲಾಗುತ್ತಿದೆ. ಶಾಯಿ ಎಸೆಡಿರುವ ಘಟನೆಯ ವಿಷಯದಲ್ಲಿ ಪ್ರತಿಕ್ರಿಯಿಸುವಾಗ ಓವೈಸಿಯವರು, ನನ್ನ ಮನೆಯನ್ನು ಗುರಿ ಮಾಡಿರುವ ಗೂಂಡಾಗಳಿಗೆ ನಾನು ಹೆದರುವುದಿಲ್ಲ. ಧೈರ್ಯವಿದ್ದರೆ ನನ್ನ ಎದುರಿಗೆ ಬನ್ನಿ, ಶಾಯಿ ಎಸೆದ ನಂತರ ಅಥವಾ ಕಲ್ಲು ಎಸೆದ ನಂತರ ಓಡಿ ಹೋಗಬೇಡಿರಿ. ಸಾವಕರರಂತೆ ಹೇಡಿತನದಿಂದ ವರ್ತಿಸುವುದನ್ನು ನಿಲ್ಲಿಸಿರಿ, ಎಂದು ಹೇಳಿದರು.
1. ಓವೈಸಿ ತಮ್ಮ ಮಾತನ್ನು ಮುಂದುವರಿಸಿ, ದೆಹಲಿಯಲ್ಲಿರುವ ನನ್ನ ಮನೆಯನ್ನು ಎಷ್ಟು ಬಾರಿ ಗುರಿ ಮಾಡಲಾಗಿದೆ ? ಇದನ್ನು ಈಗ ನಾನು ಲೆಕ್ಕ ಮಾಡುವುದಿಲ್ಲ. ನಾನು ಪೊಲೀಸ ಅಧಿಕಾರಿಗಳಿಗೆ `ನಿಮ್ಮ ಮೂಗಿನ ಕೆಳಗೆ ಇದೆಲ್ಲವೂ ಹೇಗೆ ನಡೆಯುತ್ತದೆ?’ ಎಂದು ಕೇಳಿದಾಗ ಅವರು ಅಸಹಾಯಕತೆ ವ್ಯಕ್ತಪಡಿಸಿದರು.
2. ಫೆಬ್ರವರಿ 2023 ರಲ್ಲಿ, ಓವೈಸಿ ಜೈಪುರದಲ್ಲಿರುವಾಗ ಅವರ ಮನೆಗೆ ಕಲ್ಲು ಎಸೆಯಲಾಗಿತ್ತು.
3 ಫೆಬ್ರವರಿ 2022 ರಂದು, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಉತ್ತರ ಪ್ರದೇಶದ ಹಾಪೂಡನ ಟೋಲ್ ನಾಕೆಯ ಬಳಿ ಓವೈಸಿಯವರ ವಾಹನಕ್ಕೆ ಗುಂಡುಗಳನ್ನು ಹಾರಿಸಲಾಗಿತ್ತು.
ಸಂಪಾದಕೀಯ ನಿಲುವುದೇಶದ ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ‘ಜಯ ಪ್ಯಾಲೆಸ್ತೀನ್’ ಎಂಬ ದೇಶದ್ರೋಹಿ ಘೋಷಣೆಯನ್ನು ನೀಡಿದವರಿಗೆ ಸಾವರಕರರ ಹೆಸರನ್ನು ಹೇಳುವ ಅರ್ಹತೆ ಇದೆಯೇ ? ರಾಷ್ಟ್ರಪತಿಗಳು ಇಂತಹವರ ಸಂಸದತ್ವವನ್ನು ತಕ್ಷಣ ರದ್ದುಗೊಳಿಸಿ ಅವರ ಮೇಲೆ ಕ್ರಿಮಿನಲ್ ಕ್ರಮ ಕೈಕೊಳ್ಳಲು ಆದೇಶಿಸಬೇಕು ! |