Robo Dogs : ಭಾರತೀಯ ಸೇನೆಗೆ ಶೀಘ್ರದಲ್ಲೇ ‘ರೋಬೋ ಡಾಗ್ಸ್’ ನಲ್ಲಿ ಸೇರ್ಪಡೆ!

ನವದೆಹಲಿ – ಭಾರತೀಯ ಸೇನೆಯು ಶೀಘ್ರದಲ್ಲೇ ನಾಯಿ ಗಾತ್ರದ ರೋಬೋಟ್ ನಾಯಿಗಳನ್ನು (ಮಲ್ಟಿ-ಯುಟಿಲಿಟಿ ಲೆಗ್ಡ್ ಎಕ್ವಿಪ್‌ಮೆಂಟ್) ಸೇರ್ಪಡೆಗೊಳಿಸಲಿದೆ. ಈ ರೋಬೋಟ್ ನಾಯಿಗಳು ಆವಶ್ಯಕವೆನಿಸಿದರೆ, ಶತ್ರುಗಳ ಮೇಲೆ ಗುಂಡುಗಳನ್ನು ಕೂಡ ಹಾರಿಸುತ್ತದೆ. ಇದರ ಉಪಯೋಗವನ್ನು ಪ್ರಮುಖವಾಗಿ ಶತ್ರುಗಳ ಮೇಲೆ ನಿಗಾ ವಹಿಸುವುದು ಮತ್ತು ಕಡಿಮೆ ತೂಕದ ಸರಕುಗಳನ್ನು ಸಾಗಿಸಲು ಬಳಸಲಾಗುತ್ತದೆ. ಭಾರತೀಯ ಸೇನೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 100 ರೋಬೋಟ್ ನಾಯಿಗಳಿಗೆ ಬೇಡಿಕೆ ಸಲ್ಲಿಸಿತ್ತು. ಈಗ ಮೊದಲ ಹಂತದಲ್ಲಿ 25 ರೋಬೋಟ್‌ಗಳು ಲಭ್ಯವಾಗಲಿವೆ. ಪ್ರಸ್ತುತ ಪ್ರಾಥಮಿಕವಾಗಿ, ರೋಬೋಟ್ ನಾಯಿಗಳನ್ನು ಖರೀದಿಸಲಾಗುತ್ತದೆ. ಒಂದು ವೇಳೆ ರೋಬೋಟ್ ನಾಯಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ಅವುಗಳ ಸಂಖ್ಯೆ ಹೆಚ್ಚು ಮಾಡಲಾಗುತ್ತದೆ.

ರೋಬೋ ನಾಯಿಯ ವೈಶಿಷ್ಟ್ಯಗಳು

1. ರೋಬೋಟ್ ನಾಯಿಯ ತೂಕ 51 ಕೆಜಿ ಇದ್ದು, ಅದರ ಉದ್ದ 27 ಇಂಚುಗಳು ಇದೆ. ಈ ನಾಯಿಗಳನ್ನು ರಿಮೋಟ್ ಮೂಲಕ ನಿಯಂತ್ರಿಸಬಹುದು.

2. ಈ ನಾಯಿಗಳಲ್ಲಿ ಥರ್ಮಲ್ ಕ್ಯಾಮೆರಾಗಳು ಮತ್ತು ಇತರ ವಿವಿಧ ಸಂವೇದಕಗಳನ್ನು ಅಳವಡಿಸಲಾಗಿದೆ. ಅದರ ಸಹಾಯದಿಂದ ಶತ್ರುಗಳ ಸ್ಥಳವು ಸುಲಭವಾಗಿ ಗೋಚರಿಸುತ್ತದೆ. ಇದು ರಾತ್ರಿಯ ಕತ್ತಲೆಯಲ್ಲಿಯೂ ಕೆಲಸ ಮಾಡಬಹುದು.

3. ಈ ರೋಬೋಟ್ ನಾಯಿಗಳಲ್ಲಿ ಸಣ್ಣ ಗಾತ್ರದ ಶಸ್ತ್ರಾಸ್ತ್ರಗಳನ್ನು ಜೋಡಿಸಲಾಗಿದೆ, ಆವಶ್ಯಕತೆ ಬಿದ್ದರೆ ಶತ್ರುಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿವೆ.

4. ರಸ್ತೆಗಳು, ಕಾಡುಗಳು, ಪರ್ವತಗಳಂತಹ ವಿವಿಧ ಸ್ಥಳಗಳಲ್ಲಿ ಈ ನಾಯಿಗಳು ಓಡಬಲ್ಲವು ಮತ್ತು ಸ್ವಯಂಚಾಲಿತವಾಗಿ ಕೆಲವು ಸರಕುಗಳನ್ನು ಸಾಗಿಸಬಹುದಾಗಿದೆ.

5. ಈ ರೋಬೋಟ್ ನಾಯಿಗಳು ಬ್ಯಾಟರಿಗಳನ್ನು ಹೊಂದಿದ್ದು ಒಮ್ಮೆ ಚಾರ್ಜ್ ಮಾಡಿದರೆ 10 ಗಂಟೆಗಳ ಕಾಲ ಕೆಲಸ ಮಾಡಬಲ್ಲವು.