Blood Water Kokti Lake : ಭಟ್ಕಳದ ಪವಿತ್ರ ಕೊಕತಿ ಕೊಳದಲ್ಲಿ ರಕ್ತ ಮಿಶ್ರಿತ ನೀರು !

ಬಕರೀದ್ ದಿನ ನಡೆದ ಪ್ರಾಣಿ ಹತ್ಯೆಯ ಪರಿಣಾಮ

ಕಾರವಾರ – ಹಿಂದೂ ಸಮಾಜಕ್ಕೆ ಪವಿತ್ರವಾಗಿದ್ದ ಭಟ್ಕಳದ ಕೊಕತಿ ಕೊಳದಲ್ಲಿ ರಕ್ತ ಮಿಶ್ರಿತ ನೀರು ಹರಿಯುತ್ತಿದೆ. ಬಕರೀದ್ ಹಿನ್ನೆಲೆಯಲ್ಲಿ ನಗರದ ಅಕ್ಕಪಕ್ಕದ ಮನೆಯಿಂದ ಮೇಕೆಯ ಮತ್ತು ಇತರೆ ಪ್ರಾಣಿಗಳ ರಕ್ತ ಚರಂಡಿಯಿಂದ ಹರಿಯುತ್ತಾ ಪವಿತ್ರ ಕೊಕತಿ ಕೊಳದ ನೀರಿನಲ್ಲಿ ಮಿಶ್ರಿತವಾಗಿದೆ. ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದ ಕೊಕತಿ ಕೊಳದಲ್ಲಿ ರಕ್ತ ಮಿಶ್ರಿತ ನೀರು ನೋಡಿ ಹಿಂದೂ ಸಮಾಜ ಆಕ್ರೋಶಗೊಂಡಿದೆ.

1. ಈ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಆ ಸ್ಥಳಕ್ಕೆ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದರು. ವಿಶೇಷವಾಗಿ ಗೊಂಡ ಸಮುದಾಯಕ್ಕೆ ಪವಿತ್ರವಾಗಿರುವಈ ಕೊಳ ಮಾಲಿನ್ಯಗೊಳಿಸಿರುವುದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಂತಾಗಿದೆ.

2. ಈ ಘಟನೆ ಮಾಹಿತಿ ಪಡೆದ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಚರಂಡಿ ನಿರ್ಮಾಣ ಪ್ರಾಧಿಕಾರ ಅಧಿಕಾರಿಗಳು ಮೊದಲು ಕೊಳಕ್ಕೆ ರಕ್ತ ಮಿಶ್ರಿತ ನೀರು ಬರುವುದನ್ನು ತಡೆದರು. ನಂತರ, ಚರಂಡಿಯಲ್ಲಿ ಸಂಗ್ರಹವಾದ ರಕ್ತ ಮಿಶ್ರಿತ ನೀರನ್ನು ನೀರಿನ ಟ್ಯಾಂಕ್‌ ಮಾಧ್ಯಮದಿಂದ ಬೇರೆ ಕಡೆಗೆ ಒಯ್ದು ಚೆಲ್ಲಿದರು.

3. ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಹಿಂದೂಗಳಿಗೆ ಪವಿತ್ರವಾಗಿರುವ ಕೊಕತಿ ಕೊಳ

ಕೊಕತಿ ಕೊಳದ ಬದಿಯಲ್ಲಿ ಗೊಂಡ ಸಮುದಾಯದವರ ದೇವಸ್ಥಾನವಿದೆ. ಈ ಸ್ಥಳದಲ್ಲಿ ಪ್ರತಿ ವರ್ಷ ಗೊಂಡ ಸಮಾಜದ ಜಾತ್ರೆ ನಡೆಯುತ್ತದೆ. ಇಲ್ಲಿನ ದೇವಸ್ಥಾನದಲ್ಲಿ ಈ ಸಮಾಜದ ಜನರು ಹರಕೆ ಹೊರುತ್ತಾರೆ. ಇದರಿಂದ ದೇವಸ್ಥಾನ ಮತ್ತು ಅದರ ಪಕ್ಕದಲ್ಲಿರುವ ಈ ಕೆರೆಯು ಹಿಂದೂಗಳಿಗೆ ಪೂಜನೀಯವಾಗಿದೆ.

ಸಂಪಾದಕೀಯ ನಿಲುವು

ಗಣೇಶೋತ್ಸವದ ವೇಳೆ ಹಿಂದೂಗಳು ಹರಿಯುವ ನೀರಿನಲ್ಲಿ ಶ್ರೀ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿದರೆ ಪರಿಸರ ಮಾಲಿನ್ಯವಾಗುತ್ತದೆ ಎಂದು ಗಲಾಟೆ ಮಾಡುವ ತಥಾಕಥಿತ ಪರಿಸರವಾದಿಗಳು ಈಗ ಯಾವ ಬಿಲದಲ್ಲಿ ಅಡಗಿ ಕುಳಿತಿದ್ದಾರೆ ?