ಮಕ್ಕಳಿಗೆ ಧರ್ಮ ಶಿಕ್ಷಣ ಸಿಗಲು ಸಂತರು ಮುಂದಾಳತ್ವ ವಹಿಸಬೇಕು ! – ಗುರು ಮಾ ಭುವನೇಶ್ವರಿ ಪುರಿ, ಸಂಸ್ಥಾಪಕರು, ಶ್ರೀಕುಲಂ ಆಶ್ರಮ ಮತ್ತು ಶ್ರೀವಿದ್ಯಾ ವನ್ ವಿದ್ಯಾಲಯ, ಉದಯಪುರ, ರಾಜಸ್ಥಾನ

ಗುರು ಮಾ ಭುವನೇಶ್ವರಿ ಪುರಿ

ವಿದ್ಯಾರ್ಥಿಗಳು ಅನೇಕ ವಿಷಯಗಳನ್ನು ಕಲಿಯುತ್ತಾರೆ; ಆದರೆ ಅವರಿಗೆ ಧರ್ಮ ಶಿಕ್ಷಣ ಸಿಗುವುದಿಲ್ಲ. ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಧರ್ಮ ಶಿಕ್ಷಣ ನೀಡಬೇಕು. ನಮಸ್ಕಾರದ ಯೋಗ್ಯ ವಿಧಾನ, ಜಪಮಾಲೆಯ ಯೋಗ್ಯ ಉಪಯೋಗ ? ಪ್ರದಕ್ಷಿಣೆಯನ್ನು ಹೇಗೆ ಹಾಕುವುದು? ಕುಲದೇವರ ನಾಮಜಪ ಏಕೆ ಮಾಡಬೇಕು? ನಮ್ಮ ರಾಷ್ಟ್ರ ನಾಯಕರು ಯಾರು? ದೇವಿದೇವತೆಗಳು ಯಾರು ? ಈ ಮಾಹಿತಿಯನ್ನು ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ನೀಡಬೇಕು. ಧರ್ಮ ಶಿಕ್ಷಣಕ್ಕಾಗಿ ಸಣ್ಣಸಣ್ಣ ಅಭ್ಯಾಸ ಕ್ರಮಗಳನ್ನು (ಕ್ಯಾಪ್ಸುಲ್ ಕೋರ್ಸ್‌ಗಳು) ಸಿದ್ಧಪಡಿಸಬೇಕು. ಕಾನ್ವೆಂಟ್ ಅಥವಾ ಖಾಸಗಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳು ಪ್ರಾಥಮಿಕವಾಗಿ ಧರ್ಮ ಶಿಕ್ಷಣವನ್ನು ಪಡೆಯಬೇಕಾಗುತ್ತದೆ; ಏಕೆಂದರೆ ಅವರಿಗೆ ಧರ್ಮ ಶಿಕ್ಷಣ ನೀಡುವ ಯಾವುದೇ ವ್ಯವಸ್ಥೆ ಇಲ್ಲ. ಧರ್ಮ ಶಿಕ್ಷಣದೊಂದಿಗೆ ಸಣ್ಣ-ಸಣ್ಣ ಗುರುಕುಲಗಳನ್ನು ರಚಿಸಬೇಕು.

ನಾವು 3 ಮಕ್ಕಳಿಂದ ಗುರುಕುಲಗಳನ್ನು ಪ್ರಾರಂಭಿಸಿದ್ದೇವೆ. ಈಗ ನಮ್ಮ ಗುರುಕುಲಕ್ಕೆ ಬರಲು ಪೋಷಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ‘ಮಕ್ಕಳು ಇಂಗ್ಲಿಷ್ ಕಲಿಯುವುದಕ್ಕಿಂತ ಉತ್ತಮ ಸಂಸ್ಕಾರವನ್ನು ಹೊಂದಿರಬೇಕು’ ಎಂಬುದು ಸದ್ಯದ ಪೋಷಕರಿಗೆ ಅನಿಸುತ್ತದೆ. ವಿದ್ಯಾರ್ಥಿಗಳಿಗೆ ಧರ್ಮ ಶಿಕ್ಷಣದ ಅವಶ್ಯಕತೆಯಿದೆ. ಹಿಂದೂ ಮಕ್ಕಳು ಧರ್ಮ ಶಿಕ್ಷಣ ಪಡೆಯಲು ಎಲ್ಲಾ ಸಂತರು ಕೊಡುಗೆ ನೀಡಬೇಕು. ಪ್ರತಿಯೊಬ್ಬರೂ ಕನಿಷ್ಠ 5 ಜನರಿಗೆ ಧರ್ಮ ಶಿಕ್ಷಣ ನೀಡಬೇಕು. ಮಕ್ಕಳಿಗೆ ಧರ್ಮ ಶಿಕ್ಷಣ ನೀಡಿದರೆ ಮಿಷನರಿಗಳ ಮತಾಂತರ ಕಾರ್ಯ ತಾನಾಗಿಯೇ ನಿಂತು ಹೋಗುತ್ತದೆ.

ಸನಾತನ ಸಂಸ್ಥೆಯಿಂದಲೇ ಶಾಸ್ತ್ರೀಯ ಭಾಷೆಯಲ್ಲಿ ಧರ್ಮಶಿಕ್ಷಣ ಸಿಗುತ್ತದೆ !

ಅನೇಕ ಸಂಸ್ಥೆಗಳಿಂದ ಧರ್ಮ ಶಿಕ್ಷಣ ನೀಡಲಾಗುತ್ತದೆ; ಆದರೆ ಅವರಿಗೆ ಧರ್ಮದ ಬಗ್ಗೆ ಸಂಪೂರ್ಣ ಜ್ಞಾನವಿಲ್ಲ. ಹೆಚ್ಚಿನ ಸ್ಥಳಗಳಲ್ಲಿ ಸಂಪ್ರದಾಯಗಳ ಮಾಹಿತಿ ಇರುತ್ತದೆ. ಕೇವಲ ಸನಾತನ ಸಂಸ್ಥೆಯಿಂದಲೇ ಪರಿಪೂರ್ಣವಾಗಿ ಹಾಗೂ ಶಾಸ್ತ್ರೀಯ ಆಧಾರದಲ್ಲಿ ಧರ್ಮ ಶಿಕ್ಷಣ ನೀಡಲಾಗುತ್ತದೆ, ಎಂದು ಪೂಜ್ಯ ಗುರು ಮಾ ಭುವನೇಶ್ವರಿ ಪುರಿ ಅವರು ಹೇಳಿದರು.