ಲೋಕಸಭೆಯಲ್ಲಿ ‘ಪ್ಯಾಲೆಸ್ಟೈನ್’ಗೆ ಜೈಕಾರ ಹಾಕಿದ್ದ ಅಸಾದುದ್ದೀನ್ ಓವೈಸಿಯ ಸದಸ್ಯತ್ವ ರದ್ದುಪಡಿಸಿ ! – ಠರಾವು ಮಂಡನೆ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಮೂರನೇ ದಿನ ಠರಾವು !

‘ಹರ ಹರ ಮಹಾದೇವ’ ಘೋಷಣೆಯೊಂದಿಗೆ ಎಲ್ಲ ಹಿಂದುತ್ವನಿಷ್ಠರಿಂದ ಬೆಂಬಲ ವ್ಯಕ್ತ !

ರಾಮನಾಥಿ, ಗೋವಾ, 26 ಜೂನ್ (ಸುದ್ದಿ.) – ಭಾರತದ ಸಂವಿಧಾನದ ಪರಿಚ್ಛೇದ 102 ‘ಡಿ’ ವಿಧಿಯ ಪ್ರಕಾರ, ಸಂಸತ್ತಿನ ಯಾವುದೇ ಸದಸ್ಯರು ಇತರ ಯಾವುದೇ ದೇಶವನ್ನು ಬೆಂಬಲಿಸುವುದು ಕಾನೂನುಬಾಹಿರವಾಗಿದೆ. ಅದರಂತೆ ಅವರ ಸದಸ್ಯತ್ವ ರದ್ದಾಗುತ್ತದೆ. ಭಾರತದ ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸುವಾಗ ಇತರ ದೇಶಗಳಿಗೆ ನಿಷ್ಠೆ ತೋರಿಸುವುದು ದೇಶದ್ರೋಹ ಮತ್ತು ಭಾರತಕ್ಕೆ ಮಾಡಿದ ಅವಮಾನವಾಗಿದೆ. ಆದ್ದರಿಂದ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಅಸಾದುದ್ದೀನ್ ಓವೈಸಿಗೆ ತೀವ್ರ ಖಂಡನೆ ವ್ಯಕ್ತಪಡಿಸಲಾಯಿತು ಮತ್ತು ಲೋಕಸಭೆ ಸ್ಪೀಕರ್ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರ ಬಳಿ ಅಸಾದುದ್ದೀನ್ ಓವೈಸಿಯ ಸದಸ್ಯತ್ವವನ್ನು ತೆಗೆದುಹಾಕುವಂತೆ ಒತ್ತಾಯಿಸುವ ಠರಾವನ್ನು ಮಂಡಿಸಲಾಯಿತು. ‘ಎಂ.ಐ.ಎಂ.’ನ ಭಾಗ್ಯನಗರದ ಸಂಸದ ಅಸಾದುದ್ದೀನ್ ಓವೈಸಿ ಲೋಕಸಭೆಯಲ್ಲಿ ‘ಲೋಕಸಭಾ ಸದಸ್ಯತ್ವ’ ಪ್ರಮಾಣ ವಚನ ಸ್ವೀಕರಿಸುವಾಗ ‘ಜೈ ಭೀಮ್, ಜೈ ಮೀಮ್’, ‘ಅಲ್ಲಾಹು ಅಕ್ಬರ್’ ಎಂಬ ಘೋಷಣೆಗಳ ಜೊತೆಗೆ ‘ಜೈ ಫಿಲಿಸ್ಟಿನ್ (ಪ್ಯಾಲೆಸ್ತೀನ್) ಎಂದು ಘೋಷಣೆ ನೀಡಿದರು. ಈ ಹಿನ್ನೆಲೆಯಲ್ಲಿ ಈ ಠರಾವನ್ನು ಮಂಡಿಸಲಾಯಿತು.

ಇಂದು ‘ಜೈ ಪ್ಯಾಲೆಸ್ತೀನ್’ ಎಂದು ಹೇಳುವವರು ನಾಳೆ ‘ಜೈ ಪಾಕಿಸ್ತಾನ’ ಎಂದು ಹೇಳಲು ಹಿಂದೆ ಮುಂದೆ ನೋಡುವುದಿಲ್ಲ !

