ಧರ್ಮಕಾರ್ಯಕ್ಕಾಗಿ ಕೊಡುಗೆ ನೀಡಿದರೆ ಮಾತ್ರ ಜೀವನ ಸಾರ್ಥಕ ! – ಮಹಾಮಂಡಲೇಶ್ವರ ನರ್ಮದಾ ಶಂಕರಪುರಿಜಿ ಮಹಾರಾಜ, ನಿರಂಜನಿ ಆಖಾಡಾ, ಜೈಪುರ, ರಾಜಸ್ಥಾನ

ಆಧ್ಯಾತ್ಮಿಕ ಸಂಸ್ಥೆಗಳ ಮಾಧ್ಯಮದಿಂದ ಧರ್ಮಜಾಗೃತಿ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ

ಮಹಾಮಂಡಲೇಶ್ವರ ನರ್ಮದಾ ಶಂಕರಪುರಿಜಿ ಮಹಾರಾಜ

ಒಳ್ಳೆಯ ಕೆಲಸಗಳನ್ನು ಮಾಡುವಾಗ ಬರುವ ಅಡಚಣೆಗಳು ಅಂದರೆ ನಮ್ಮ ಪರೀಕ್ಷೆಯಾಗಿರುತ್ತದೆ. ಮಾರ್ಗಕ್ರಮಣ ಮಾಡುವಾಗ ಗುಂಡಿಗಳು, ಹೊಂಡಗಳು ಬರುತ್ತವೆ, ಆದರೆ ನಾವು ಅವುಗಳನ್ನು ಹೇಗೆ ದಾಟುತ್ತೇವೆ ? ಎಂಬುದು ಚಿಂತನೆಯ ವಿಷಯವಾಗಿದೆ. ಧರ್ಮಕ್ಕಾಗಿ ನಮ್ಮ ಕೊಡುಗೆ ಏನಿದೆ ? ಇದು ಚಿಂತನದ ವಿಷಯವಾಗಿದೆ. ಜಗತ್ತನ್ನು ಮೆಟ್ಟಿ ಮುಂದೆ ಹೋಗಬೇಕೋ ಅಥವಾ ಹೂವಿನ ಹಾಗೇ ಪರಿಮಳಯುಕ್ತವಾಗಿರಬೇಕೋ, ಎಂಬುದನ್ನು ನಾವು ನಿರ್ಧರಿಸಬೇಕು. ಸುಗಂಧ ಮತ್ತು ದುರ್ಗಂಧ ಇವರೆಡನ್ನೂ ಈಶ್ವರನೇ ನಿರ್ಮಿಸಿದ್ದಾನೆ; ನಾವು ಎಲ್ಲಿ ನಿಲ್ಲಬೇಕು ? ಎಂಬುದನ್ನು ನಾವು ನಿರ್ಧರಿಸಬೇಕಾಗಿದೆ. ಚರಂಡಿಯ ಪಕ್ಕದಲ್ಲಿ ನಿಂತುಕೊಂಡು ದುರ್ಗಂಧ ತೆಗೆದುಕೊಳ್ಳುವುದು ಮತ್ತು ನಂತರ ಈಶ್ವರನನ್ನು ದೂಷಿಸುವುದು, ಹೀಗೆ ಮಾಡಿದರೆ ನಡೆಯುವುದಿಲ್ಲ. ‘ಬುದ್ಧಿ ಭ್ರಷ್ಟಾಗಿದೆಯೆಂದು ತಪ್ಪಾಗಿ ನಡೆದುಕೊಂಡೆನು’, ಎಂಬಂತಹ ಕಾರಣವನ್ನು ನಾವು ನೀಡಲು ಬರುವುದಿಲ್ಲ; ಏಕೆಂದರೆ ಮನನ-ಚಿಂತನ ಮಾಡುವ ಕ್ಷಮತೆಯನ್ನೂ ಭಗವಂತನೇ ನಮಗೆ ನೀಡಿದ್ದಾನೆ. ಕೇವಲ ಕ್ಷಮಾಯಾಚನೆಯಿಂದ ನಾವು ಭಗವಂತನ ಬಳಿಗೆ ತಲುಪಬಹುದು. ಅಧೋಗತಿಗೆ ಹೋಗಬಾರದೆಂದರೆ ನಾವು ಸಾಧನೆ ಮಾಡಬೇಕು. ಯಾರಾದರೂ ಹೂವಿನ ಹಾರವನ್ನು ಹಾಕಿದರು ಅಥವಾ ಬೆನ್ನು ತಟ್ಟಿದರೂ, ಅಂದರೆ ಜೀವನ ಸಾರ್ಥಕವಾಯಿತು, ಎಂದಾಗುವುದಿಲ್ಲ. ಯಾವಾಗ ನಮ್ಮ ಬಳಿ ಇರುವ ಧರ್ಮಕಾರ್ಯವನ್ನು ಪೂರ್ಣ ಮಾಡುತ್ತೆವೆಯೋ, ಆಗ ನಮ್ಮ ಜೀವನ ಸಾರ್ಥಕವಾಗುವುದು.”

ಸನಾತನದ ಆಶ್ರಮದಲ್ಲಿ ಈಶ್ವರನ ಶಕ್ತಿಯ ಅನುಭವ ಪಡೆದೆನು !

”ನಾಮಜಪ ಮತ್ತು ಆಧ್ಯಾತ್ಮಿಕ ಊರ್ಜೆಯನ್ನು ಹೆಚ್ಚಿಸಲು ನಾವು ಸನಾತನ ಸಂಸ್ಥೆಯ ಮಾಧ್ಯಮದಿಂದ ಪ್ರಯತ್ನಿಸಬೇಕು. ಸನಾತನ ಸಂಸ್ಥೆ ಮಾಡುತ್ತಿರುವ ಕಾರ್ಯದ ತುಲನೆಯನ್ನು ಮಾಡಲು ಸಾಧ್ಯವಿಲ್ಲ. ಗೋವಾದ, ಸನಾತನದ ಆಶ್ರಮದಲ್ಲಿನ ಅಡುಗೆ ಮನೆಗೆ ಹೋದಾಗ ಅಲ್ಲಿನ ತರಕಾರಿಯ ಒಂದೊಂದು ಎಲೆಯೂ ಮಾತನಾಡುತ್ತಿತ್ತು. ಅಲ್ಲಿನ ಪರಿಸರವನ್ನು ನೋಡಿದಾಗ ಅಲ್ಲಿ ಪರಮಾತ್ಮನ ಶಕ್ತಿ ಕಾರ್ಯನಿರತವಾಗಿರುವುದರ ಅನುಭವ ನನಗೆ ಬಂದಿತು. ಈ ಬಗ್ಗೆ ನನಗೆ ಯಾರೂ ಹೇಳಲಿಲ್ಲ, ಆದರೆ ಇದರ ಅನುಭವವನ್ನು ನಾನೇ ಸ್ವತಃ ಪಡೆದಿದ್ದೇನೆ. ಕೇವಲ ಸಂಖ್ಯಾಬಲವಷ್ಟೇ ಅಲ್ಲ, ಸ್ಥಾನಮಾನವೂ ಮಹತ್ವದ್ದಾಗಿದೆ,” ಎಂದು ಈ ಸಮಯದಲ್ಲಿ ಮಹಾಮಂಡಲೇಶ್ವರ ನರ್ಮದಾ ಶಂಕರಪುರಿಜಿ ಮಹಾರಾಜರು ಉದ್ಘರಿಸಿದರು.