ಓಂ ಪ್ರಮಾಣೀಕರಣದ ಮೂಲಕ ಹಲಾಲ್ ಪ್ರಮಾಣೀಕರಣದ ಇಸ್ಲಾಮಿಕ್ ಆರ್ಥಿಕತೆಯನ್ನು ತಡೆಯಿರಿ! – ನರೇಂದ್ರ ಸರ್ವೆ, ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ಮೂರನೇ ದಿನ (ಜೂನ್ 26): ರಾಷ್ಟ್ರೀಯ ಭದ್ರತೆ ಮತ್ತು ಧರ್ಮ ರಕ್ಷಣೆ

ನರೇಂದ್ರ ಸರ್ವೆ

ಭಾರತದ ಮೇಲೆ ಶತಮಾನಗಳಿಂದ ಇಸ್ಲಾಮಿಕ್ ಆಕ್ರಮಣ ನಡೆಯುತ್ತಿದೆ. ಆ ಅವಧಿಯಲ್ಲಿ ಆಕ್ರಮಣಕಾರರು ತಮ್ಮ ದಾಳಿಯ ವಿಧಾನವನ್ನು ಬದಲಾಯಿಸಿದ್ದಾರೆ. ಆರ್ಥಿಕತೆಯ ಬಲದ ಮೇಲೆ ಅಮೆರಿಕ ಜಗತ್ತನ್ನು ಆಳಿತು. ಜಗತ್ತನ್ನು ಆಳಿ ಆರ್ಥಿಕತೆ ಸದೃಢವಾಗಬೇಕು ಎಂದು ಮನಗಂಡ ನಂತರ ಮೊದಲು ‘ಇಸ್ಲಾಮಿಕ್ ಬ್ಯಾಂಕಿಂಗ್’ ಆರಂಭವಾಯಿತು. ಭಾರತದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾರತದಲ್ಲಿ ‘ಇಸ್ಲಾಮಿಕ್ ಬ್ಯಾಂಕಿಂಗ್’ ಅನ್ನು ಅನುಮತಿಸಿದ್ದರು; ಆದರೆ ಅವರ ಸರ್ಕಾರ ಪತನವಾದನಂತರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಅದರ ನಂತರ ಹಲಾಲ್ ಪ್ರಮಾಂ ಪತ್ರ ಪ್ರಾರಂಭಿಸಲಾಯಿತು. 2017 ರಲ್ಲಿ, ಹಲಾಲ್ ಪ್ರಮಾಣೀಕರಣದ ಆರ್ಥಿಕತೆಯು 2.1 US ಟ್ರಿಲಿಯನ್ ಡಾಲರ್ (1 ಸಾವಿರದ 754 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು) ಆಗಿತ್ತು. 2028 ರ ಹೊತ್ತಿಗೆ, ಹಲಾಲ್ ಪ್ರಮಾಣ ಪತ್ರದ ಆರ್ಥಿಕತೆಯು 4 U.S. ಟ್ರಿಲಿಯನ್ ಡಾಲರ್‌ಗೆ (ರೂ. 3,400,000,000 ಕೋಟಿಗೂ ಹೆಚ್ಚು) ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.