ಮನೆಗಳಲ್ಲಿ ವೇದ, ಉಪನಿಷತ್ತು ಮತ್ತು ಗೀತೆಗಳನ್ನು ಅಧ್ಯಯನ ಮಾಡಬೇಕು ! – ಮಹಾಂತ ಆಚಾರ್ಯ ಪೀಠಾಧೀಶ್ವರ ಡಾ. ಅನಿಕೇತಶಾಸ್ತ್ರಿ ದೇಶಪಾಂಡೆ, ಅಖಿಲ ಭಾರತ ಸಂತ ಸಮಿತಿ, ಧರ್ಮ ಸಮಾಜ, ಮಹಾರಾಷ್ಟ್ರ ಪ್ರದೇಶ ಮುಖ್ಯಸ್ಥ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ವಿಶೇಷ: ಹಿಂದೂ ರಾಷ್ಟ್ರಕ್ಕಾಗಿ ಹಿಂದೂ ಸಂಘಟನೆ !

ಗೋವಾ : ಹಿಂದೂ ಧರ್ಮದ ಮೇಲೆ ‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಮೂಲಕ ದಾಳಿ ಮಾಡಲಾಗುತ್ತಿದೆ. ಮುಸ್ಲಿಮರು ನಮ್ಮ ಮೇಲೆ ದಾಳಿ ಮಾಡಿ ಸಾವಿರಾರು ವರ್ಷಗಳ ಕಾಲ ಆಳಿದರು. ಹಿಂದೂ ಸಂಸ್ಕೃತಿಯನ್ನು ನಾಶ ಮಾಡಲು ಯತ್ನಿಸಿದರು. ಕ್ರೈಸ್ತ ಆಕ್ರಮಣಕಾರರು ಹಿಂದೂ ಧರ್ಮದ ಮೇಲೆ ದಾಳಿ ಮಾಡಿದರು ಮತ್ತು ಇಂದಿಗೂ ಅದನ್ನು ಮುಂದುವರೆಸಿದ್ದಾರೆ. ಭಾರತದ ಬಡ ಬುಡಕಟ್ಟು ಜನರನ್ನು ಗುರಿಯಾಗಿಸಿಕೊಂಡು ಮತಾಂತರ ಮಾಡಿದರು. ಇಂದು ಬುಡಕಟ್ಟು ಸಮುದಾಯದ ಮಕ್ಕಳನ್ನು ಗುರಿಯಾಗಿಸಿಕೊಂಡು ಮತಾಂತರ ಮಾಡುತ್ತಿದ್ದಾರೆ. ಒಂದು ರೀತಿಯಲ್ಲಿ ಅವರು ಸೈದ್ಧಾಂತಿಕ ಭಯೋತ್ಪಾದನೆಯನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಹೋಗಲಾಡಿಸಲು ಹಿಂದೂಗಳು ಮನೆಯಲ್ಲಿ ವೇದ, ಉಪನಿಷತ್ತು ಮತ್ತು ಗೀತೆಗಳನ್ನು ಅಧ್ಯಯನ ಮಾಡಬೇಕು.

ಅಂಧಶ್ರದ್ಧಾ ನಿರ್ಮೂಲನಾ ಸಮಿತಿ ಹಿಂದೂ ಧರ್ಮದ ಮೇಲೆಯೇ ದಾಳಿ ನಡೆಸುತ್ತಿದೆ. ಅವರು ಕೇವಲ ಹಿಂದೂ ಸಂತರನ್ನು ಗುರಿ ಮಾಡುತ್ತಿದ್ದಾರೆ. ಹಿಂದೂ ಸಮಾಜವು ಜಾತಿಗಳಾಗಿ ವಿಭಜನೆಗೊಂಡಿದೆ. ನಾವೆಲ್ಲರೂ ಹಿಂದೂ ಎಂದು ಒಂದಾಗಬೇಕು. ಇಂದು ಹಿಂದೂ ಯುವಕರನ್ನು ಜಾಗೃತಗೊಳಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ಹೇಳಿದರು.