Chief Minister Siddaramaiah’s Appeal : ರಾಜ್ಯದಲ್ಲಿ ಪ್ರತಿಯೊಬ್ಬರೂ ಕನ್ನಡ ಬಿಟ್ಟು ಬೇರೆ ಭಾಷೆಯನ್ನು ಮಾತನಾಡುವುದಿಲ್ಲ, ಎಂದು ಪ್ರತಿಜ್ಞೆ ಮಾಡಬೇಕು ! – ಮುಖ್ಯಮಂತ್ರಿ ಸಿದ್ಧರಾಮಯ್ಯ

ಸಿದ್ದರಾಮಯ್ಯ ಇವರಿಂದ ಮನವಿ !

ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು – ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡದಲ್ಲಿಯೇ ಮಾತನಾಡಲು ಪ್ರಯತ್ನಿಸಬೇಕು. ಕನ್ನಡವನ್ನು ಹೊರತುಪಡಿಸಿ ಬೇರೆ ಯಾವುದೇ ಭಾಷೆ ರಾಜ್ಯದಲ್ಲಿ ಮಾತನಾಡುವುದಿಲ್ಲ ಎಂದು ಎಲ್ಲರೂ ಪ್ರತಿಜ್ಞೆ ಮಾಡಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಕರೆ ನೀಡಿದ್ದಾರೆ. ಕರ್ನಾಟಕ ವಿಧಾನಮಂಡಳದ ಪಶ್ಚಿಮ ದ್ವಾರದ ಹತ್ತಿರ ಸ್ಥಾಪಿಸಲಾಗಿರುವ ನಾಡದೇವಿ ಭುವನೇಶ್ವರಿ ಮಾತೆಯ ಪ್ರತಿಮೆ ಉದ್ಘಾಟನೆ ಮಾಡುತ್ತಿರುವಾಗ ಅವರು ಮಾತನಾಡುತ್ತಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ಮುಂದುವರಿಸುತ್ತಾ, ಕನ್ನಡಿಗರು ಉದಾರವಾದಿಯಾಗಿರುವುದರಿಂದ `ಕನ್ನಡ ಭಾಷೆ ಬರದಿದ್ದರೂ, ಇತರ ಭಾಷೆಯನ್ನು ಮಾತನಾಡಿ ನಾವು ಕರ್ನಾಟಕದಲ್ಲಿ ಬದುಕಬಹುದು’, ಎನ್ನುವ ವಾತಾವರಣ ನಿರ್ಮಾಣವಾಗಿದೆ. ಇದೇ ಪರಿಸ್ಥಿತಿ ನಿಮಗೆ ತಮಿಳುನಾಡು, ಆಂಧ್ರಪ್ರದೇಶ ಅಥವಾ ಕೇರಳಗಳಲ್ಲಿ ಕಾಣಿಸುವುದಿಲ್ಲ. ಅಲ್ಲಿ ಕೇವಲ ಅವರ ಮಾತೃಭಾಷೆಯಲ್ಲಿ ಮಾತನಾಡಲಾಗುತ್ತದೆ. ಅದಕ್ಕಾಗಿಯೇ ನಾವೂ ಕೂಡ ನಮ್ಮ ಮಾತೃಭಾಷೆಯಲ್ಲಿಯೇ ಮಾತನಾಡುವುದು ಅವಶ್ಯಕವಾಗಿದೆ. ಇದೇ ನಮಗೆ ಅಭಿಮಾನದ ವಿಷಯವಾಗಿರುವುದು. ರಾಜ್ಯದಲ್ಲಿ ಕನ್ನಡ ವಾತಾವರಣ ನಿರ್ಮಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆದ್ದರಿಂದ ಇಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡದಲ್ಲಿಯೇ ಮಾತನಾಡಬೇಕು. ಕನ್ನಡ ಭಾಷೆಯ ಬಗ್ಗೆ ಆತ್ಮೀಯತೆ ಹೆಚ್ಚಿಸಬೇಕು. ಕನ್ನಡ ಭಾಷೆಯೊಂದಿಗೆ ನಮ್ಮ ದೇಶ, ನಮ್ಮ ಭೂಮಿಯ ಬಗ್ಗೆಯೂ ಪ್ರತಿಯೊಬ್ಬರೂ ಅಭಿಮಾನ ಹೊಂದಬೇಕು ಎಂದು ಅವರು ಅಪೇಕ್ಷೆಯನ್ನು ವ್ಯಕ್ತಪಡಿಸಿದರು.

ಸಂಪಾದಕೀಯ ನಿಲುವು

ದೇಶದ ಭಾಷಾವಾರು ಪ್ರಾದೇಶಿಕ ರಚನೆಯಾದ ಬಳಿಕ ಪ್ರತಿಯೊಬ್ಬರು ಯಾವ ರಾಜ್ಯದಲ್ಲಿ ವಾಸಿಸುತ್ತಾರೆಯೋ, ಅಲ್ಲಿಯ ಅಧಿಕೃತ ಭಾಷೆ ಕಲಿಯಬೇಕು ಮತ್ತು ಮಾತನಾಡಬೇಕು ಎಂದು ನಿರೀಕ್ಷಿಸುವುದು ಎಂದಿಗೂ ತಪ್ಪಾಗುವುದಿಲ್ಲ; ಆದರೆ ದಬ್ಬಾಳಿಕೆ ಆಗಬಾರದು ಮತ್ತು ಯಾರ ಮೇಲೆ ದೌರ್ಜನ್ಯ ಎಸಗುವ ಕಾರಣವಾಗಲು ಸಾಧ್ಯವಿಲ್ಲ.