|
ಜಳಗಾಂವ, ಜೂನ್ 22 (ಸುದ್ದಿ) – ಗೋಹತ್ಯೆ ಮತ್ತು ಅಕ್ರಮ ಮಾಂಸವನ್ನು ಸಂಗ್ರಹಿಸಿದ್ದ ಎರಡು ವಿವಿಧ ಪ್ರಕರಣಗಳಲ್ಲಿ 7 ಮಂದಿ ಮತಾಂಧರನ್ನು ನಗರ ಮತ್ತು ಶನಿಪೇಠ ಪೊಲೀಸರು ಜೂನ್ 18 ರಂದು ಬಂಧಿಸಿದ್ದರು. ಅವರಿಗೆ ಜೂನ್ 21 ರಂದು ಜಿಲ್ಲಾ ನ್ಯಾಯಾಲಯದಲ್ಲಿ ಹಾಜರುಪಡಿಸುತ್ತಿರುವಾಗ, ಶಂಕಿತನ ವಕೀಲಪತ್ರವನ್ನು ತೆಗೆದುಕೊಂಡಿರುವ ಕಾರಣದಿಂದ ಹಿಂದೂ ಮತ್ತು ಮುಸ್ಲಿಂ ನ್ಯಾಯವಾದಿಗಳ ನಡುವೆ ವಾಗ್ವಾದ ನಡೆಯಿತು. ಮಧ್ಯಾಹ್ನ 3 ಗಂಟೆಗೆ, 1 ರಿಂದ ಒಂದೂವರೆ ಸಾವಿರ ಮುಸಲ್ಮಾನರ ಗುಂಪು ನ್ಯಾಯಾಲಯದ ಪರಿಸರದಲ್ಲಿ ಜಮಾಯಿಸಿದರು ಮತ್ತು ಹಿಂದೂ ನ್ಯಾಯವಾದಿಗಳೊಂದಿಗೆ ಜಗಳವಾಡಿದರು. ಎದುರುಬದುರು ಬಂದು ಪರಸ್ಪರ ಕೂಗಾಡಿದ್ದರಿಂದ ಉದ್ವಿಗ್ನತೆಯ ವಾತಾವರಣ ನಿರ್ಮಾಣವಾಯಿತು. ಈ ಘಟನೆಯ ಮಾಹಿತಿ ದೊರೆತಕೂಡಲೇ ಪೊಲೀಸರು ಗುಂಪನ್ನು ಚದುರಿಸಲು ಲಾಠಿಚಾರ್ಜ್ ಮಾಡಿದ್ದಾರೆ. ಈ ಸಮಯದಲ್ಲಿ ಗೊಂದಲ ಮತ್ತು ವಾಗ್ದಾದ ಹಾಕಿದ ಮತಾಂಧರನ್ನು ವಶಕ್ಕೆ ಪಡೆಯದೇ ಪೊಲೀಸರು ಕೆಲವು ಹಿಂದೂ ಯುವಕರನ್ನೇ ಪೊಲೀಸ ಠಾಣೆಗೆ ಒಯ್ದರು. ಇದರಿಂದ ಹಿಂದುತ್ವನಿಷ್ಠರು ಅಸಮಾಧಾನಗೊಂಡಿದ್ದು, ಹಾಗೆಯೇ ಹಿಂದೂ ವಿಧೀಜ್ಞ ಪರಿಷತ್ತಿನ ನ್ಯಾಯವಾದಿ ನಿರಂಜನ ಚೌಧರಿಯವರಿಗೆ ಮತಾಂಧ ನದೀಮ್ ಗಫ್ಫಾರ ಮಲಿಕ್ ಜೀವ ಬೆದರಿಕೆ ಹಾಕಿದ್ದಾನೆ. ಅವನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಈ ಉದ್ಧಟ ಮತಾಂಧನ ವಿರುದ್ಧ ದಾಖಲಿಸಲಾಗದ ಅಪರಾಧ ನೊಂದಾಯಿಸಿದ್ದಾರೆ. (ವಾಸ್ತವವಾಗಿ, ಪೊಲೀಸರು ಈ ಉದ್ಧಟ ಮತಾಂಧರ ವಿರುದ್ಧ ಅಪರಾಧವನ್ನು ದಾಖಲಿಸಿ ಕಠಿಣ ಕ್ರಮ ತೆಗೆದುಕೊಳ್ಳುವುದು ಅಪೇಕ್ಷಿತವಿತ್ತು! – ಸಂಪಾದಕರು)
Jalgaon Cow Slaughter Case; Hindu Vidhidnya Parishad advocate Niranjan Chaudhary threatened by fanatics in court premises!