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಮಂಡಿಸಿದ ಠರಾವಿನ ಕುರಿತು ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಇವರು, ”ಇಂದು ‘ಜೈ ಪ್ಯಾಲೆಸ್ತೀನ್’ ಎಂದು ಹೇಳುವವರು ನಾಳೆ ‘ಜೈ ಹಮಾಸ್’ ಎಂದು ಮತ್ತು ಮುಂದೆ ಅವರು ‘ಜೈ ಪಾಕಿಸ್ತಾನ’ ಎಂದು ಹೇಳಲು ಹಿಂಜರಿಯಲಾರರು. ಆದ್ದರಿಂದ ಓವೈಸಿ ಅವರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಶಾಶ್ವತವಾಗಿ ನಿಷೇಧಿಸಬೇಕು ಎಂದು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಬೇಡಿಕೆ ಮಾಡಲಾಯಿತು. ‘ಹರ ಹರ ಮಹಾದೇವ’ ಎಂಬ ಘೋಷಣೆಯೊಂದಿಗೆ ಎಲ್ಲ ಹಿಂದುತ್ವನಿಷ್ಠರು ಬೆಂಬಲಿಸಿದರು.

ಸಂಸತ್ತಿನಲ್ಲಿ ಆಡಳಿತಾರೂಢ ಪಕ್ಷದ ಸಂಸದ ಶ್ರೀ. ಛತ್ರಪಾಲ್ ಇವರು ‘ಜೈ ಹಿಂದೂ ರಾಷ್ಟ್ರ’ ಘೋಷಣೆ ನೀಡುವುದು ಸಕಾರಾತ್ಮಕ ಹೆಜ್ಜೆ ! – ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ

ಶ್ರೀ. ಚೇತನ ರಾಜಹಂಸ

ಸಂಸತ್ತಿಗೆ ಉತ್ತರಪ್ರದೇಶದಿಂದ ನೂತನವಾಗಿ ಆಯ್ಕೆಯಾದ ಸಂಸದ ಶ್ರೀ. ಛತ್ರಪಾಲ ಅವರು ಪ್ರಮಾಣ ವಚನ ಸ್ವೀಕರಿಸುವಾಗ ‘ಜೈ ಹಿಂದೂ ರಾಷ್ಟ್ರ’ ಎಂದು ಘೋಷಣೆ ನೀಡಿದರು. ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಈ ಬಗ್ಗೆಯೂ ಚರ್ಚಿಸಲಾಯಿತು. ‘ಮಾಧ್ಯಮದಲ್ಲಿ ಮಂಡಿಸಲಾಗುತ್ತಿರುವ ರಾಷ್ಟ್ರೀಯ ಅಂಶಗಳು ಮತ್ತು ಹಿಂದೂ ರಾಷ್ಟ್ರ’ ಕುರಿತ ವಿಚಾರ ಸಂಕಿರಣದಲ್ಲಿ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಅವರಲ್ಲಿ ಈ ಬಗ್ಗೆ ವಿಚಾರಿಸಿದಾಗ, “2012 ರಿಂದ 2024 ರವರೆಗಿನ ಹಿಂದೂ ರಾಷ್ಟ್ರ ಅಧಿವೇಶನಗಳಲ್ಲಿ ಹಿಂದೂ ರಾಷ್ಟ್ರದ ಜೈಕಾರ ಆಗುತ್ತಿತ್ತು ಅದರ ಫಲವೇ ಸಂಸತ್ತಿನಲ್ಲಿ ‘ಜೈ ಹಿಂದೂ ರಾಷ್ಟ್ರ’ ಘೋಷಣೆಯೂ ಒಂದಾಗಿದೆ” ಇದು ತುಂಬಾ ದೊಡ್ಡ ಧೈರ್ಯ ಎಂದು ಹೇಳಿದರು. ಇದನ್ನು ಸಂಸತ್ತಿನ ವ್ಯಾಖ್ಯೆಯಲ್ಲಿ ಸಂಸದೀಯ ಶಬ್ದದ ರೂಪದಲ್ಲಿ ಸೇರಿಸಬೇಕು. 17ನೇ ಲೋಕಸಭೆಯಲ್ಲಿ ಹಿಂದೂ ರಾಷ್ಟ್ರ ಎಂಬ ಪದವನ್ನು 4 ಬಾರಿ ಬಳಸಲಾಗಿದೆ; ಆದರೆ ವಿರೋಧ ಪಕ್ಷ ಬಳಸಿತ್ತು. ಇದೇ ಮೊದಲಬಾರಿ ಆಡಳಿತ ಪಕ್ಷದ ಸಂಸದರು ಈ ಘೋಷಣೆ ಮಾಡಿದ್ದಾರೆ. ಇದೊಂದು ಸಕಾರಾತ್ಮಕ ಹೆಜ್ಜೆ.” ಎಂದು ಹೇಳಿದರು.

ಹಿಂದೂ ರಾಷ್ಟ್ರ ಎಂಬುದು ಸಂವಿಧಾನ ವಿರೋಧಿ ಪದವಲ್ಲ !

