ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಒತ್ತಾಯ!
ನವದೆಹಲಿ – ಬಿಜೆಪಿ ಸಂಸದ ಓಂ ಬಿರ್ಲಾ ಅವರು ಮತ್ತೊಮ್ಮೆ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಕೂಡ 18ನೇ ಲೋಕಸಭೆಯ ಸ್ಪೀಕರ್ ಹುದ್ದೆಗೆ ಅವರ ಹೆಸರನ್ನು ಘೋಷಿಸಿದ್ದರು. ಬಿರ್ಲಾ ಅವರ ಆಯ್ಕೆಯ ನಂತರ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದರು. ‘ಬಿರ್ಲಾ ಅವರು ಕಳೆದ ಅವಧಿಯ ಅಧ್ಯಕ್ಷರಾಗಿದ್ದ ಅನುಭವವು ದೇಶವನ್ನು ಮತ್ತಷ್ಟು ಮುನ್ನಡೆಸಲು ಸಹಾಯ ಮಾಡುತ್ತದೆ’, ಎಂಬ ವಿಶ್ವಾಸವನ್ನು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ‘ಇಂಡಿ’ ಮೈತ್ರಿಕೂಟದ ಪಕ್ಷಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಲೋಕಸಭೆಯ ಸ್ಪೀಕರ್ ಅನ್ನು ಸರ್ವಾನುಮತದಿಂದ ಆಯ್ಕೆ ಮಾಡುವಂತೆ ಮನವಿ ಮಾಡಿದ್ದರು.
ಲೋಕಸಭೆಯ ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ಗೆ ನೀಡಬೇಕೆಂದು ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಗೆ ಈ ಹುದ್ದೆಯನ್ನು ನೀಡುವ ಸಿದ್ದತೆಯನ್ನು ಬಿಜೆಪಿ ತೋರಿಸಿದ್ದರೂ, ‘ವಿರೋಧಿಗಳು ಷರತ್ತುಗಳನ್ನು ವಿಧಿಸಬಾರದು’ ಎಂದು ಕೂಡ ಬಿಜೆಪಿ ಹೇಳಿದೆ.
Om Birla wins Lok Sabha Speaker battle, to steer Lower House for 2nd term#ITVideo #ParliamentSession #LokSabhaSpeaker #OmBirla pic.twitter.com/qvik6sUvvc
— IndiaToday (@IndiaToday) June 26, 2024