Sam Pitroda has been Re-Instated: ಭಾರತೀಯರ ಮೇಲೆ ಟೀಕೆ ಮಾಡುವ ಸ್ಯಾಮ್ ಪಿತ್ರೋದಾ ಪುನಃ ‘ಇಂಡಿಯನ್ ಒವರಸೀಜ್ ಕಾಂಗ್ರೆಸ್’ ಅಧ್ಯಕ್ಷರಾಗಿ ಆಯ್ಕೆ

ಸ್ಯಾಮ್ ಪಿತ್ರೋದಾ

ನವ ದೆಹಲಿ – ಇಂಡಿಯನ್ ಒವರ್‍‌ಸಿಜ್ ಕಾಂಗ್ರೆಸ್’ನ ಅಧ್ಯಕ್ಷರಾಗಿ ಸ್ಯಾಮ್ ಪಿತ್ರೋದಾ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಮುಖಂಡ ಕೆ.ಸಿ. ವೇಣುಗೋಪಾಲ್ ಸುತ್ತೋಲೆ ಹೊರಡಿಸಿ ಈ ಮಾಹಿತಿ ನೀಡಿದ್ದಾರೆ. ಭಾರತೀಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಕೆಲ ತಿಂಗಳ ಹಿಂದೆ ಅವರನ್ನು ಈ ಹುದ್ದೆಯಿಂದ ತೆಗೆದುಹಾಕಲಾಗಿತ್ತು. ಕಾಂಗ್ರೆಸ್‌ನ ಈ ನಿರ್ಧಾರದ ನಂತರ ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು ಕಾಂಗ್ರೆಸ್ ಅನ್ನು ಟೀಕಿಸುತ್ತಾ, ಮಧ್ಯಮ ವರ್ಗದ ತೊಂದರೆ ನೀಡುವವ ಮತ್ತೆ ಮರಳಿದ್ದಾರೆ ಮತ್ತು ಕಾಂಗ್ರೆಸ್ ದೇಶವಾಸಿಗಳಿಗೆ ದ್ರೋಹ ಮಾಡಿದೆ ಎಂದು ಹೇಳಿದರು.

ಸ್ಯಾಮ್ ಪಿತ್ರೋದಾ ಏನು ಹೇಳಿದ್ದನು ?

ಸ್ಯಾಮ್ ಪಿತ್ರೋದಾ ‘ದಿ ಸ್ಟೇಟ್ಸ್‌ಮನ್’ಗೆ ನೀಡಿದ ಸಂದರ್ಶನದಲ್ಲಿ, ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾ, ಭಾರತದಲ್ಲಿ ಒಂದು ಕಡೆ, ಈಶಾನ್ಯದ ಜನರು ಚೀನಾದ ನಾಗರಿಕರಂತೆ ಕಾಣುತ್ತಾರೆ, ಪಶ್ಚಿಮದ ಜನರು ಅರಬ್ಬರಂತೆ ಕಾಣುತ್ತಾರೆ, ಆದರೆ ಉತ್ತರ ಭಾರತದ ಜನರು ಬಿಳಿ ಪಾಶ್ಚಿಮಾತ್ಯರಂತೆ ಮತ್ತು ದಕ್ಷಿಣದ ಜನರು ಆಫ್ರಿಕನ್ ಪ್ರಜೆಗಳಂತೆ ಕಾಣುತ್ತಾರೆ. ಆದರೂ ನಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಾವು ಸಹೋದರ ಸಹೋದರಿಯರಂತೆ ವೈವಿಧ್ಯಮಯ ದೇಶವನ್ನು ಒಟ್ಟಾಗಿಡಲು ಸಾಧ್ಯವಾಯಿತು ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

ಇದರಿಂದ ಕಾಂಗ್ರೆಸ್ ಭಾರತೀಯರನ್ನು ಕೀಳಾಗಿ ಕಾಣುತ್ತದೆ. ಪಿತ್ರೋದಾಗೆ ಪದಚ್ಯುತಿಯು ತೋರಿಕೆಯ ಕಾರ್ಯಾಚರಣೆ ಎಂಬುದು ಸ್ಪಷ್ಟವಾಯಿತು. ಕಾಂಗ್ರೆಸ್‌ಗೆ ಮತ ಹಾಕಿದ ಹಿಂದೂಗಳಿಗೆ ಇದು ಒಪ್ಪಿಗೆ ಇದೆಯೇ ?