Bhojshala ASI Survey : ಮಧ್ಯಪ್ರದೇಶದ ಭೋಜಶಾಲೆಯ ಉತ್ಖನನದಲ್ಲಿ ಭಗವಾನ್ ಶ್ರೀಕೃಷ್ಣನ ವಿಗ್ರಹ ಪತ್ತೆ

ಧಾರ (ಮಧ್ಯಪ್ರದೇಶ) – ಇಂದೋರ್ ಉಚ್ಚನ್ಯಾಯಾಲಯದ ಆದೇಶದಂತೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎ.ಎಸ್‌.ಐ.) ಕಳೆದ 3 ತಿಂಗಳಿಂದ ಇಲ್ಲಿನ ಭೋಜಶಾಲೆಯ ಸಮೀಕ್ಷೆ ನಡೆಸುತ್ತಿದೆ. ಈ ಅವಧಿಯಲ್ಲಿ ತಂತ್ರಜ್ಞಾನದ ಸಹಾಯದಿಂದ 25 ಅಡಿಗಳಷ್ಟು ಮಣ್ಣನ್ನು ತೆಗೆದು ಪುರಾತನ ಅವಶೇಷಗಳು ಮತ್ತು ವಿಗ್ರಹಗಳನ್ನು ತೆಗೆಯಲಾಯಿತು. ಜೂನ್ 20, 2024 ರಂದು, ಅಂದರೆ ಸಮೀಕ್ಷೆಯ 91 ನೇ ದಿನದಂದು, ಶ್ರೀಕೃಷ್ಣನ ಒಂದೂವರೆ ಅಡಿಯ ವಿಗ್ರಹವು ಸಿಕ್ಕಿದೆ. ಅದರೊಂದಿಗೆ ಇತರೆ 2 ಪುರಾತನ ಕಲಾಕೃತಿಗಳು ಪತ್ತೆಯಾಗಿವೆ. ಒಂದು ಕಲಾಕೃತಿಯಲ್ಲಿ ಸನಾತನ ಧರ್ಮದ ಚಿನ್ಹೆಗಳಿವೆ ಹಾಗೆಯೇ ಇನ್ನೊಂದು ಕಲಾಕೃತಿಯಲ್ಲಿ ಬಲ ಮತ್ತು ಎಡ ಬದಿಗಳಲ್ಲಿ ಯಕ್ಷರನ್ನು ಕೆತ್ತಿರುವುದು ಇದೆ.

ಸಂಪಾದಕೀಯ ನಿಲುವು

ಭೋಜಶಾಲೆ ಹಿಂದೂಗಳ ದೇವಾಲಯ ಮತ್ತು ವಿದ್ಯಾಲಯವಾಗಿತ್ತು, ಇದು ಇಲ್ಲಿಯವರೆಗೆ ಮಾಡಿದ ಉತ್ಖನನದಿಂದ ಸ್ಪಷ್ಟವಾಗಿದೆ. ಈಗ ದೇಶದಲ್ಲಿ ಮುಸಲ್ಮಾನ ದಾಳಿಕೋರರು ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಿ ಅಲ್ಲಿ ಮಸೀದಿ ಕಟ್ಟಿದ್ದಾರೆ, ಎಲ್ಲಾ ಹಿಂದೂ ದೇವಾಲಯಗಳ ಸಮೀಕ್ಷೆಯನ್ನು ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಏಕಕಾಲಕ್ಕೆ ಮಾಡುವಂತೆ ಆದೇಶ ನೀಡುವುದು ಅಗತ್ಯವಾಗಿದೆ. ಇದರಿಂದ ನಿಜವಾದ ಇತಿಹಾಸ ಬೆಳಕಿಗೆ ಬರುವುದು !