Dispute among advocates over taking up the case of the suspected accused.
Police suppress Hindus instead of booking the fanatics !
Are the police, who… pic.twitter.com/n4lXaWYZzk
— Sanatan Prabhat (@SanatanPrabhat) June 22, 2024
ಹಿಂದೂಗಳ ಒತ್ತಡದ ನಂತರ ಪೊಲೀಸರಿಂದ ದೂರು ದಾಖಲು, ಹಾಗೆಯೇ ಸುಳ್ಳು ಆರೋಪ ಮಾಡಿ ಮತಾಂಧರಿಂದ ದೂರು ದಾಖಲು !
ಗೋಹತ್ಯೆ ಪ್ರಕರಣದ ಶಂಕಿತ ಆರೋಪಿಗಳಿಗೆ ನ್ಯಾಯಮೂರ್ತಿ ಎಂ.ಎಂ. ಬಢೆ ಇವರ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಯಿತು. ಆ ಸಮಯದಲ್ಲಿ ಹಿಂದೂ ವಿಧೀಜ್ಞ ಪರಿಷತ್ತಿನ ನ್ಯಾಯವಾದಿ ನಿರಂಜನ ಚೌಧರಿ ಶಂಕಿತ ಆರೋಪಿಗಳ ನ್ಯಾಯವಾದಿ ಮಜಹರ ಪಠಾಣ ಇವರೊಂದಿಗೆ ಮಾತನಾಡುತ್ತಿದ್ದರು. ಆ ಸಮಯದಲ್ಲಿ ಮತಾಂಧ ನದೀಮ ಗಫ್ಫಾರ ಮಲಿಕ ಮಧ್ಯದಲ್ಲಿ ಮಾತನಾಡಿದ. ನ್ಯಾಯವಾದಿ ಚೌಧರಿಯವರು ಅವನಿಗೆ ‘ಮಧ್ಯದಲ್ಲಿ ಮಾತನಾಡಬೇಡ’ ಎಂದು ಹೇಳಿದಾಗ ಮತಾಂಧ ನದೀಮನು `ತೂ ಬಹುತ ಜಾದಾ ಉಡ ರಹಾ ಹೈ, ತುಝೆ ದೇಖನಾ ಪಡೆಗಾ’ ವಕೀಲ ಹೈ ನಾ, ತೂ ಕೋರ್ಟ ಕೆ ಬಾಹರ ನಿಕಲ ತುಝೆ ದೇಖತಾ ಹೂ ಔರ್ ಕಾಟ್ ಡಾಲುಂಗಾ !’(ಹೆಚ್ಚು ಹಾರಾಡುತ್ತಿದಿಯಾ, ನಿನಗೊಂದು ಕೈ ನೋಡಿಕೊಳ್ಳುತ್ತೇನೆ, ವಕೀಲ ಆಗಿದ್ದೀಯಾ ಕೋರ್ಟನ ಹೊರಗೆ ಬಾ, ನಿನ್ನ ನೋಡಿಕೊಳ್ಳುವೆ ಮತ್ತು ಕತ್ತರಿಸಿ ಹಾಕುವೆ !’) ಎಂದು ಬೆದರಿಕೆ ಹಾಕಿದನು. ಆ ಸಮಯದಲ್ಲಿ ಅಲ್ಲಿ ನೆರೆದಿದ್ದ ಹಿಂದುತ್ವನಿಷ್ಠರು ನ್ಯಾಯವಾದಿ ಚೌಧರಿ ಇವರಿಗೆ ರಕ್ಷಣೆ ನೀಡಿದರು.
ಸಂಪಾದಕೀಯ ನಿಲುವು
|