Disqualify MP Asaduddin Owaisi: ಅಸದುದ್ದೀನ ಓವೈಸಿಯವರ ಸದಸ್ಯತ್ವವನ್ನು ರದ್ದುಗೊಳಿಸಿರಿ ! – ನ್ಯಾಯವಾದಿ ಪೂ. ಹರಿಶಂಕರ ಜೈನ

ಸಂಸತ್ತಿನಲ್ಲಿ ಪ್ಯಾಲಿಸ್ಟಿನನೊಂದಿಗೆ ನಿಷ್ಠೆಯನ್ನು ತೋರಿಸಿದ್ದರಿಂದ ನ್ಯಾಯವಾದಿ ಪೂ. ಹರಿಶಂಕರ ಜೈನರಿಂದ ರಾಷ್ಟ್ರಪತಿಗಳಿಗೆ ಮನವಿ

ನವದೆಹಲಿ – ಎಮ್.ಐ.ಎಮ್. ಪಕ್ಷದ ನಾಯಕ ಮತ್ತು ಸಂಸದ ಅಸದುದ್ದೀನ ಓವೈಸಿಯವರ ಪ್ರಮಾಣ ವಚನದ ಸಮಯದಲ್ಲಿ ಅವರು ‘ಜಯ ಭೀಮ, ಜಯ ತೆಲಂಗಾಣ, ಜಯ ಪ್ಯಾಲಿಸ್ಟಿನ’ ಎಂದು ಹೇಳುತ್ತ, ಅಲ್ಲಾಹೂ ಅಕಬರ (ಅಲ್ಲಾ ದೊಡ್ಡವನು) ಎಂದು ಘೋಷಣೆ ಕೂಗಿದ್ದರು. ಇದರಿಂದ ಓವೈಸಿಯವರನ್ನು ತೀವೃವಾಗಿ ವಿರೋಧಿಸಲಾಗುತ್ತಿದೆ. ಅವರನ್ನು ಸಂಸದ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಲಾಗುತ್ತಿದೆ. ಭಾಜಪದ ಅನೇಕ ಸಂಸದರು ಓವೈಸಿಯವರ ಘೋಷಣೆಯ ಮೇಲೆ ಆಕ್ಷೇಪ ವ್ಯಕ್ತಪಡಿಸಿ, ನಿಷೇಧ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ನ್ಯಾಯವಾದಿ ಪೂ. ಹರಿಶಂಕರ ಜೈನರವರು ಅಸದುದ್ದೀನ ಓವೈಸಿಯವರ ವಿರುದ್ಧ ಸಂವಿಧಾನದ ಕಲಂ 102 ಮತ್ತು 103ರ ಅಡಿಯಲ್ಲಿ ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಿದ್ದಾರೆ. ನ್ಯಾಯವಾದಿ ಅಮಿತಾ ಸಚದೇವಾ ಮತ್ತು ನ್ಯಾಯವಾದಿ ವಿಭೋರ ಆನಂದರವರೂ ಇದೇ ರೀತಿಯ ದೂರನ್ನು ಲೋಕಸಭೆ ಸಚಿವಾಲಯಕ್ಕೆ ಸಲ್ಲಿಸಿದ್ದಾರೆ. ಭಾಜಪದ ಶಾಸಕ ಟಿ. ರಾಜಾ ಸಿಂಹರವರು ಮಾತನಾಡಿ, ನಿಮಗೆ ಪ್ಯಾಲಿಸ್ಟಿನ ಮೇಲೆ ಇಷ್ಟು ಪ್ರೀತಿಯಿದ್ದರೆ, ಬಂದೂಕು ಎತ್ತಿಕೊಂಡು ಪ್ಯಾಲಿಸ್ಟಿನಗೆ ಹೋಗಿರಿ ಎಂದು ಹೇಳಿದರು. ಇದಕ್ಕೆ ಓವೈಸಿಯವರು ಉದ್ಧಟತನದಿಂದ ಏನು ಹೇಳಿದೆನೋ ಅದನ್ನು ಎಲ್ಲರೆದುರಿಗೆ ಹೇಳಿದ್ದೇನೆ ಎಂದು ಹೇಳಿದರು.
ಸಂಸತ್ತಿನ ನಿಯಮಗಳ ಪ್ರಕಾರ, ಯಾವುದೇ ಸದನದ ಸದಸ್ಯರು ಅನ್ಯ ರಾಜ್ಯದೊಂದಿಗೆ (ದೇಶದೊಂದಿಗೆ) ನಿಷ್ಠೆಯನ್ನು ತೋರಿಸಿದರೆ, ಅವರನ್ನು ಲೋಕಸಭೆ ಅಥವಾ ಯಾವುದೇ ಸದನದ ಸದಸ್ಯತ್ವಕ್ಕೆ ಅನರ್ಹಗೊಳಿಸಬಹುದು.

ಸಂಪಾದಕೀಯ ನಿಲುವು

ಓವೈಸಿಯಂತಹ ಭಾರತ ವಿರೋಧಿ ಜನರಿಂದ ಇಂತಹ ಹೇಳಿಕೆಗಳು ಬರುವುದು ಆಶ್ಚರ್ಯಕರವಲ್ಲ, ಆದರೂ ಈ ಮಾಧ್ಯಮದಿಂದ ಪ್ಯಾಲಿಸ್ಟಿನನೊಂದಿಗೆ ನಿಷ್ಠೆ, ಅಂದರೆ ಸ್ವದೇಶಕ್ಕಿಂತ ಇಸ್ಲಾಂನಪ್ರತಿ ನಿಷ್ಠೆಯನ್ನು ತೋರಿಸುವುದೇ ಅವರ ಹೇಳಿಕೆಯಾಗಿರುವುದರಿಂದ ಅವರ ವಿರುದ್ಧ ಕ್ರಮಕೈಕೊಳ್ಳಬೇಕು !