INSTC Corridor : ಭಾರತ- ರಷ್ಯಾ ನಡುವಿನ ಅಂತರಾಷ್ಟ್ರೀಯ ಹೆದ್ದಾರಿಯಲ್ಲಿ ಪಾಕಿಸ್ತಾನ ಸೇರ್ಪಡೆ !

ಭಾರತದಿಂದ ವಿರೋಧ

ರಷ್ಯಾದಲ್ಲಿ ಪಾಕಿಸ್ತಾನದ ರಾಯಭಾರಿ ಖಾಲಿದ್ ಜಮಾಲಿ

ಮಾಸ್ಕೋ (ರಷ್ಯಾ) – ಭಾರತ ಮತ್ತು ರಷ್ಯಾ ನಡುವೆ ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಹೆದ್ದಾರಿ’ (ಇಂಟರನ್ಯಾಶನಲ್ ನಾರ್ಥ-ಸೌಥ್ ಟ್ರಾನ್ಸಪೋರ್ಟ ಕಾರಿಡಾರ್) ನಿರ್ಮಿಸಲಾಗುತ್ತಿದೆ. ಈ ಯೋಜನೆಯಲ್ಲಿ ರಷ್ಯಾ ಪಾಕಿಸ್ತಾನವನ್ನು ಸೇರಿಸಲು ನಿರ್ಧರಿಸಿದೆ. ರಷ್ಯಾದಲ್ಲಿ ಪಾಕಿಸ್ತಾನದ ರಾಯಭಾರಿ ಖಾಲಿದ್ ಜಮಾಲಿ ಇದನ್ನು ಖಚಿತಪಡಿಸಿದರು.

1. 7 ಸಾವಿರದ 200 ಕಿ.ಮೀ ಉದ್ದದ ಈ ಹೆದ್ದಾರಿಯು ಉತ್ತರ ಯುರೋಪ್, ಅಝರಬೈಜಾನ್ ಮತ್ತು ಇರಾನ್ ಈ ಮಾರ್ಗದಿಂದ ಭಾರತ ಮತ್ತು ರಷ್ಯಾವನ್ನು ಸಂಪರ್ಕಿಸಲಿದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಸಮಯ ಮತ್ತು ಹಣದ ಉಳಿತಾಯವಾಗಲಿದೆ. ಈ ಯೋಜನೆಯಲ್ಲಿ ಚೀನಾ-ಪಾಕಿಸ್ತಾನದ ನಡುವಿನ ಉದ್ದೇಶಿತ ‘ಚೀನಾ ಪಾಕಿಸ್ತಾನ ಆರ್ಥಿಕ ಹೆದ್ದಾರಿ’ ಅನ್ನು ಕೂಡ ಸೇರಿಸಲಾಗಿದೆ. ಚೀನಾ-ಪಾಕಿಸ್ತಾನ ಆರ್ಥಿಕ ಹೆದ್ದಾರಿಯು ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗುತ್ತದೆ. ಹಾಗಾಗಿ ಭಾರತ ಈ ಯೋಜನೆಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದೆ.

2. ಪಾಕ್ ರಾಯಭಾರಿ ಜಮಾಲಿ ಮಾತನಾಡಿ, ಪಾಕಿಸ್ತಾನವು ರಷ್ಯಾದಿಂದ 10 ಲಕ್ಷ ಟನ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಈ ವ್ಯವಹಾರವನ್ನು ಪಾಕಿಸ್ತಾನವು ಮುಂದುವರಿಸಲಿದೆ. ಹೊಸ ಹೆದ್ದಾರಿಯಿಂದಾಗಿ ಪಾಕಿಸ್ತಾನಕ್ಕೆ ಹೊಸ ಮಾರುಕಟ್ಟೆ ಸಿಗಲಿದ್ದು, ಹಾಗೆಯೇ ರಷ್ಯಾ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಸುಧಾರಿಸಲಿದೆ ಎಂದರು.

3. ಈ ಎರಡು ಹೆದ್ದಾರಿಗಳನ್ನು ಸಂಪರ್ಕಿಸುವುದು ಭಾರತದ ಯೋಜನೆಗೆ ದೊಡ್ಡ ಹೊಡೆತ ಮತ್ತು ಪಾಕಿಸ್ತಾನಕ್ಕೆ ದೊಡ್ಡ ಲಾಭವಾಗಲಿದೆ ಎಂದು ತಜ್ಞರು ಹೇಳುತ್ತಾರೆ. ಪಾಕಿಸ್ತಾನಕ್ಕೆ ಎರಡೂ ಹೆದ್ದಾರಿಗಳಿಂದ ಲಾಭವಾಗಲಿದ್ದು, ಭಾರತದ ಮಿತ್ರ ದೇಶವಾಗಿರುವ ರಷ್ಯಾದೊಂದಿಗೆ ಪಾಕಿಸ್ತಾನ ಸಂಪರ್ಕ ಸಾಧಿಸಲಿದೆ. ಈ ಯೋಜನೆಯ ನಂತರ ಎರಡೂ ದೇಶಗಳು ಹತ್ತಿರವಾಗಲಿವೆ ಎಂದು ಹೇಳಲಾಗಿದೆ.

4. ತಜ್ಞರ ಪ್ರಕಾರ, ಒಂದು ವೇಳೆ ಪಾಕಿಸ್ತಾನವು ಭಾರತ-ರಷ್ಯಾ ನಡುವಿನ ಹೆದ್ದಾರಿ ಯೋಜನೆಯಲ್ಲಿ ಸೇರಿದರೆ, ಅದು ಅಮೇರಿಕದ ಅಸಮಾಧಾನವನ್ನು ಎದುರಿಸಬೇಕಾಗುತ್ತದೆ ಅಲ್ಲದೇ ಅಫ್ಘಾನಿಸ್ತಾನ ಮತ್ತು ಇರಾನ್‌ ದೇಶಗಳಿಂದಲೂ ಪಾಕಿಸ್ತಾನಕ್ಕೆ ವಿರೋಧ ವ್ಯಕ್ತವಾಗುತ್ತದೆ.

ಸಂಪಾದಕೀಯ ನಿಲುವು

ರಷ್ಯಾ ಭಾರತದ ಮಿತ್ರದೇಶವಾಗಿದ್ದರೂ, ಅದು ಉದ್ದೇಶಪೂರ್ವಕವಾಗಿ ಪಾಕಿಸ್ತಾನವನ್ನು ಸೇರಿಸಿಕೊಂಡು ಭಾರತಕ್ಕೆ ನೋವನ್ನುಂಟುಮಾಡುತ್ತಿದೆ ಎಂಬುದು ಸ್ಪಷವಾಗಿದೆ. ಅಂತಹ ದೇಶವು ನಮ್ಮ ಸ್ನೇಹಿತನಾಗಲು ಸಾಧ್ಯವಿಲ್ಲ ಎಂಬುದನ್ನು ಅರಿತು ಭಾರತವು ರಷ್ಯಾದೊಂದಿಗೆ ನೀತಿಯುತವಾಗಿ ವ್ಯವಹರಿಸಬೇಕು.