ಶ್ರೀ. ರಾಜಹಂಸ್ ತಮ್ಮ ಮಾತನ್ನು ಮುಂದುವರೆಸಿ, ಹಿಂದೂ ರಾಷ್ಟ್ರ ಎಂಬುದು ಸನಾತನ ಸಂಪ್ರದಾಯದಲ್ಲಿ ಮೊದಲಿನಿಂದಲೂ ಇರುವ ಪದವಾಗಿದೆ. ಹಿಂದೂ ರಾಷ್ಟ್ರ ಎಂಬುದು ಸಂವಿಧಾನ ವಿರೋಧಿ ಪದವಲ್ಲ. ಈ ರಾಷ್ಟ್ರ ಹಿಂದೂಗಳಿಗೆ ಸೇರಿತ್ತು. ಮಾಧ್ಯಮಗಳು ವಿವಾದಾತ್ಮಕ ಸ್ವರೂಪವನ್ನು ನೀಡಿವೆ. ಈ ಬಗ್ಗೆ ನಾವು ಪ್ರತಿವಾದ ಮಾಡಬೇಕು. ಮಾಧ್ಯಮಗಳನ್ನು ಹಿಂದೂ ವಿರೋಧಿ ಶಕ್ತಿಗಳು ನಡೆಸುತ್ತವೆ. ಉದ್ದೇಶಪೂರ್ವಕವಾಗಿ ಹಿಂದೂ ರಾಷ್ಟ್ರದ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಆದ್ದರಿಂದ ಅದನ್ನು ವಿರೋಧಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

ಸಂವಿಧಾನಕ್ಕನುಸಾರವೇ ಓವೈಸಿ ವಿರುದ್ಧ ದೇಶದ್ರೋಹದ ಅಪರಾಧ ನೊಂದಾಯಿಸಬೇಕು ! – ರಮೇಶ ಶಿಂದೆ

ಶ್ರೀ. ರಮೇಶ ಶಿಂದೆ

‘ಮಾಧ್ಯಮಗಳಲ್ಲಿ ಕೇಳಲಾಗುತ್ತಿರುವ ರಾಷ್ಟ್ರೀಯ ಅಂಶಗಳು ಮತ್ತು ಹಿಂದೂ ರಾಷ್ಟ್ರ’ ವಿಷಯದ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡುತ್ತಾ ಶ್ರೀ. ರಮೇಶ ಶಿಂದೆ ಅವರು, ”ಸಂವಿಧಾನ ಬದಲಿಸುತ್ತೇವೆ’ ಎಂದು ಎಲ್ಲರೂ ಪದೇ ಪದೇ ಹೇಳುತ್ತಿದ್ದಾರೆ’. ಸಂವಿಧಾನದ ಪ್ರಕಾರ ‘ಜೈ ಪ್ಯಾಲೆಸ್ತೀನ್’ ಘೋಷಣೆ ಮಾಡಬಹುದೇ ಎಂಬುದು ಮೊದಲ ಪ್ರಶ್ನೆಯಾಗಿದೆ. ಸಂವಿಧಾನದ ಪರಿಚ್ಛೇದ ‘102 ಡಿ’ ಪ್ರಕಾರ ಭಾರತದ ಯಾವುದೇ ಸಂಸತ ಸದಸ್ಯರು ಭಾರತವನ್ನು ಹೊರತುಪಡಿಸಿ ಇತರ ಯಾವುದೇ ದೇಶಕ್ಕೆ ನಿಷ್ಠೆಯನ್ನು ತೋರಿಸಿದರೆ, ಅವರು ಸಂಸತ್ತಿನ ಸದಸ್ಯತ್ವದಿಂದ ವಂಚಿತರಾಗುತ್ತಾರೆ.

