Odisha Rape Case : 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಇಬ್ಬರಲ್ಲಿ ಒಬ್ಬನಿಗೆ ಗಲ್ಲು ಶಿಕ್ಷೆ ರದ್ದು, ಮತ್ತೊಬ್ಬನಿಗೆ ಜೀವಾವಧಿ ಶಿಕ್ಷೆ

ಒಡಿಶಾ ಉಚ್ಚನ್ಯಾಯಾಲಯದ ತೀರ್ಪು

ಭುವನೇಶ್ವರ (ಒಡಿಶಾ) – 6 ವರ್ಷದ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಒಡಿಶಾ ಉಚ್ಚ ನ್ಯಾಯಾಲಯವು ಅಖೀಲ್ ಅಲಿ ಮತ್ತು ಆಸಿಫ್ ಅಲಿ ಎಂಬ ಆರೋಪಿಗಳ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಿದೆ. ಇಬ್ಬರು ಆರೋಪಿಗಳಿಗೆ ಕೆಳ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿತ್ತು; ಆದರೆ ಉಚ್ಚ ನ್ಯಾಯಾಲಯವು ಅಖೀಲ್ ಅಲಿಯನ್ನು ಖುಲಾಸೆಗೊಳಿಸಿತು ಮತ್ತು ಆಸಿಫ್ ಅಲಿಯ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತು. ‘ಆರೋಪಿಯು ದಿನದಲ್ಲಿ ಹಲವಾರು ಬಾರಿ ನಮಾಜ್ ಪಠಿಸುತ್ತಾನೆ ಮತ್ತು ಅವನು ತನ್ನನ್ನು ಅಲ್ಲಾಹನಿಗೆ ಸಮರ್ಪಿಸಿಕೊಂಡಿರುವುದರಿಂದ ಅವನು ಯಾವುದೇ ಶಿಕ್ಷೆಯನ್ನು ಎದುರಿಸಲು ಸಿದ್ಧನಾಗಿದ್ದಾನೆ’, ಎಂದು ಈ ಸಂದರ್ಭದಲ್ಲಿ ನ್ಯಾಯಾಲಯವು ಹೇಳಿದೆ !

ಅಖೀಲ್ ಮತ್ತು ಆಸಿಫ್ ಈ ಇಬ್ಬರು 2014 ರ ಆಗಸ್ಟ್ 21 ರಂದು ಚಾಕೊಲೇಟ್ ಖರೀದಿಸಲು ಹೋಗಿದ್ದ 6 ವರ್ಷದ ಬಾಲಕಿಯನ್ನು ಅಪಹರಿಸಿದ್ದರು. ಆ ಬಾಲಕಿಯು ಬೆತ್ತಲೆ ಮತ್ತು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯ ಆಕೆ ಸಾವನ್ನಪ್ಪಿದ್ದಳು.

ಸಂಪಾದಕೀಯ ನಿಲುವು

  • ಕೆಳ ನ್ಯಾಯಾಲಯವು ಇಬ್ಬರಿಗೂ ಮರಣದಂಡನೆ ವಿಧಿಸಿತ್ತು!
  • ಕೆಳ ನ್ಯಾಯಾಲಯವು ಅತ್ಯಾಚಾರಿಗೆ ಮರಣದಂಡನೆ ವಿಧಿಸಿದರೆ ಉಚ್ಚ ನ್ಯಾಯಾಲಯವು ಅದನ್ನು ರದ್ದು ಮಾಡುತ್ತದೆ, ಇದು ಹೇಗೆ? ಎಂಬ ಪ್ರಶ್ನೆ ಸಾಮಾನ್ಯ ಜನರ ಮನಸ್ಸಿನಲ್ಲಿ ಮೂಡುವುದು ಸಹಜವೇ ಆಗಿದೆ !