ಭಾರತ ವಿರೋಧಿ ಕೃತ್ಯ ಹಾಗೆಯೇ ಭಾರತಿಯ ಸಂವಿಧಾನದ ಬಗ್ಗೆ ನಿಷ್ಠೆ ಇಡದೇ ಅದನ್ನು ಬಿಟ್ಟು ಯಾವುದೇ ದೇಶದ ಬಗ್ಗೆ ನಿಷ್ಠೆ ತೋರಿಸುವುದನ್ನು ಸಂವಿಧಾನದಲ್ಲಿಯೇ ನಿಷೇಧಿಸಲಾಗಿದೆ. ಆದ್ದರಿಂದ ಸಂವಿಧಾನದ ಪ್ರಕಾರ ಎಂ.ಐ.ಎಂ. ಪಕ್ಷದ ಸಂಸದ ಓವೈಸಿಯ ಸಂಸತ್ ಸದಸ್ಯತ್ವವನ್ನು ಕಿತ್ತೊಗೆಯಬೇಕು ! ‘ಇಂಡಿ ಮೈತ್ರಿಕೂಟಕ್ಕೆ ಸಂವಿಧಾನ ಬದಲಾಗುತ್ತದೆ ಎಂಬ ಭಯವಿದೆ ಈಗ ಸಂವಿಧಾನದಲ್ಲಿ ಏನು ಬರೆದಿದೆಯೋ ಅದನ್ನೇ ಅನುಸರಿಸಬೇಕು. ಅದರಂತೆ ಓವೈಸಿ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕು. ಇವರು ‘ಭಾರತಮಾತಾ ಕೀ ಜೈ, ‘ವಂದೇ ಮಾತರಂ ಎಂದು ಹೇಳುವುದಿಲ್ಲ, ಕೆಲವರು ‘ವಂದೇ ಮಾತರಂ ಹೇಳಲು ಎದ್ದು ನಿಲ್ಲುವುದಿಲ್ಲ, ಹೀಗಿರುವಾಗ ಪ್ಯಾಲೆಸ್ತೀನ್ ಯಾವಾಗ ಇವರಿಗೆ ತಾಯಿಯಾಯಿತು ? ಯಾವ ದೇಶ ಅಸ್ತಿತ್ವದಲ್ಲಿ ಇಲ್ಲವೋ ಅದಕ್ಕಾಗಿ ‘ಜೈ ಪ್ಯಾಲೆಸ್ತೀನ್’ ಹೇಳುತ್ತಿದ್ದಾರೆ. ‘ಜೈ ಪ್ಯಾಲೆಸ್ತೀನ್ ಎಂದು ಹೇಳುವುದಾದರೆ ಅಲ್ಲಿಗೆ ಹೋಗಿ ಹೇಳಿ. ಇಲ್ಲಿಯೇ ಇದ್ದು ಹೇಳಲು ಸಾಧ್ಯವಿಲ್ಲ, ನಾವು ಹೇಳುವವರೆಗೆ ಏನೂ ಆಗುವುದಿಲ್ಲ. ಮುಂಬಯಿನಲ್ಲಿ ಹಿಂದೂ ಕಾರ್ಯಕರ್ತರು ಪಾಕಿಸ್ತಾನದ ಧ್ವಜವನ್ನು ಸುಟ್ಟಾಗ, ಅದರ ಕುರಿತಾದ ಪ್ರಕರಣವು ಸುಪ್ರೀಂ ಕೋರ್ಟ್ಗೆ ಹೋದಾಗ, ನ್ಯಾಯಾಧೀಶರೇ, “ಭಾರತೀಯ ದಂಡ ಸಂಹಿತೆಯ ಯಾವ ಸೆಕ್ಷನ್ ಪ್ರಕಾರ ಪಾಕಿಸ್ತಾನದ ಧ್ವಜವನ್ನು ಸುಡುವುದು ಅಪರಾಧ ಎಂದು ಹೇಳಲಾಗಿದೆ?” ಭಾರತದ ಧ್ವಜವನ್ನು ಸುಟ್ಟಿಲ್ಲವಲ್ಲ, ಎಂದು ವಿಚಾರಿಸಿದರು. ನಮ್ಮ ಮೇಲೆ ಹಲ್ಲೆ ಮಾಡುವವರ ಧ್ವಜ ಸುಡದೇ ಇನ್ನು ಏನು ಮಾಡಬಹುದು ? ಓವೈಸಿಯನ್ನು ಸಂಸತ್ತಿನಿಂದ ನಿರ್ಬಂಧಿಸುವುದು ಮಾತ್ರವಲ್ಲ, ದೇಶದ್ರೋಹದ ಪ್ರಕರಣವನ್ನೂ ದಾಖಲಿಸಬೇಕು. ಇದರೊಂದಿಗೆ ಬಿಜೆಪಿ ಸಂಸದ ಶ್ರೀ. ಛತ್ರಪಾಲ್ ಗಂಗವಾರ್ ಇವರು ಲೋಕಸಭೆಯ ಸದಸ್ಯತ್ವ ಪ್ರಮಾಣವಚನದಲ್ಲಿ ‘ಜೈ ಹಿಂದೂ ರಾಷ್ಟ್ರ, ಜೈ ಭಾರತ್’ ಎಂದು ಘೋಷಣೆ ಕೂಗಿದರು. ನಾನು ಈ ಸಕಾರಾತ್ಮಕ ಕೃತಿಯನ್ನು ಸ್ವಾಗತಿಸುತ್ತೇನೆ.” ಎಂದು ಹೇಳಿದರು.